ಸುದ್ದಿಗಳು

ತೆಲುಗು ವಾಹಿನಿಯ ಸಂಗೀತ ಕಾರ್ಯಕ್ರಮಕ್ಕೆ ಬೆಂಗಳೂರಿನ ಪೋಲಿಸ್ ಕಾನ್ಸ್ ಟೇಬಲ್.

ಈಗಾಗಲೇ ಹಲವಾರು ಹಾಡುಗಳ ಮೂಲಕ ಗಮನ ಸೆಳೆದಿದ್ದ ವಿ.ಸುಬ್ರಮಣಿ

ಬೆಂಗಳೂರು.ಮಾ.20: ಈ ಹಿಂದೆ ಸರಗಳ್ಳರ ಕುರಿತಂತೆ ಜಾಗೃತಿ ಮೂಡಿಸುವ ಸಲುವಾಗಿ ಒಂದು ಗೀತೆಯನ್ನು ರಚಿಸಿ ಹಾಡಿದ್ದರು. ಆನಂತರ ಎಲ್ಲರಿಂದ ಮೆಚ್ಚುಗೆಯನ್ನು ಸಹ ಪಡೆದುಕೊಂಡಿದ್ದರು. ಅವರೀಗ ಸ್ಟಾರ್ ಮಾ ವಾಹಿನಿಯ ಸೂಪರ್ ಸಿಂಗರ್ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.

ಹೌದು, ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಆರಕ್ಷಕಾ ಠಾಣೆಯಲ್ಲಿ ಪೋಲಿಸ್ ಕಾನ್ಸ್ ಟೇಬಲ್ (ಬರಹಗಾರ) ಆಗಿ ಕರ್ತವ್ಯ ನಿರ್ವಹಿಸುತ್ತಿರುವ ವಿ.ಸುಭ್ರಮಣಿ ಶಾನುಭೋಗ್ ಈಗ ಸ್ಟಾರ್ ಮಾ ವಾಹಿನಿಯ ಸೂಪರ್ ಸಿಂಗರ್ ರಿಯಾಲಿಟಿ ಕಾರ್ಯಕ್ರಮಕ್ಕೆ ಆಯ್ಕೆ ಆಗಿ ಹಾಡನ್ನು ಸಹ ಹಾಡಿದ್ದಾರೆ.

ಸರಗಳ್ಳರ ಕುರಿತು ಬರೆದಿದ್ದ ಹಾಡನ್ನು ಅವರು ಹಂಸಲೇಖಾರನ್ನು ಸ್ಪೂರ್ತಿಯಾಗಿಟ್ಟುಕೊಂಡಿದ್ದರು. ಈ ಹಾಡಿನ ಮೂಲಕ ಜನಪ್ರಿಯರಾದ ಸುಭ್ರಮಣ್ಯರವರು ಕ್ರೈಮ್ ಹಾಗೂ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆಯೂ ಹಾಡುಗಳನ್ನು ಬರೆದು ಧ್ವನಿ ನೀಡಿದ್ದರು.

ಹೀಗೆ ಶಾನುಭೋಗ್ ನಿಜಕ್ಕೂ ಪ್ರತಿಭಾವಂತ ವ್ಯಕ್ತಿಯಾಗಿದ್ದು, ಪೊಲೀಸ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು, ಅಲ್ಲಿಂದಲೇ ಸಮಾಜದ ಬಗ್ಗೆ ಸಾಕಷ್ಟು ಕಾಳಜಿ ಇಟ್ಕೊಂಡಿದ್ದಾರೆ. ಅವರಿಗೆ ಶುಭವಾಗಲಿ.

300 ವರ್ಷ ಹಳೆಯದಾದ ಮನೆಯಲ್ಲಿ ‘ಅವತಾರ್ ಪುರುಷ’ ಶೂಟಿಂಗ್

#policeconsatable, #balkaninews #kannadasuddigalu

Tags