ಸುದ್ದಿಗಳು

ಪ್ರಭಾಸ್ ಬ್ಯಾಡ್ ಬಾಯ್ ಲುಕ್ ಗೆ ಫಿದಾ ಆದ ಅಭಿಮಾನಿಗಳು

ಬಾಹುಬಲಿ ಪ್ರಭಾಸ್ ಮತ್ತು ಶ್ರದ್ದಾ ಕಪೂರ್ ಅಭಿನಯದ ‘ಸಾಹೋ’ ಚಿತ್ರದ ಬಿಡುಗಡೆಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿಯಿದ್ದು, ಇದೀಗ ಈ ಚಿತ್ರದ  ಹಾಡೊಂದು ಬಿಡುಗಡೆಯಾಗಿದ್ದು, ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿದೆ.

ಹೌದು, ‘ಸಾಹೋ’ ಚಿತ್ರದ ಬ್ಯಾಡ್ ಬಾಯ್ ಹಾಡೊಂದು ಬಿಡುಗಡೆಯಾಗಿದ್ದು, ಈ ಹಾಡಿನಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಕಾಣಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ಪ್ರಭಾಸ್ ಹಾಗೂ ಜಾಕ್ವೆಲಿನ್ ಈ ಹಾಡಿನಲ್ಲಿ ಸಖತ್ ಆಗಿ ಕುಣಿದಿದ್ದು, ನೋಡುಗರಿಗೆ ಸಖತ್ ಇಷ್ಟವಾಗಿದೆ.  ಬಿಕಿನಿ ತೊಟ್ಟಿರುವ ಹುಡುಗಿಯರ ಮಧ್ಯೆ, ಬ್ಯಾಡ್ ಬಾಯ್ ಆಗಿ ಪ್ರಭಾಸ್ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಇದನ್ನು ಕಂಡ ಅವರ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ಬ್ಯಾಡ್ ಬಾಯ್ ಹಾಡಿಗೆ ಬಾದ್ ಶಾ ಮತ್ತು ನೀತಿ ಮೋಹನ್ ಧ್ವನಿಗೂಡಿಸಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಹವಾ ಸೃಷ್ಟಿಸಿತ್ತು.

‘ಅದ್ದೂರಿ’ ನಾಯಕನಿಗೆ ವಿಶ್ ಮಾಡಿದ ರಿಯಲ್ ಸ್ಟಾರ್…!!!

#balkaninews #badboy #saahomovie #prabhasmovies #prabhasaahomovie #saahomoviesongs #jacquelinefernandez

 

Tags