ಸುದ್ದಿಗಳು

ಪ್ರಭಾಸ್ ಅಭಿಮಾನಿಗಳಿಗೆ ಶುರುವಾಗಿದೆ ಹೊಸ ಟೆನ್ಷನ್!!

ಟಾಲಿವುಡ್ ರೆಬೆಲ್​ ಸ್ಟಾರ್​ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಸಾಹೋ’ ಆಗಸ್ಟ್ 30 ರಂದು ಬಿಡುಗಡೆಯಾಗುವುದು ಖಚಿತವಾಗಿದೆ. ಚಿತ್ರವು ಅದ್ದೂರಿ ವೆಚ್ಚದಲ್ಲಿ ತಯಾರಾಗಿರುವುದರಿಂದ ಗಲ್ಲಾಪೆಟ್ಟಿಗೆಯ ಗಳಿಕೆಯು ಹೆಚ್ಚಾಗಬಹುದು ಎಂದು ಸಿನಿ ತಜ್ಞರು ನಿರೀಕ್ಷಿಸಿದ್ದಾರೆ.

ಚಿತ್ರದಲ್ಲಿ ಆಕ್ಷನ್ ಸೀಕ್ವೆನ್ಸ್ ಹೆಚ್ಚಾಗಿದ್ದು, ಸಿನಿ ಪ್ರಿಯರಿಗೆ ಭರ್ಜರಿ ಎಂಟರ್ ಟೈನ್ ಮೆಂಟ್ ಸಿಗುವುದರಲ್ಲಿ ಎರಡು ಮಾತಿಲ್ಲ. ಆದರೆ ಇತ್ತೀಚಿನ ವರದಿಗಳ ಪ್ರಕಾರ ‘ಸಾಹೋ’ ಚಿತ್ರದ ಅವಧಿ ಸುಮಾರು 3 ಗಂಟೆಗಳ ಕಾಲವಿದೆ. ಇತ್ತೀಚಿನ ದಿನಗಳಲ್ಲಿ ಮೂರು ಗಂಟೆಗಳ ಅವಧಿ ಇರುವ ಸಿನಿಮಾ ಸಿಕ್ಕಾಪಟ್ಟೆ ಬೋರು ಎಂಬ ಅಭಿಪ್ರಾಯವಿದೆ.

Image result for saaho

ಚಿತ್ರದ ಅವಧಿ ಹೆಚ್ಚಿರುವುದರಿಂದ ಸಿನಿ ಪ್ರಿಯರಿಗೆ ಎಲ್ಲಿ ಬೋರು ಆಗುವುದೋ ಎಂದು ಪ್ರಭಾಸ್ ಅಭಿಮಾನಿಗಳು ಈಗ ಚಿಂತಿತರಾಗಿದ್ದಾರಂತೆ. ನಿಗದಿತ ಸಮಯಕ್ಕಿಂತ ಚಿತ್ರ ಅರ್ಧ ಗಂಟೆ ಹೆಚ್ಚು ಅವಧಿ ಹೊಂದಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೀಗ ಚಿತ್ರಕ್ಕೆ ಎಡಿಟಿಂಗ್ ಅವಶ್ಯಕತೆಯಿದೆ ಎಂಬ ಮಾತು ಕೇಳಿಬರುತ್ತಿದೆ.

ಪಲಾಜೋ ಡ್ರೆಸ್ ನಲ್ಲಿ ಜಾಕ್ವೆಲಿನ್ ಫುಲ್ ಮಿಂಚಿಂಗ್

#balkaninews #prabhas # saaho # prabhasfans #saahomovie

Tags