ಸುದ್ದಿಗಳು

ಸಾರ್ವಜನಿಕರಿಗೆ ಸುವರ್ಣಾವಕಾಶ: ವೈರಲ್ ಆಯ್ತು ಪುನೀತ್ ಹಾಡಿದ ಸಾಂಗು

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಸಿನಿಮಾಗಳಲ್ಲಿ ಅದೆಷ್ಟೇ ಬ್ಯುಸಿಯಾಗಿದ್ದರೂ ಹೊಸಬರ ಚಿತ್ರಗಳಿಗೆ, ಹೊಸತನದ ಪ್ರಯತ್ನಗಳಿಗೆ ಸದಾ ಬೆಂಬಲ ನೀಡುತ್ತಾ ಬರುತ್ತಿದ್ದಾರೆ. ಅವರು ಇತ್ತೀಚೆಗೆ ಹೊಸಾ ತಂಡಗಳಿಗೆ ಸಾಥ್ ಕೊಡುತ್ತಿರುವುದೇ ಹಾಡುಗಳ ಮೂಲಕ.

ನಾಯಕ ನಟ ರಿಷಿಗಂತೂ ಸದಾ ಸಾಥ್ ನೀಡುತ್ತಾ ಬಂದಿರುವ ಪವರ್ ಸ್ಟಾರ್ ಇದೀಗ ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಚಿತ್ರಕ್ಕಾಗಿ ಒಂದು ಹಾಡನ್ನು ಹಾಡಿದ್ದಾರೆ. ಅದು ಅತ್ಯಂತ ಕಡಿಮೆ ಅವಧಿಯಲ್ಲಿಯೇ ಸಾಮಾಜಿಕ ಜಾಲತಾಣಗಳ ತುಂಬಾ ವೈರಲ್ ಆಗಿ ಬಿಟ್ಟಿದೆ. ಹೆಚ್ಚು ಹೆಚ್ಚು ವೀಕ್ಷಣೆ ಪಡೆಯುತ್ತಾ ಮುಂದುವರೆಯುತ್ತಿರುವ ಈ ಹಾಡನ್ನು ಎಲ್ಲ ವರ್ಗ, ವಯೋಮಾನದ ಪ್ರೇಕ್ಷಕರೂ ಎಂಜಾಯ್ ಮಾಡುತ್ತಿದ್ದಾರೆ.

‘ಏನು ಸ್ವಾಮಿ ಮಾಡೋಣ ಆಗಿ ಹೋಯ್ತು ಅಧ್ವಾನ ಹಾಕಿ ಬಟ್ಲು ಕಿಟಕಿ ಬಾಗ್ಲನ್ನ’ ಅಂತ ಶುರುವಾಗುವ ಈ ಹಾಡು ಪುನೀತ್ ರಾಜ್‍ ಕುಮಾರ್ ಕಂಠದಲ್ಲಿ ಮಜವಾಗಿಯೇ ಮೂಡಿ ಬಂದಿದೆ. ಮಿದುನ್ ಮುಕುಂದನ್ ಸಂಗೀತ ಸಂಯೋಜನೆಯ ಈ ಹಾಡಿಗೆ ಕವಿರತ್ನ ಡಾ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.

ಈಗಾಗಲೇ ಮೆಲೋಡಿ, ನಾಯಕನ ಎಂಟ್ರಿ ಸಾಂಗ್ ಸೇರಿದಂತೆ ಎಲ್ಲ ಬಗೆಯ ಹಾಡುಗಳನ್ನು ಬರೆದು ಸೈ ಎನಿಸಿಕೊಂಡಿರುವ ನಾಗೇಂದ್ರ ಪ್ರಸಾದ್ ಈ ಹಾಡನ್ನು ಕೂಡಾ ಅಷ್ಟೇ ಸೊಗಸಾಗಿ ಬರೆದಿದ್ದಾರೆ. ಆದ್ದರಿಂದಲೇ ಅದು ಅತ್ಯಂತ ಕಡಿಮೆ ಅವಧಿಯಲ್ಲಿಯೇ ದಾಖಲೆ ಬರೆಯುವಂತೆ ಮುಂದುವರೆಯುತ್ತಿದೆ.

ದೇವರಾಜ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ದನ್ ಚಿಕ್ಕಣ್ಣ ಮಹತ್ವಾಕಾಂಕ್ಷೆಯಿಂದ ನಿರ್ಮಾಣ ಮಾಡಿರುವ ಚಿತ್ರ ಸಾರ್ವಜನಿಕರಿಗೆ ಸುವರ್ಣಾವಕಾಶ. ಇದನ್ನು ಅನೂಪ್ ರಾಮಸ್ವಾಮಿ ಕಶ್ಯಪ್ ನಿರ್ದೇಶನ ಮಾಡಿದ್ದಾರೆ.

ಇದು ಹೊಸ ಅಲೆಯ ಚಿತ್ರಗಳ ಸಾಲಿನಲ್ಲಿಯೇ ಹೊಸಾ ಛಾಪು ಮೂಡಿಸುವಂಥಾ ಗುಣಲಕ್ಷಣಗಳನ್ನು ಒಳಗೊಂಡಿರುವ ಚಿತ್ರ. ಈಗಾಗಲೇ ನಾನಾ ಥರದಲ್ಲಿ ಈ ಸಿನಿಮಾ ಸದಾ ಸುದ್ದಿ ಕೇಂದ್ರದಲ್ಲಿದೆ. ಪ್ರೇಕ್ಷಕರಲ್ಲಿಯೂ ಕೂಡಾ ಈ ಸಿನಿಮಾದಲ್ಲೇನೋ ಇದೆ ಎಂಬಂಥಾ ಗಾಢವಾದ ನಂಬಿಕೆ ಹುಟ್ಟಿಕೊಂಡಿದೆ. ಅಂದಹಾಗೆ ಈ ಸಿನಿಮಾ ರಿಷಿ ಪಾಲಿಗೂ ಅಪರೂಪದ್ದು. ಇಲ್ಲಿ ಅವರಿಗೆ ಆದ್ಯ ಜೋಡಿಯಾಗಿ ನಟಿಸಿದ್ದಾರೆ.

ಮಲೆಯಾಳಂ ಚಿತ್ರರಂಗದತ್ತ ‘ಪಂಚತಂತ್ರ’ ವಿಹಾನ್

#Power Star #Puneeth Rajkumar #Sarvajanikarige Suvarnavakasha ‍#kannadaSuddigalu

Tags