ಸುದ್ದಿಗಳು

ಶೂಟಿಂಗ್ ಮುಕ್ತಾಯಗೊಳಿಸಿದ ಪೂಜಾ ಗಾಂಧಿ ಅಭಿನಯದ ‘ಸಂಹಾರಿಣಿ’

ಬೆಂಗಳೂರು, ಮೇ.23:

ಸ್ಯಾಂಡಲ್ ವುಡ್ ನ ಮಳೆ ಹುಡುಗಿ ಪೂಜಾ ಗಾಂಧಿ ಅಭಿನಯಿಸುತ್ತಿರುವ ಹಾರರ್ ಸ್ಪಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ‘ಸಂಹಾರಿಣಿ’.

‘ದುಂಡುಪಾಳ್ಯ – 3’ ಸಿನಿಮಾದ ಬಳಿಕ ಕನ್ನಡ ಸಿನಿ ಇಂಡಸ್ಟ್ರೀಯಿಂದ ಕೊಂಚ ದೂರವೇ ಉಳಿದಿದ್ದ ಪೂಜಾ ಮತ್ತೆ ‘ಸಂಹಾರಿಣಿ’ ಅವತಾರವೇತ್ತಿ ಮತ್ತೆ ತೆರೆಮೇಲೆ ಮಿಂಚಲು ರೆಡಿಯಾಗಿದ್ದಾರೆ.

ಇವತ್ತು ‘ಸಂಹಾರಿಣಿ’ ಸಿನಿಮಾದ ಕೊನೆ ದಿನದ ಶೂಟಿಂಗ್ ಕಡಬಗೆರೆ ಬಳಿ ಇರುವ ಸ್ಟುಡಿಯೋದಲ್ಲಿ ನಡೆಯಿತು. ಕೊನೆ ದಿನವಾದ ಇಂದು ಹಾರರ್ ದೃಶ್ಯಗಳನ್ನು ಶೂಟ್ ಮಾಡಲಾಯಿತು.  ಅಂದಹಾಗೇ ‘ಸಂಹಾರಿಣಿ’ ಚಿತ್ರಕ್ಕೆ ಕೆ ಜವಹಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಪೋಸ್ಟರ್ ರಿಲೀಸ್ ಮಾಡಿರುವ ಚಿತ್ರತಂಡ ಟೀಸರ್ ರಿಲೀಸ್ ಮಾಡುವ ಪ್ಲಾನ್ ಮಾಡಿದೆ.

ದರ್ಶನ್ ಮತ್ತು ಹರಿಪ್ರಿಯಾ, ಇಬ್ಬರೂ ಅಣ್ಣ-ತಂಗಿ ಎಂದ ಪ್ರಥಮ್

#balkaninews #poojagandhi #poojagandhimovies #samharinikannadamovie

 

Tags