ಸುದ್ದಿಗಳು

‘ಅರವಿಂದ ಸಮೇತಾ’ ಚಿತ್ರದ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರ ತಿಳಿಸಿದ ನಟಿ

ಹೈದ್ರಾಬಾದ್, ಜ.15: ‘ಅರವಿಂದಾ ಸಮೇತಾ’ ಚಿತ್ರದಲ್ಲಿ ನಟಿಸಿ ಗಮನ ಸೆಳೆದ ಡಸ್ಕಿ ಬ್ಯೂಟಿ ಪೂಜಾ ಹೆಗ್ಡೆ, ಪ್ರೇಕ್ಷಕರ ಗಮನ ಸೆಳೆದರು. ಜೂನಿಯರ್ ಎನ್ ಟಿಆರ್ ಸಿಕ್ಸ್ ಪ್ಯಾಕ್, ಸ್ಟನ್ನಿಂಗ್ ಫರ್ಮಾರ್ಮೆನ್ಸ್ ಹಾಗೂ ಪೂಜಾ ಹೆಗ್ಡೆಯ ನಟನೆ ಎಲ್ಲರ ಗಮನ ಸೆಳೆಯಿತು. ಪ್ರೇಕ್ಷಕರ ಗಮನ ಸೆಳೆದ ಈ ಚಿತ್ರ ಕಳೆದ ಇದೇ ಜನವರಿ 13ರಂದು ಟಿವಿಯಲ್ಲೂ ಪ್ರದರ್ಶನಕಂಡಿತು. ಚಿತ್ರ ಬಿಡುಗಡೆಯಾಗಿ ಥಿಯೇಟರ್ ನಿಂದ ಟಿವಿಗೆ ಬಂದ ಬಳಿಕ ಇದೇನಪ್ಪಾ ಮತ್ತೆ ‘ಅರವಿಂದ ಸಮೇತ’ ಚಿತ್ರದ ಬಗ್ಗೆ ಮಾತನಾಡುತ್ತಾರೆ ಎಂದುಕೊಂಡರೆ, ನಾವೀಗ ನಿಮಗೆ  ಚಿತ್ರಕ್ಕಾಗಿ ನಮ್ಮ ನಟಿ ಪೂಜಾ ಹೆಗ್ಡೆ ಪಟ್ಟ ಕೆಲವೊಂದು ಶ್ರಮದ ಬಗ್ಗೆ ಹೇಳುತ್ತೇವೆ ಕೇಳಿ .

‘ಅರವಿಂದಾ ಸಮೇತಾ’ ಚಿತ್ರದಲ್ಲಿ ಪೂಜಾ ಹೆಗ್ಡೆ ವಾಯ್ಸ್ ಡಬ್ ಮಾಡಿದ್ದು ಯಾರು?

ನಟಿ ಪೂಜಾ ಹೆಗ್ಡೆ, ‘ಅರವಿಂದಾ ಸಮೇತಾ’ ಚಿತ್ರದಲ್ಲಿ ತಾವೇ ಸ್ವತಃ ವಾಯ್ಸ್ ಡಬ್ ಮಾಡಿದ್ದಾರೆ ಎಂದು ಹಲವು ಮಂದಿ ಅಂದುಕೊಂಡಿದ್ದಾರೆ. ಆದರೆ ಆಕೆ ಡಬ್ಬಿಂಗ್ ಗಾಗಿ ಹೈದ್ರಾಬಾದ್ ಗೆ ಬಂದಿಲ್ಲ. ಅವರು ಹಿಂದಿಯಲ್ಲಿ ಬಿಡುಗಡೆಯಾಗುತ್ತಿರುವ ‘ಹೌಸ್ ಫುಲ್ 4’ ಚಿತ್ರದ ಶೂಟಿಂಗ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. ಡಬ್ಬಿಂಗ್ ಗೆ ಕಾಲಾವಕಾಶ ನೀಡುವಂತೆ ಕೋರಿದರೂ ಚಿತ್ರತಂಡ ಇದಕ್ಕೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಬೇರೆ ದಾರಿಕಾಣದ ಪೂಜಾ , ಜೈಸಾಲ್ ಮೆರ್ ನ ಹೊಟೇಲ್ ರೂಮ್ ಗೆ ಹೋದರಂತೆ. ರಾಜಸ್ಥಾನದಲ್ಲಿ ‘ಹೌಸ್ ಫುಲ್ 4’ ಚಿತ್ರದ ಶೂಟಿಂಗ್ ನಡೆಯುತ್ತಿತ್ತು.ಆದರೆ ‘ಅರವಿಂದ ಸಮೇತ’ ಚಿತ್ರಕ್ಕೆ ಧ್ವನಿ ನೀಡುವ ಸಲುವಾಗಿ ಆಕೆ ಅಲ್ಲಿನ ಡಬ್ಬಿಂಗ್ ಸ್ಟುಡಿಯೋಗೆ ಹೋಗಿ, ತಮ್ಮ ಡಬ್ಬಿಂಗ್ ಕಾರ್ಯ ಮುಗಿಸಿಕೊಟ್ಟರಂತೆ. ಈ ಕುರಿತಂತೆ ಇದೀಗ ಹೇಳಿಕೊಂಡಿರುವ ಪೂಜಾ, ಟೈಮ್ ಮ್ಯಾನೇಜ್ ಮೆಂಟ್ ಅನ್ನುವುದು ಸಿಕ್ಕಾಪಟ್ಟೆ ಅಗತ್ಯವಿದೆ. ವರ್ಕ್ ಹಾರ್ಡ್ ಆಂಡ್ ಎಂಜಾಯ್ ಎಂದಿದ್ದಾರೆ. ಕಠಿಣ ಪರಿಶ್ರಮದೊಂದಿಗೆ ಖುಷಿ ಪಡಿ ಎಂದಿರುವ ಪೂಜ ಹೆಗ್ಡೆ, ಈ ಕುರಿತಂತೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇನ್ನೂ ಪೂಜಾ ಹೆಗ್ಡೆಯ ಜೊತೆಗೆ ಜೂ.ಎನ್ ಟಿಆರ್ ಪರಿಶ್ರಮ ಕೂಡ ಚಿತ್ರದ ಗೆಲುವಿಗೆ ಕಾರಣ ಎನ್ನಬೇಕು. ಸಿಕ್ಸ್ ಪ್ಯಾಕ್ ನಲ್ಲಿ ಕಂಗೊಳಿಸಿದ್ದ ಜೂನಿಯರ್ ಎನ್ ಟಿಆರ್, ಸ್ಟನ್ನಿಂಗ್ ಫರ್ಫಾರ್ಮೆನ್ಸ್ ನೀಡಿದ್ದರು.

#poojahegde #tollywood #tollywoodmovies #juniorntr #juniorntrandpoojahegde #balkaninews

Tags