ಸುದ್ದಿಗಳು

ನಿರ್ಮಾಪಕರಾಗುತ್ತಿರುವ ‘ಒಳಿತು ಮಾಡು ಮನುಸ’.. ಹಾಡಿನ ರಚನೆಕಾರ ರಿಷಿ.!!

ಈಗಾಗಲೇ ‘ಸೂರ್ಯ ದಿ ಗ್ರೇಟ್’, ‘ಮರುಭೂಮಿ’,’ಒನ್ ವೇ’, ‘ಕೋಟ್ಲಲ್ಲಪ್ಪೋ ಕೈ’ ಚಿತ್ರಗಳನ್ನು ನಿರ್ದೇಶನ ಮಾಡಿರುವ ರಿಷಿ

ಬೆಂಗಳೂರು, ಡಿ.6: ಇದುವರೆಗೂ ನಿರ್ದೇಶಕರಾಗಿ ಹಾಗೂ ಗೀತರಚನೆಕಾರರಾಗಿ ಜನಪ್ರಿಯರಾಗಿದ್ದ ರಿಷಿ ಇದೀಗ ಚಿತ್ರ ನಿರ್ಮಾಪಕರಾಗುತ್ತಿದ್ದಾರೆ.

ಹೌದು, ಈಗಾಗಲೇ ಕನ್ನಡದಲ್ಲಿ ‘ಸೂರ್ಯ ದಿ ಗ್ರೇಟ್’, ‘ಮರುಭೂಮಿ’,’ಒನ್ ವೇ,’ ‘ಕೋಟ್ಲಲ್ಲಪ್ಪೋ ಕೈ’ ಚಿತ್ರಗಳನ್ನು ನಿರ್ದೇಶನ ಮಾಡಿರುವ ರಿಷಿ, ಆನಂತರ ‘ಒಳಿತು ಮಾಡು ಮನುಸ.. ನೀನು ಇರೋದು ಮೂರು ದಿವಸ..’ ಎಂಬ ಹಾಡನ್ನು ಬರೆದು ಎಲ್ಲರ ಗಮನ ಸೆಳೆದರು. ಇದೀಗ ಅವರು ಸಿನಿಮಾವೊಂದನ್ನು ನಿರ್ಮಿಸುತ್ತಿದ್ದಾರೆ.

ಚಿತ್ರದ ನಿರ್ಮಾಣ

ರಿಷಿಯವರು ನಿರ್ಮಿಸುತ್ತಿರುವ ಹೊಸ ಚಿತ್ರಕ್ಕೆ ‘ಪಾಯಿಂಟ್ ಔಟ್’ ಎಂಬ ಶೀರ್ಷಿಕೆ ಫಿಕ್ಸ್ ಆಗಿದ್ದು, ಈ ಚಿತ್ರಕ್ಕೆ ಶಂಕರ್ ಛಾಯಾಗ್ರಹಣ, ಶ್ರೀ ಗುರು ಸಂಗೀತ ಸಂಯೋಜನೆಯ ಸೌಭಾಗ್ಯ ದೊರೆತಿದೆ. ಕುಮಾರ್ ಸಂಕಲನ ಮಾಡುತ್ತಿದ್ದಾರೆ. ಇದೊಂದು ನಾಲ್ಕು ಹುಡುಗರ ಸುತ್ತ ತಿರುಗುವ ಕಥೆಯಾಗಿದ್ದು, ಬಹುತೇಕ ಹೊಸ ಪ್ರತಿಭೆಗಳೇ ಸಿನಿಮಾದಲ್ಲಿರುತ್ತಾರೆ.

ಪಾಯಿಂಟ್ ಔಟ್..

ಈ ಚಿತ್ರವನ್ನು ರಿಷಿಯವರು ನಿರ್ಮಿಸಿವುದರೊಂದಿಗೆ ಎರಡು ಹಾಡುಗಳನ್ನು ಬರೆಯುತ್ತಿದ್ದು, ಶಂಕರ್ ಛಾಯಾಗ್ರಹಣ, ಶ್ರೀ ಗುರು ಸಂಗೀತ, ಕುಮಾರ್ ಸಂಕಲನವಿದ್ದು, ಪ್ರದೀಪ್ ಹಾಗೂ ವಿವೇಕ್ ಈ ಚಿತ್ರಕ್ಕೆ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಡಿಸೆಂಬರ್ 10 ರಂದು ಮುಹೂರ್ತ ನಡೆಯಲಿದೆ.

ಇನ್ನು ರಿಷಿಯವರು ರಚಿಸಿದ ‘ಒಳಿತು ಮಾಡು ಮನುಸ.’ ಹಾಡು ಕೇಳುಗರಿಗೆಲ್ಲರಿಗೂ ಇಷ್ಟವಾಗಿದ್ದು, ಇದು ಯೂಟ್ಯೂಬ್ ನಲ್ಲಿ ಒಟ್ಟು 1.5 ಕೋಟಿ ವೀವ್ಸ್ ಪಡೆದಿದೆ. ಇನ್ನು ಲಹರಿ ಸಂಸ್ಥೆ ಈ ಹಾಡಿನ ಹಕ್ಕನ್ನು ಏಳು ಲಕ್ಷ ನೀಡಿ ಪಡೆದಿದೆ.

Tags