ಸುದ್ದಿಗಳು

ಈ ನಿರ್ದೇಶಕನೊಂದಿಗೆ ಪ್ರಭಾಸ್ ಮುಂದಿನ ಚಿತ್ರವಂತೆ?

ಇನ್ನೂ ಹೆಸರಿಡದ ಚಿತ್ರದಲ್ಲಿ ಪ್ರಭಾಸ್

ಜಿಲ್’ ಚಿತ್ರದನಿರ್ದೇಶಕ ರಾಧಾ ಕೃಷ್ಣನ್ಕುಮಾರ್ ನಿರ್ದೇಶನದಲ್ಲಿ ಪ್ರಭಾಸ್ ​​ಮುಂದಿನ ಚಿತ್ರದಲ್ಲಿ ನಟಿಸುತ್ತಿದ್ದಾರೆ

ಹೈದರಾಬಾದ್,ಸೆ.03: ಪ್ರಭಾಸ್ ಚಿತ್ರ ಒಂದು ಬಿಡುಗಡೆ ಆದರೆ ಸಾಕು ಮುಂದಿನ ಚಿತ್ರ ಯಾವುದು ಅನ್ನೋ ಕುತೂಹಲ ಅಭಿಮಾನಿಗಳಿಗೆ ಮೊದಲಲ್ಲ. ಯಾವಾಗಲೂ ಒಂದು ಸಿನಿಮಾ ಮುಗಿದ ನಂತರ ಅವರ ಮುಂದಿನ ಸಿನಿಮಾ ಯಾವುದು ಅನ್ನೋ ಕುತೂಹಲ ಇದ್ದೇ ಇರುತ್ತೆ. ಸದ್ಯ ಪ್ರಭಾಸ್ ‘ಸಾಹೋ’ ಸಿನಿಮಾದಲ್ಲಿ ಬ್ಯುಸಿಯಾಗಿರೋದು ಗೊತ್ತೇ ಇದೆ. ಇದೀಗ ಇವರ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ರಾಧಾ ಕೃಷ್ಣನ್​ ಕುಮಾರ್ ನಿರ್ದೇಶನದಲ್ಲಿ ಪ್ರಭಾಸ್ ​​ರ​ ಮುಂದಿನ ಚಿತ್ರ ಮಾಡಲಿದ್ದಾರಂತೆ.

ಬ್ಯುಸಿಯಾದ ಪ್ರಭಾಸ್

ಹೌದು, ‘ಬಾಹುಬಲಿ’ ಯಶಸ್ವಿ ಚಿತ್ರದ ನಂತರ ಪ್ರಭಾಸ್, ಸುಜೀತ್ ಆಕ್ಷನ್ ಕಟ್​ ಹೇಳಿರುವ ‘ಸಾಹೋ’ ಸಿನಿಮಾದಲ್ಲಿ ಸಕ್ರಿಯರಾಗಿದ್ದಾರೆ. ಈಗಾಗಲೇ ‘ಸಾಹೋ’ ಸಿನಿಮಾ ಟೀಸರ್ ಬಿಡುಗಡೆ ಮಾಡಿದ್ದು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚು ಮಾಡಿದೆ. ಚಿತ್ರೀಕರಣ ಭರದಿಂದ ಸಾಗಿದ್ದು ಈ ಸಿನಿಮಾ ನಂತರ ಹಿಂದೆಯೇ ಪ್ರಭಾಸ್ ಮತ್ತೊಂದು ಚಿತ್ರದಲ್ಲಿ ಬ್ಯುಸಿಯಾಗಲಿದ್ದಾರೆ ಅನ್ನೋ ಮಾಹಿತಿ ಈಗಾಗಲೇ ಮೂಲಗಳಿಂದ ಗೊತ್ತಾಗಿದೆ.

\Image result for radha krishan kumar

ಇನ್ನೂ ಹೆಸರಡಿದ ಸಿನಿಮಾ

ಹೌದು, ‘ಜಿಲ್’ ಚಿತ್ರದ​ ನಿರ್ದೇಶಕ ರಾಧಾ ಕೃಷ್ಣನ್​ ಕುಮಾರ್ ನಿರ್ದೇಶನದಲ್ಲಿ ಪ್ರಭಾಸ್ ​​ರ​ ಮುಂದಿನ ಚಿತ್ರದಲ್ಲಿ ನಟಿಸುತ್ತಿದ್ದಾರಂತೆ. ನವೆಂಬರ್​​ 6ರಂದು ಹೈದರಾಬಾದ್ ​ನಲ್ಲಿ ಚಿತ್ರತಂಡ ಶೂಟಿಂಗ್ ಆರಂಭಿಸಿಲಿದೆಯಂತೆ. ಆ ಸಮಯದಲ್ಲಿಯೇ ಇವರ ಕಾಂಬಿನೇಷನ್ ನಲ್ಲಿ ಬರುತ್ತಿರುವ ಸಿನಿಮಾ ಶೀರ್ಷಿಕೆ ಗೊತ್ತು​ ಮಾಡಲಿದ್ದಾರೆಯಂತೆ. ಯುವಿ ಕ್ರಿಯೇಷನ್​ ಹಾಗೂ ಗೋಷಿ ಕೃಷ್ಣ ಬ್ಯಾನರ್​ ಅಡಿ ನಿರ್ಮಾಣವಾಗುತ್ತಿರೋ ಚಿತ್ರ 1980ರ ಐತಿಹಾಸಿಕ ನಾಟಕದ ಕಥೆಯನ್ನು ಹೊಂದಿದೆಯಂತೆ.  ಇನ್ನು ಈ ಚಿತ್ರದಲ್ಲಿ ಪ್ರಭಾಸ್​ ಜೊತೆ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಸ್ಕ್ರೀನ್​ಶೇರ್ ಮಾಡಿಕೊಳ್ಳಲಿದ್ದಾರೆ ಅನ್ನೋದು ಮೂಲಗಳ ಮಾಹಿತಿ. ಅದೇನೆ ಇದ್ದರೂ ಬಿಡುವಿಲ್ಲದಂತೆ ಪ್ರಭಾಸ್ ಸಿನಿಮಾ ನಂತರ ಸಿನಿಮಾದಲ್ಲಿ ಬ್ಯುಸಿಯಾಗುತ್ತಿದ್ದಾರೆ. ಇವರ ಮುಂದಿನ ಸಿನಿಮಾ ಶೀರ್ಷಿಕೆಗೆ ಅಭಿಮಾನಿಗಳು ಕೂಡ ಕಾತುರರಾಗಿದ್ದಾರೆ.

 

Tags