ಸುದ್ದಿಗಳು

ವಿಂಟೇಜ್ ಕಾರುಗಳ ವಾರಸುದಾರನಾದ ಪ್ರಭಾಸ್ !

ವಿಂಟೇಜ್ ಕಾರುಗಳ ಮಾಲೀಕನ ಪಾತ್ರದಲ್ಲಿ ಪ್ರಭಾಸ್

ಹೈದರಾಬಾದ್,ಡಿ.23:ಬಾಹುಬಲಿ’ ಚಿತ್ರ ಬಿಡುಗಡೆಯಾದ ಬಳಿಕ ಪ್ರಭಾಸ್ ಏನು ಮಾಡಿದ್ರೂ ಸುದ್ದಿಯೇ. ರಾಜಮೌಳಿ ನಿರ್ದೇಶನದ ಚಿತ್ರ ಬಾಹುಬಲಿ ಎರಡು ಸರಣಿಗಳೂ ಕೂಡ ಬಾಕ್ಸ್ ಆಫೀಸ್ ನ್ನು ಕೊಳ್ಳೆ ಹೊಡೆದ ಬಳಿಕ ಪ್ರಭಾಸ್ ಬೇಡಿಕೆ ಕೂಡ ಹೆಚ್ಚಾಗಿದೆ. ಈ ನಡುವೆ ‘ಸಾಹೋ’ ಚಿತ್ರದಲ್ಲಿ ಬ್ಯುಸಿಯಾಗಿರುವ ಪ್ರಭಾಸ್ ರಾಧಾಕೃಷ್ಣ ಕುಮಾರ್ ನಿರ್ದೇಶನದ ಮತ್ತೊಂದು ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬುದು ಈಗಾಗಲೇ ತಿಳಿದಿದೆ. ಪ್ರಭಾಸ್ ಅವರ ಅಭಿನಯದ 20ನೇ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಈ ನಡುವೆ ಬಾಹುಬಲಿ ಹಿರೋಯಿನ್ ಅನುಷ್ಕಾ ಶೆಟ್ಟಿ ಕೂಡ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಟಾಲಿವುಡ್ ನಲ್ಲಿ ಹರಿದಾಡುತ್ತಿದೆ. ಅದೇನೆ ಇರಲಿ ಹೊಸ ಚಿತ್ರದ ಬಗ್ಗೆ ಇದೀಗ ಬಂದ ಅಪ್ ಡೇಟ್ ಪ್ರಕಾರ, ಚಿತ್ರದಲ್ಲಿ ಪ್ರಭಾಸ್, ವಿಂಟೇಜ್ ಕಾರುಗಳ ಮಾಲೀಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.

Related image

 

ಹೊಸ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಪ್ರಭಾಸ್

ರಾಧಾಕೃಷ್ಣ ನಿರ್ದೇಶನದ ಹೊಸ  ಚಿತ್ರದಲ್ಲಿ 1960ರ ದಶಕದ ಕಥೆಯನ್ನು ತೋರಿಸಲಾಗಿದ್ದು, ಡಿಫರೆಂಟ್ ಗೆಟಪ್ ನಲ್ಲಿ ಪ್ರಭಾಸ್ ಕಾಣಿಸಿಕೊಳ್ಳಲಿದ್ದಾರಂತೆ. ವಿಂಟೇಜ್ ಕಾರುಗಳ ಮಾಲೀಕನ ಪಾತ್ರದಲ್ಲಿ ಪ್ರಭಾಸ್ ನಟಿಸುತ್ತಿದ್ದು, ಈ ಕ್ರೇಜಿ ವೆಂಚರ್ ಗೆ ಗೋಪಿಕೃಷ್ಣ ಮೂವಿಸ್ ಮತ್ತು ಯುವಿ ಕ್ರಿಯೇಷನ್ಸ್ ಜಂಟಿಯಾಗಿ ಬಂಡವಾಳ ಹೂಡುತ್ತಿದೆ. ತೆಲುಗು, ಹಿಂದಿ, ತಮಿಳು  ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗಲಿದ್ದು 2019ರ ಕೊನೆಯಲ್ಲಿ ಈ ಚಿತ್ರ ಬಿಡುಗಡೆಯಾಗಲಿದ್ದು, ಚಿತ್ರಕ್ಕೆ ‘ಜಾನ್ ‘  ಎಂದು ಹೆಸರಿಡುವ ಸಾಧ್ಯತೆ ದಟ್ಟವಾಗಿದೆ.  ಸದ್ಯಕ್ಕೆ ಪ್ರಭಾಸ್ ಸಾಹೋ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಚಿತ್ರ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ. ಶ್ರದ್ಧಾ ಕಪೂರ್ ಚಿತ್ರದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ನಟಿಸಿದ್ದು, ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಇನ್ನೂ ಪ್ರಭಾಸ್ ಅವರ ಹೊಸ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ರೊಮ್ಯಾಂಟಿಕ್ ಹಾಡೊಂದರಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೂ ತೆಲುಗು ಚಿತ್ರರಂಗದಲ್ಲಿ ಹರಿದಾಡುತ್ತಿದೆ.

 

Tags

Related Articles