ಸುದ್ದಿಗಳು

ಸುದ್ದಿ ಮಾಡ್ತಿದೆ ‘ಪಾಪ್ಕಾರ್ನ್ ಮಂಕಿ ಟೈಗರ್’ ಟೀಸರ್

'ಒಂದೇ ಟೀಸರ್ ನಲ್ಲಿ ಬಯಲಾಯ್ತು ಡಾಲಿ ಹಲವು ಮುಖ'

ಕೆಲವು ಚಿತ್ರಗಳೇ ಹಾಗೇ,ರಿಲೀಸ್ ಮುನ್ನ ಪೋಸ್ಟರ್,ಫಸ್ಟ್ ಲುಕ್ ಟ್ರೈಲರ್ ಗಳ ಮೂಲಕ ನಿರೀಕ್ಷೆಯನ್ನ ದುಪ್ಪಟ್ಟು ಮಾಡಿರುತ್ತವೆ.ಅಂಥಹ ಸಿನ್ಮಾಗಳಲ್ಲಿ ಡಾಲಿ ನಟನೆಯ ‘ಪಾಪ್ಕಾರ್ನ್ ಮಂಕಿ ಟೈಗರ್’ ಚಿತ್ರವೂ ಒಂದು.ಪೋಸ್ಟರ್ ಹಾಗೂ ಡಾಲಿಯ ಮೊದಲ ಲುಕ್ ನಿಂದಲೇ ನಿದ್ದೆ ಕೆಡಿಸಿದ್ದ ಸೂರಿ ನಿರ್ದೇಶನದ  ಚಿತ್ರದ ಟೀಸರ್ ಇಂದು ರಿಲೀಸ್ ಆಗಿದೆ.ಈ ಹಿಂದೆ ಟಗರು ಚಿತ್ರದ ಮೂಲಕ ಸಿನಿಪ್ರಿಯರ ಮನಸ್ಸಲ್ಲಿ ಗಟ್ಟಿಯಾಗಿ ಉಳಿದಿದ್ದ ನಿರ್ದೇಶಕ ಸೂರಿ ಈ ಭಾರಿಯೂ ಸಹ ಹೊಸ ಇತಿಹಾಸ ಬರೆಯೋಕೆ ಸಜ್ಜಾದಂತಿದೆ.

ಪೋಸ್ಟರ್ ನೋಡಿದಾಗಲೇ ಇದೊಂದು ರೌಡಿಸಂ ಕಥೆ ಅನ್ನೋದು ಪಕ್ಕಾ ಆಗಿತ್ತು.ಈಗ ರಿಲೀಸ್ ಆಗಿರೋ ಚಿತ್ರದ ಟೀಸರ್ ನಲ್ಲೂ ಡಾಲಿಯ ಹಲವು ಅವತಾರಗಳು ಅನಾವರಣಗೊಂಡಿವೆ.ಟೀಸರ್ ನಲ್ಲಿ ಭಯವಾಗುವಂಥಹ  ಹಳೆಯದೊಂದು ಕಟ್ಟಡ,ಅಲ್ಲಿ ನೀರಿನೊಂದಿಗೆ ತೊಟ್ಟಿಕ್ಕುವ ರಕ್ತ, ಆ ರಕ್ತದ ಮಡುವಿನಲ್ಲಿ ನಾಯಕ,ಭಯಾನಕ ನೋಟದಲ್ಲಿ ಹೊಸದೊಂದು ಲುಕ್…

ಇವೆಲ್ಲದರ ನಡುವೆ ಸ್ವಲ್ಪವೇ ಬಂದು ಹೋಗುವ ಮುದ್ಧ ಮಗುವಿನ ನೋಟ.. ವೆಲ್ಲವೂ ಸೇರಿ ಸಿನೆಮಾದ ಮೇಲಿನ ಕುತೂಹವನ್ನ ಹೆಚ್ಚಿಸಿದೆ.ಇನ್ನು ಈ ಚಿತ್ರಕ್ಕೆ ಚರಣ್ ರಾಜ್ ಅವರ ಸಂಗೀತ ನಿರ್ದೇಶನವಿದ್ದು,ಟೀಸರ್ ನಲ್ಲೂ ಅದರ ಜಲಕ್ ಆವರಿಸಿದೆ.ಕೆ.ಎಂ ಸುದೀರ್ ಚಿತ್ರಕ್ಕೆ ಬಂಡವಾಳ ಹಾಕಿದ್ದು ದೀಪು ಎಸ್. ಕುಮಾರ್ ಸಂಕಲನ ಚಿತ್ರಕ್ಕಿದೆ. ಡಾಲಿ ಧನಂಜಯ, ನಿವೇದಿತಾ, ಕಾಕ್ರೋಚ್, ನವೀನ್, ಅಮೃತಾ ಅಯ್ಯಂಗಾರ್, ಸಪ್ತಮಿ, ಮೋನಿಶಾ ನಾಡಿಗೇರ್ ಹಾಗೂ ಗೌತಮ್ ಚಿತ್ರದಲ್ಲಿ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

 

#Popcornmonkeyteaser #PopcornmonkeyTiger #Daali #Dhanajay #KannadaMovies #Soori #DuniyaSoori #TrendingKannada

Tags