ಸುದ್ದಿಗಳು

ಹೈದರಾ ಬಾದ್ ನ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ‘ಪೊಗರು’ ಚಿತ್ರದ ಚಿತ್ರೀಕರಣ ಆರಂಭ

ದುಬಾರಿ ಸೆಟ್ ಹಾಕಿ ಎರಡನೇ ಹಂತದ ಚಿತ್ರೀಕರಣ ಪ್ರಾರಂಭ ಮಾಡಿದ ಚಿತ್ರತಂಡ

ಬೆಂಗಳೂರು.ಫೆ.05

‘ಅದ್ದೂರಿ’, ‘ಬಹದ್ದೂರ್’ ಹಾಗೂ ‘ಭರ್ಜರಿ’ ಚಿತ್ರಗಳ ಯಶಸ್ಸಿನ ನಂತರ ಹ್ಯಾಟ್ರಿಕ್ ಆ್ಯಕ್ಷನ್ ಪ್ರಿನ್ಸ್ ಆಗಿರುವ ಧ್ರುವ ಸರ್ಜಾ ನಟನೆಯ ನಾಲ್ಕನೆಯ ಸಿನಿಮಾ ‘ಪೊಗರು’. ‘ವಿಕ್ಟರಿ’, ‘ರನ್ನ’ ‘ಬೃಹಸ್ಪತಿ’ ಚಿತ್ರಗಳ ಖ್ಯಾತಿಯ ನಂದಕಿಶೋರ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಎರಡನೇಯ ಹಂತದ ಚಿತ್ರೀಕರಣ ಇಂದಿನಿಂದ ಹೈದರಾಬಾದ್ ನ ರಾಮೋಜಿರಾವ್ ಫಿಲ್ಮ ಸಿಟಿಯಲ್ಲಿ ಆರಂಭವಾಗಿದೆ.

ಅದ್ದೂರಿ ಸೆಟ್ ಗಳು

ಈಗಾಗಲೇ ಟೀಸರ್ ಹಾಗೂ ಪೋಸ್ಟರ್ ನಿಂದಲೇ ಭಾರೀ ಸದ್ದು ಮಾಡಿದ್ದ ಚಿತ್ರತಂಡ, ಇಂದು ರಾಮೋಜಿ ಫಿಲ್ಮ್ ಸಿಟಿಯಲ್ಲಿ ದುಬಾರಿ ಸೆಟ್ ಹಾಕಿ ಎರಡನೇ ಹಂತದ ಚಿತ್ರೀಕರಣ ಪ್ರಾರಂಭ ಮಾಡಿದ್ದು,ಚಿತ್ರದಲ್ಲಿ ಧ್ರುವ ಸರ್ಜಾ ಎರಡು ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಶುರುವಾಯಿತು ಚಿತ್ರೀಕರಣ

ಇಂದು ಬೆಳಿಗ್ಗೆ ರಾಮೋಜಿ ಫಿಲ್ಮ್ ಸಿಟಿಯ ನವದುರ್ಗೆಯ ಸೆಟ್ ನಲ್ಲಿ ನಟ ಧ್ರುವ ಹಾಗೂ ನಂದಕಿಶೋರ್ ಪೂಜೆ ನೆರವೇರಿಸುವ ಮೂಲಕ ಚಿತ್ರೀಕರಣ ಚಾಲನೆ ನೀಡಿದರು. ಈಗಾಗಲೇ ಚಿತ್ರದ ಶೂಟಿಂಗ್ ಶುರುವಾಗಿದ್ದು ರಶ್ಮಿಕಾ ಮಂದಣ್ಣ ಕೂಡ ಭಾಗಿಯಾಗಿದ್ದಾರೆ. ವಿಶೇಷವೆಂದರೆ ನಟ ರಾಘವೇಂದ್ರ ರಾಜ್ಕುಮಾರ್ ಪೋಷಕ ಪಾತ್ರಕ್ಕೆ ಜೀವ ತುಂಬಲಿದ್ದಾರೆ.

ಈ ಚಿತ್ರವು ಶಾಲೆ ಮತ್ತು ಕಾಲೇಜು ದಿನಗಳು, 20 ರ ಹರೆಯದ ಯುವಕನ ಕಥೆಯನ್ನು ಒಳಗೊಂಡಿದ್ದು, ಇದಕ್ಕಾಗಿ ಧ್ರುವ ಸರ್ಜಾ 26 ಕೆ.ಜಿ ತೂಕ ಇಳಿಸಿಕೊಂಡಿದ್ದರು. ಈಗ ಪುನಃ ಮೊದಲಿನಂತೆ ದೇಹ ಹೆಚ್ಚಿಸಿಕೊಂಡಿದ್ದಾರೆ. ಇನ್ನು ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು ಗಂಗಾಧರ್ ಬಂಡವಾಳ ಹೂಡಿದ್ದಾರೆ.

ನನ್ನ ಮೇಲೆ ಕಣ್ಣಿಟ್ಟಿರುವ ಎಲ್ಲರನ್ನು ಪ್ರೀತಿಸುತ್ತೇನೆ ಎಂದ ವನೆಸ್ಸಾ ಹಡ್ಜೆನ್ಸ್

#pogaru, #balkaninews #dhruvasarja, #nandakishor, #rashmikamandanna, #kannadasuddigalu

Tags