ಸುದ್ದಿಗಳು

ಬಾಡಿ ಬಿಲ್ಡರ್ ಮಾರ್ಗಾನೋ 69 ರೊಂದಿಗೆ ಧ್ರುವ ಸರ್ಜಾ ಬಾಡಿ ಬಿಲ್ಡ್…!!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸುತ್ತಿರುವ ‘ಪೊಗರು’ ಚಿತ್ರವು ಚಿತ್ರೀಕರಣದ ಕೊನೆಯ ಹಂತಕ್ಕೆ ಬಂದಿದೆ. ವಿಶೇಷವೆಂದರೆ, ಈ ಚಿತ್ರಕ್ಕಾಗಿ ಅವರು ಬಾಡಿಯನ್ನು ಬಿಲ್ಡ್ ಅಪ್ ಮಾಡಿಕೊಂಡಿದ್ದಾರೆ. ಅಲ್ಲದೇ ಅವರು ಶಾಲಾ ಬಾಲಕನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

ಸದ್ಯ ಈ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ಹೈದರಾಬಾದ್ ನ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ. ಇದೇ ವೇಳೆ ಧ್ರುವ ಸರ್ಜಾ ಒಂದು ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಈ ಚಿತ್ರದಲ್ಲಿ ಧ್ರುವ ಸರ್ಜಾರೊಂದಿಗೆ ರಶ್ಮಿಕಾ ಮಂದಣ್ಣ, ಮಯೂರಿ, ರಾಘವೇಂದ್ರ ರಾಜ್ ಕುಮಾರ್, ಧನಂಜಯ್, ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಚಿತ್ರಕ್ಕೆ ನಂದಕಿಶೋರ್ ನಿರ್ದೇಶಕರಾಗಿದ್ದಾರೆ.

‘ವಿಷ್ಣು ಪ್ರಿಯ’ನಿಗೆ ಜೋಡಿಯಾದ ಕಣ್ಸನ್ನೆ ಬೆಡಗಿ…!!!

#PogaruMovie #DharuvaSarja #kannadafilm, #kannadamovie, #kannadanews

Tags