ಸುದ್ದಿಗಳು

ಮತ್ತೆ ರೀಲ್ ಲೈಫ್ ನಲ್ಲಿ ಒಂದಾಗಲಿರುವ ಈ ಜೋಡಿ!!

ಬಾಹುಬಲಿಯ ನಂತರ ಅನುಷ್ಕಾ ಹಾಗೂ ಪ್ರಭಾಸ್ ಒಟ್ಟಿಗೆ ನಟಿಸುತ್ತಾರಾ??

ಹೈದರಾಬಾದ್,ಡಿ.15: ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಬಾಹುಬಲಿ… ಬಾಹುಬಲಿಯ ನಂತರ ಅನುಷ್ಕಾ ಹಾಗೂ ಪ್ರಭಾಸ್ ಒಟ್ಟಿಗೆ ನಟಿಸುತ್ತಾರಾ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು.. ಆದರೆ ಇದು ನಿಜವೇ ಆಗಿದ್ದಲ್ಲಿ ಅಭಿಮಾನಿಗಳಿಗೆ ಸಂಭ್ರಮದ ವಿಚಾರ.. ಮುಂಬರುವ ಚಲನಚಿತ್ರದ ಭಾಗವೂ ಸಹ ಅನುಷ್ಕಾ ಎಂಬ ವದಂತಿಗಳಿವೆ. ಅದರ ಕುರಿತು ಯಾವುದೇ ದೃಢೀಕರಣವಿಲ್ಲದಿದ್ದರೂ,ಅಭಿಮಾನಿಗಳನ್ನು ಸಾಕಷ್ಟು ಸಂತೋಷಪಡಿಸುವ ಒಂದು ಅದ್ಭುತ ಒಳ ಸುದ್ದಿ ಇಲ್ಲಿ ಬರುತ್ತದೆ.

ಪ್ರಭಾಸ್ ಗೆ ಪೂಜಾ ಹೆಗ್ಡೆ ನಾಯಕಿ

ರಾಧಾ ಕೃಷ್ಣ ಕುಮಾರ್ ನಿರ್ದೇಶನದ ಮುಂಬರುವ ಚಿತ್ರದಲ್ಲಿ ಪ್ರಭಾಸ್ ಗೆ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಲಿದ್ದು, ಇನ್ನು ಕೆಲ ನಟರು ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಲಿದ್ದಾರೆಯಂತೆ… ಪ್ರೇಕ್ಷಕರ ಮೇಲೆ ಭಾರೀ ಪ್ರಭಾವ ಬೀರುವಂತಹ ಒಂದು ನಿರ್ದಿಷ್ಟ ಪಾತ್ರವನ್ನು ನಿರ್ವಹಿಸಲು ಅನುಷ್ಕಾ ಅವರು ಕಾಣಿಸಲಿದ್ದಾರೆ ಎಂಬ ವದಂತಿಗಳು ಕೇಳಿಬರುತ್ತಿವೆ…

Image result for anushka prabhas

ಒನ್ ವೇ ಲವ್

ಅನುಷ್ಕಾ ಮತ್ತು ಪ್ರಭಾಸ್ ನಡುವೆ ಕೊಂಚ  ಲವ್ ಸ್ಟೋರಿ ಇರಲಿದೆ ಎಂದು ಹೇಳಲಾಗುತ್ತಿದ್ದು ಮತ್ತು ಇದು ಒನ್ ವೇ ಲವ್ ಆಗಲಿದೆಯಂತೆ… ಇವರಿಬ್ಬರ ಕಾಂಬಿನೇಷನ್ ಮತ್ತೆ ಪ್ರೇಕ್ಷಕರನ್ನು ಮೋಡಿ ಮಾಡುವುದಂತೂ ನಿಜ…

 

 

Tags