ಸುದ್ದಿಗಳು

‘ಪೊಗರು’ ಚಿತ್ರದ ಮೊದಲ ನೋಟಕ್ಕೆ ವೇದಿಕೆ ಸಜ್ಜು..!!!

ಮೂರು ಚಿತ್ರಗಳ ಭರ್ಜರಿ ಯಶಸ್ಸಿನ ನಂತರ ಧೃವ ಸರ್ಜಾ ಅಭಿನಯಿಸುತ್ತಿರುವ ‘ಪೊಗರು’ ಚಿತ್ರವು ಈಗಾಗಲೇ ಅನೇಕ ಕಾರಣಗಳಿಂದ ಸದ್ದು ಮಾಡುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಚಿತ್ರದ ಮೊದಲ ನೋಟ ಬಿಡುಗಡೆಯಾಗುತ್ತಿದ್ದು, ಸಿನಿ ಪ್ರೇಮಿಗಳು ಕಾತುರದಿಂದ ಈ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಬೆಂಗಳೂರು, ಆ. 08: ಹ್ಯಾಟ್ರಿಕ್ ಆ್ಯಕ್ಷನ್ ಪ್ರಿನ್ಸ್ ಧೃವ ಸರ್ಜಾ ಅಭಿನಯದ ‘ಪೊಗರು’ ಚಿತ್ರವು ಈಗಾಗಲೇ ಸಾಕಷ್ಟು ಸುದ್ದಿಗಳಿಂದ ಸದ್ದು ಮಾಡಿತ್ತು. ಇದೀಗ ಈ ಚಿತ್ರದ ಮೊದಲ ನೋಟವನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಆಗಸ್ಟ್ ಕೊನೆಯ ವಾರದಂದು ಮೊದಲ ನೋಟ

‘ಪೊಗರು’ ಚಿತ್ರದ ಎರಡನೇ ಹಂತದ ಚಿತ್ರೀಕರಣವು ಆಗಸ್ಟ್ ತಿಂಗಳ ಕೊನೆಯ ವಾರದಂದು ಶುರುವಾಗಲಿದೆ. ಇದಕ್ಕೆ ಮುನ್ನ ಚಿತ್ರತಂಡವು ತನ್ನ ಚಿತ್ರದ ಮೊದಲ ನೋಟವನ್ನು ಬಿಡುಗಡೆ ಮಾಡಲಿದೆ.

ಶಾಲಾ ಹುಡುಗನಾದ ‘ಧೃವ’

ನಂದಕಿಶೋರ್ ನಿರ್ದೇಶನವಿರುವ ಈ ಚಿತ್ರದಲ್ಲಿ ಧೃವ ಸರ್ಜಾ ಶಾಲಾ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಹೀಗಾಗಿ ಧ್ರುವಾ ಬರೊಬ್ಬರಿ 30ಕೆಜಿ ತೂಕ ಇಳಿಸಿಕೊಂಡಿದ್ದರು. ಇದೀಗ ಆ ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು, ಚಿತ್ರತಂಡ ಆ ನೋಟವನ್ನು ಬಿಡುಗಡೆ ಮಾಡಲು ತಯಾರಿ ನಡೆಸಿಕೊಂಡಿದೆ.

ವರ್ಷಕ್ಕೆರೆಡು ಸಿನಿಮಾ

ಆರು ವರ್ಷದಲ್ಲಿ ಬರೀ ಮೂರು ಚಿತ್ರಗಳನ್ನು ಮಾಡಿರುವ ಧೃವ ಸರ್ಜಾ ಇನ್ನು ಮುಂದೆ ವರ್ಷಕ್ಕೆ ಎರಡು ಚಿತ್ರಗಳನ್ನು ಮಾಡುವುದಾಗಿ ಹೇಳಿಕೊಂಡಿದ್ದಾರೆ. ಇದರ ನಡುವೆ ಅವರು ನಿರ್ಮಾಪಕ ಉದಯ್ ಮೆಹ್ತಾ ಜೊತೆಗಿನ ಯೋಜನೆಯೊಂದರಲ್ಲಿಯೂ ಕಾಣಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ.

 

@ sunil Javali 

Tags