ಸುದ್ದಿಗಳು

ಅಜಿತ್ ಅಭಿನಯದ ‘ನೆರ್ಕೊಂಡಾ ಪಾರ್ವಾಯ್’ ಚಿತ್ರ ಬಿಡುಗಡೆಗೆ ಡೇಟ್ ಫಿಕ್ಸ್!!

ಚೆನ್ನೈ,ಮಾ.25: 2016 ರಲ್ಲಿ ಬಾಲಿವುಡ್ ಚಿತ್ರ ಪಿಂಕ್ ಚಿತ್ರವು ಬಿಡುಗಡೆಯಾಗಿದ್ದು ಈ ಚಿತ್ರವು ಸಮಾಜದ ಸ್ವತಂತ್ರ ಮಹಿಳೆಯರಿಗೆ ಸಂಬಂಧಿಸಿದಂತೆ ಜನತೆಯ ರೂಢಿಗತ ಮನಸ್ಥಿತಿಯ ಮೇಲೆ ಕೇಂದ್ರೀಕರಿಸಿದ ಕಥೆಯಾಗಿತ್ತು. ಅಮಿತಾಭ್ ಬಚ್ಚನ್ ಮತ್ತು ತಾಪ್ಸಿ ಪನ್ನು ನಟಿಸಿದ ಈ ಚಿತ್ರವು ಈ ವರ್ಷ ತಮಿಳಿಗೆ ರಿಮೇಕ್ ಆಗುತ್ತಿದೆ.. ತಮಿಳು ಚಿತ್ರವನ್ನು ನೆರ್ಕೊಂಡಾ ಪಾರ್ವಾಯ್ ಎಂದು ಹೆಸರಿಸಲಾಗಿದೆ ಮತ್ತು ಆಗಸ್ಟ್ 10 ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ. ಇದು  ಬೋನಿ ಕಪೂರ್ರ ಪ್ರವೇಶವನ್ನು ಗುರುತಿಸುವ ಮೂಲಕ ಬಾಲಿವುಡ್ ನಟಿ ವಿದ್ಯಾ ಬಾಲನ್ರ ತಮಿಳು ಚೊಚ್ಚಲ  ಚಿತ್ರಎಂದು ಗುರುತಿಸಲ್ಪಡುತ್ತದೆ.

Image result for pink tamil remake

ವಕೀಲ ಪಾತ್ರದಲ್ಲಿ ಅಜಿತ್

ತಮಿಳಿನ ಸೂಪರ್ಸ್ಟಾರ್ ಅಜಿತ್ ಕುಮಾರ್, ಶ್ರದ್ಧಾ ಶ್ರೀನಾಥ್ ನಂತಹ ನಟರು ಮತ್ತು ಪತ್ರಕರ್ತ ನಟ ರಂಗರಾಜ್ ಪಾಂಡೆ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದು ತಮಿಳು ಚಲನಚಿತ್ರವನ್ನು ನಿರ್ಮಿಸಲು ಬೋನಿ ಕಪೂರ್ ನಿರ್ಧರಿಸಿದ್ದಾರೆ. ಮಾರ್ಚ್ ಆರಂಭದಲ್ಲಿ ಬಿಡುಗಡೆಯಾದ ಚಿತ್ರದ ಪೋಸ್ಟರ್, ಅಜಿತ್ ಅವರನ್ನು ಪೋಸ್ಟರ್ನಲ್ಲಿ ಬಾಲಿವುಡ್ ಅಮಿತಾಭ್ ಬಚ್ಚನ್ನ ಶೆಹ್ಷಾ  ಪಾತ್ರ ಮಾಡಿದ ವಕೀಲ ಪಾತ್ರದಲ್ಲಿ ಮಿಂಚುತ್ತಿದ್ದಾರೆ..

ತರಣ್ ಆದರ್ಶ್ ಟ್ವೀಟ್

ಚಿತ್ರ ವಿಮರ್ಶಕ ತರಣ್ ಆದರ್ಶ್ ತನ್ನ ಟ್ವಿಟರ್ ನಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.. ಇದನ್ನು ಹೈದರಾಬಾದ್ನಲ್ಲಿ ಚಿತ್ರೀಕರಿಸುತ್ತಿದ್ದಾರೆ ಮತ್ತು ಇದೀಗ ಇದು ಬಿಡುಗಡೆ ದಿನಾಂಕ ನಿಗಧಿಐಆಗಿದೆ , ಅಭಿಮಾನಿಗಳು ಅಂತಿಮವಾಗಿ ದೊಡ್ಡ ಪರದೆಯ ಮೇಲೆ ನೋಡುವಂತೆ ಕಾಯುತ್ತಿದ್ದಾರೆ.

‘ಕೆ.ಜಿ.ಎಫ್’ ಚಿತ್ರದ ತಂತ್ರಜ್ಞರಿಗೆ ಜೀ ಕನ್ನಡ ವಾಹಿನಿಯಿಂದ ಸಿಕ್ತು ಹೆಮ್ಮೆಯ ಗೌರವ

 

Tags