ಸುದ್ದಿಗಳು

ದಾಳಿಂಬೆ ಹಣ್ಣು ದಿನಾ ಸೇವಿಸಿದ್ರೇ ಏನಾಗುತ್ತೇ ಗೊತ್ತೆ..?

ಬಹುಉಪಯೋಗಿ ದಾಳಿಂಬೆ ಹಣ್ಣು

ಬೆಂಗಳೂರು, ನ.16: ದಾಳಿಂಬೆ ಹಣ್ಣು ತಮ್ಮ ಮೈಪೂರ ಆರೋಗ್ಯಕರ ಹಾಗೂ ಜೌಷಧಿಯ ಗುಣಗಳನ್ನು ಹೊಂದಿದೆ. ಅದರ ಎಲೆ, ಹಣ್ಣು, ಹಣ್ಣಿನ  ಸಿಪ್ಪೆ ಹೀಗೆ ಎಲ್ಲವೂ ಒಂದಲ್ಲಾ ಒಂದು ರೀತಿಯಲ್ಲಿ ಉಪಯೋಗಕಾರಿಯೇ ಹೌದು. ದಾಳಿಂಬೆ ಹಣ್ಣು ಹಾಗೂ ಅದರ ಗಿಡದ ಉಪಯೋಗಳನ್ನು ತಿಳಿಯೋಣ ಬನ್ನಿ.

ದಾಳಿಂಬೆ ಹಣ್ಣನ್ನು ಪ್ರತಿದಿನ ಸೇವಿಸುತ್ತಿದ್ದರೆ ರಕ್ತಹೀನತೆಯಿಂದ ದೂರವಾಗಬಹುದು. ಅಲ್ಲದೆ ಇದು ಸೌಂದರ್ಯವರ್ಧಕವಾಗಿಯೂ ಕೆಲಸ ನಿರ್ವಹಿಸುತ್ತದೆ. ಪ್ರತಿನಿತ್ಯ ದಾಳಿಂಬೆ ಸೇವಿಸುವುದರಿಂದ ದೇಹದಲ್ಲಿ ರಕ್ತದ ಕೊರತೆ ನೀಗುತ್ತದೆ. ಇನ್ನೂ ಗರ್ಭಿಣಿಯರು ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಿದ್ದರೆ ಮಾರ್ನಿಂಗ್ ಸಿಕ್ ನೆಸ್, ವಾಂತಿ ಮೊದಲಾದ ಸಮಸ್ಯೆಯಿಂದ ಮುಕ್ತಿಹೊಂದಬಹುದಾಗಿದೆ.ಭೇದಿ ನಿವಾರಕವಾಗಿ

ಅಂದಹಾಗೆ ದಾಳಿಂಬೆ ಹಣ್ಣಿನ ಸಿಪ್ಪೆಯನ್ನು ಕುದಿಸಿ ಅದರ ರಸ ಸೇವಿಸಿದರೆ, ಭೇದಿಯಾಗುವುದು ನಿಲ್ಲುತ್ತದೆ. ದಾಳಿಂಬೆ ತಿಂದ ನಂತರ ಅದರ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಂಡರೆ, ಭೇದಿಯಾಗುವಾಗ ಇದರ ಕಷಾಯ ತಯಾರಿಸಿ ಕುಡಿಯಬಹುದಾಗಿದೆ.

ದಾಳಿಂಬೆ ಹೂವಿನ ಮೊಗ್ಗು

ದಾಳಿಂಬೆ ಹೂವಿನ ಮೊಗ್ಗನ್ನು ಜೇನುತುಪ್ಪದೊಂದಿಗೆ ಅರೆದು ಸೇವಿಸಿದರೆ ಭೇದಿ ನಿಲ್ಲುತ್ತದೆ. ಮೂಗಿನಿಂದ ರಕ್ತಸೋರುತ್ತಿದ್ದರೆ ದಾಳಿಂಬೆ ಹೂ ಹಾಗೂ ಗರಿಕೆ ಹುಲ್ಲಿನ ರಸ ತೆಗೆದು ದಿನಕ್ಕೆ 2 ಬಾರಿ ಸೇವಿಸಬೇಕು.

ಪದೇ ಪದೇ ವಾಂತಿಯಾಗುತ್ತಿದ್ದರೆ, ಜೌಷಧಿ ಜೊತೆ ಜೊತೆಗೆ, ದಾಳಿಂಬೆ ಹಣ್ಣಿನ ರಸವನ್ನು ಸೇವಿಸುತ್ತಿದ್ದರೆ ನಿತ್ರಾಣವಾಗುವುದನ್ನು ತಡೆಯಬಹುದಾಗಿದೆ.

Tags