ಸುದ್ದಿಗಳು

ಟೈಗರ್ ಸೀನನನ್ನು ಮೆಚ್ಚಿದ ವರ್ಮಾ…!

ನಿರ್ದೇಶಕ ರಾಮ್ ಗೋಪಾಲ್ ವರ್ಮಾ "ಪಾಪ್ ಕಾರ್ನ್ ಮಂಕಿ ಟೈಗರ್" ಸಿನಿಮಾ ನೋಡಿ ಟ್ವಿಟ್ ಮಾಡಿದ್ದಾರೆ...!

ಮೊನ್ನೆಯಷ್ಟೇ ತೆರೆಕಂಡ ಸುಕ್ಕಾ ಸೂರಿ ನಿರ್ದೇಶನದ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಈಗಾಗಲೇ ಪ್ರೇಕ್ಷಕರ ಊಹೆಗು ನಿಲುಕದಂತೆ ಮೂಡಿಬಂದಿದೆ. ಭಾರತದ ಖ್ಯಾತ ನಿರ್ದೇಶಕರಾದ ರಾಮ್ ಗೋಪಾಲ್ ವರ್ಮಾ ಈ ಸಿನಿಮಾವನ್ನು ವೀಕ್ಷಿಸಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಡಾಲಿ ಧನಂಜಯ್ ಹಾಗು ಸಿನಿಮಾದ ಯಶಸ್ಸಿನಬಗ್ಗೆ ಹೊಗಳಿಕೆ ನೀಡಿದ್ದಾರೆ. ಈ ಚಿತ್ರದ ಟೈಟಲ್ ಫುಲ್ ದಿಫ್ಫ್ರೆಂಟ್ ಆಗಿದ್ದು, ಸುಲಭವಾಗಿ ಯಾರಿಗೂ ಅರ್ಥ ಆಗಲ್ಲ. ಆದರೆ ರಾಮ್ ಗೋಪಾಲ್ ವರ್ಮಾ ತಮ್ಮದೇ ಶೈಲಿಯಲ್ಲಿ ಚಿತ್ರದ ಹೆಸರನ್ನು ವರ್ಣಿಸಿರುವುದು ವಿಶೇಷ.

Image

ಸಿನಿಮಾದ ಯಶಹಸ್ಸಿಗೆ ಶುಭಕೋರಿ, ನಟ ಧನಂಜಯ್ ಅವರಿಗೆ “ಪ್ರೇಕ್ಷಕರು ಚಿತ್ರಮಂದಿರದಲ್ಲಿ ಪಾಪ್‌ಕಾರ್ನ್ ತಿನ್ನುತ್ತಾ, ದೊಡ್ಡ ಪರದೆಯಲ್ಲಿ ನೀವು ಹುಲಿಯಂತೆ ಘರ್ಜಿಸುತ್ತಿರುವಾಗ, ಸಂಭ್ರಮದಲ್ಲಿ ಮಂಗನಂತೆ ಹಾರಿದ್ದಾರೆ” ಎಂದು ಟ್ವೀಟ್ ಮಾಡ್ದಿದಾರೆ . ಸೂರಿ ಸಿನಿಮಾಗಳಲ್ಲಿ ಹಲವಾರು ಕುತೂಹಲಕಾರಿ ಅಂಶಗಳು ಒಳಪಟ್ಟಿರತ್ತೆ. ಹಾಗೆ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲೂ ತಮ್ಮ ಶೈಲಿಯನ್ನು ಬಿಟ್ಟುಕೊಡದ ಸೂರಿ, ಹಲವಾರು ಪತ್ರಗಳನ್ನು ತೆರೆಯಮೇಲೆ ತಂದಿದ್ದಾರೆ.

Image result for ram gopal varma

ಈ ಸಿನಿಮಾದ ಕಥೆ ಹೇಳಲು ಬಹಳಾನೇ ಕಷ್ಟ, ತಮ್ಮ ಹಿಂದಿನ ಚಿತ್ರ “ಕೆಂಡ ಸಂಪಿಗೆ”ಯಲ್ಲಿ ಬರುವ ಕಾಗೆ ಬಂಗಾರದ ಪತ್ರ ಈ ಸಿನಿಮಾದಲ್ಲೂ ಮುಂದುವರೆದಿದೆ. ಕಥೆಗೆ ಎಲ್ಲು ಪೂರ್ಣವಿರಾಮ ಕೊಡದೆ, ಕುತೂಹಲವನ್ನು ಹುಟ್ಟಿಸಿದ್ದಾರೆ. ದಿಫ್ಫ್ರೆಂಟ್ ಮೈಂಡ್ ಸೆಟ್ ಹೊಂದಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ “ಪಾಪ್ ಕಾರ್ನ್ ಮಂಕಿ ಟೈಗರ್ ಬಗ್ಗೆ ಮೆಚ್ಚುಗೆಯ ಮಾತುಗಳ್ಳನ್ನಾಡಿರುವುದು ಸಂತಸದ ವಿಷಯ. ಹಿಂದೆ ಟಗರು ಸಿನಿಮಾಗೂ ಪ್ರಶಂಸೆ ನೀಡಿದ್ದ ರಾಮ್ ಗೋಪಾಲ್ ವರ್ಮಾ , ಸೂರಿಯವರ ಸ್ಟೈಲ್ ಗೆ ಫಿದಾ ಆಗಿದ್ದರೆ.

ಸೆಲ್ಫಿ ಬಾಯ್ ಬರ್ತ್ ಡೇ

#dananjaya #dali #sukkasuri #ramgopalvarma #kannasacinima #popcornmonkeytiger #directorsuri #balkaninews #sinisamachara

Tags