ಸುದ್ದಿಗಳು

ಚಿತ್ರಕ್ಕೆ ಪಡೆದ ಸಂಪೂರ್ಣ ಸಂಭಾವನೆ ‘ದೇವರ ನಾಡಿಗೆ’ ನೀಡಿದ ನಟಿ..

ತಿರುವನಂತಪುರ,ಆ.22: ದೇವರ ನಾಡು ಎಂದು ಕರೆಸಿಕೊಳ್ಳುವ ಕೇರಳ ಪ್ರವಾಹಕ್ಕೆ ತತ್ತರಿಸಿ ಹೋಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಈಗಾಗಲೇ ಸಾಕಷ್ಟು ನಟ ನಟಿಯರು ಪ್ರವಾಹ ಪೀಡಿತರಿಗೆ ಸಹಾಯ ಹಸ್ತ ಚಾಚಿದ್ದಾರೆ. ಈಗ ನರಳುತ್ತಿರುವ ಕೇರಳದ ಜನತೆಗೆ ನಟಿ ಪೂನಂ ಪಾಂಡೆ ಸಹಾಯ ಮಾಡಲು ಮುಂದಾಗಿದ್ದಾರೆ. ತಮ್ಮ ಚಿತ್ರದ ಪೂರ್ತಿ ಸಂಭಾವನೆಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ.

ದೇವರ ನಾಡಿಗೆ ಕಿರು ಕಾಣಿಕೆ..

ದೇವರನಾಡಿನ ಜನತೆಗೆ ಪುನರ್ ​ವಸತಿ ಕಲ್ಪಿಸಲು ಪರಿಹಾರದ ಮಹಾಪೂರವೇ  ಎಲ್ಲಾ ಕಡೆಯಿಂದ ಹರಿದು ಬರುತ್ತಿದೆ. ಈಗ ಪೂನಂ ಪಾಂಡೆ ಕೂಡ ನೆರವಿಗೆ ಧಾವಿಸಿದ್ದಾರೆ.

‘ಲೇಡಿ ಗಬ್ಬರ್ ಸಿಂಗ್’..

ಪೂನಂ, ಟಾಲಿವುಡ್ ​​ನ ‘ಲೇಡಿ ಗಬ್ಬರ್​ ಸಿಂಗ್’ ಎನ್ನುವ ಚಿತ್ರಕ್ಕೆ  ಸಹಿ ಮಾಡಿದ್ದಾರೆ. ಈಗ ಈ ಚಿತ್ರಕ್ಕೆ ಅವರು ಪಡೆಯುತ್ತಿರುವ ಸಂಪೂರ್ಣ ಸಂಭಾವನೆಯನ್ನು ಕೇರಳದ ಜನತೆಗೆ ನೀಡುತ್ತಿದ್ದಾರೆ.ತಮ್ಮ ಈ ದಾನದಿಂದ ದೇವರನಾಡಿನ ಜನತೆಗೆ ದೇವತೆಯಂತಾಗಿದ್ದಾರೆ.ಸದ್ಯ ಪೂನಂಗೆ ಅವಕಾಶಗಳು ತುಂಬಾ ಕಡಿಮೆಯಿವೆ. ಬಹಳ ದಿನಗಳ ಮೇಲೆ ಅವರಿಗೆ ‘ಲೇಡಿ ಗಬ್ಬರ್​ ಸಿಂಗ್ ‘ಚಿತ್ರದಲ್ಲಿ ನಟಿಸುವ ಅವಕಾಶ​ ಸಿಕ್ಕಿದೆ. ಆದರೂ, ಈ ಹಣವನ್ನು ಅವರು ಸಂತ್ರಸ್ತರಿಗೆ ನೀಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಈ ಚಿತ್ರಕ್ಕೆ ಅವರು ಪಡೆಯುತ್ತಿರುವ ಸಂಭಾವನೆ ಎಷ್ಟು ಎನ್ನುವುದು  ಬಹಿರಂಗ ಆಗಿಲ್ಲ. ಏನೇ ಆಗಲಿ ಪೂನಂ ಪಾಂಡೆಯ ಈ ಒಂದು ಉತ್ತಮ ಕೆಲಸಕ್ಕೆ ಶ್ಲಾಘನೆ ವ್ಯಕ್ತ ಪಡಿಸಲೇ ಬೇಕು…

 

Tags