ಸುದ್ದಿಗಳು

ಪ್ರಭಾಸ್ ಅವರ 20ನೇ ಚಿತ್ರದಲ್ಲಿ ಪೂಜಾ ಹೆಗ್ಡೆ…

ಹೈದರಾಬಾದ್,ಫೆ.11:

ಯಂಗ್ ರೆಬೆಲ್ ಪ್ರಭಾಸ್ ಸಾಹೋ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಸದ್ಯಕ್ಕ ರಾಮೋಜಿ ಫಿಲಂ ಸಿಟಿಯಲ್ಲಿ ಚಿತ್ರದ ಹೈವೋಲ್ಟೇಜ್ ಪೈಟಿಂಗ್ ದೃಶ್ಯಗಳು ಹಾಗೂ ಶ್ರದ್ದಾ ಹಾಗೂ ಪ್ರಭಾಸ್ ನಡುವಿನ ರೋಮ್ಯಾಂಟಿಕ್ ಹಾಡಿನ ಚಿತ್ರೀಕರಣ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ನಡುವೆ ಪ್ರಭಾಸ್ ಅವರ ಮುಂದಿನ ಚಿತ್ರದಲ್ಲಿ ಪೂಜಾಹೆಗ್ಡೆ ಪ್ರಭಾಸ್ ಜೊತೆಗೆ ರೋಮ್ಯಾನ್ಸ್ ಮಾಡಲಿದ್ದಾರಂತೆ. ಜಿಲ್ ಖ್ಯಾತಿಯ ರಾಧಾಕೃಷ್ಣನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.  ಇದೊಂದು ಟಿಪಿಕಲ್ ಪಿರಿಯೇಡ್ ಡ್ರಾಮವಾಗಿದ್ದು, ಚಿತ್ರದ ಬಗ್ಗೆ ಪೂಜಾ ಸಿಕ್ಕಾಪಟ್ಟೆ ಕ್ಯೂರಿಯಸ್ ಆಗಿದ್ದಾರಂತೆ.

Related image

ಎಕ್ಲೈಟ್ ಮೆಂಟ್ ತಡೆದುಕೊಳ್ಳಲು ಆಗುತ್ತಿಲ್ಲ ಅಂದ್ರು ಪೂಜಾ

ಅಂದಹಾಗೆ ಪೂಜಾ ಹೆಗ್ಡೆ, ಯಂಗ್ ರೆಬೆಲ್ ಜೊತೆಗೆ ತೆರೆ ಹಂಚಿಕೊಳ್ಳುತ್ತಿರುವುದು ಸಿಕ್ಕಾಪಟ್ಟೆ ಖುಷಿಕೊಟ್ಟಿದೆಯಂತೆ. ಪ್ರಭಾಸ್ ಅವರ ಜೊತೆಗೆ ಟಿಪಿಕಲ್ ಪಿರಿಯೇಡ್ ಡ್ರಾಮಾದಲ್ಲಿ ನಟಿಸುತ್ತರುವುದು ನನಗೆ ಖುಷಿಕೊಟ್ಟಿದ್ದು ಸಿಕ್ಕಾಪಟ್ಟೆ ಎಕ್ಲೈಟ್ ಆಗಿದ್ದೇನೆ ಅಂದಿದ್ದಾರೆ ಪೂಜಾ. ಚಿತ್ರಕತೆ ನನಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದು, ಇದು ನನಗೆ ಚಾಲೆಂಜಿಂಗ್ ರೋಲ್ ಆಗಿದೆ. ಚಿತ್ರಕತೆ ಅತ್ಯದ್ಬುತವಾಗಿದೆ ಎಂದಿದ್ದಾರೆ ಪೂಜಾ. ಸದ್ಯಕ್ಕೆ ಪೂಜಾ, ಮಹೇಶ್ ಬಾಬು ಅವರ ಮಹರ್ಷಿ ಚಿತ್ರದಲ್ಲಿ ನಟಿಸುತ್ತಿದ್ದು, ಮಹೇಶ್ ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ವಂಶಿ ಪೈದಿಪಲ್ಲಿ ಆಕ್ಷನ್ ಕಟ್ ಹೇಳಿದ್ದಾರೆ. ಇದಕ್ಕಿಂತ ಮೊದಲು ಪೂಜಾ ಯಂಗ್ ಟೈಗರ್ ಎನ್ ಟಿಆರ್ ನಟನೆಯ ಅರವಿಂದ್ ಸಮೇತಾ ಚಿತ್ರದಲ್ಲಿ ನಟಿಸಿದ್ದರು. ಈ ಹಿಂದೆ ಬಾಲಿವುಡ್ ನಲ್ಲಿ ಹೃತಿಕ್ ರೋಷನ್ ಜೊತೆಗೆ ನಟಿಸುವ ಅವಕಾಶವನ್ನು ಅವರು ಗಿಟ್ಟಿಸಿಕೊಂಡು ಸೈ ಎನಿಸಿಕೊಂಡಿದ್ದರು. ಒಟ್ಟಾರೆ ಪೂಜಾ ಹೆಗ್ಡೆ ಸದ್ಯಕ್ಕೆ ಟಾಲಿವುಡ್ ನಲ್ಲಿ ಬಹುಬೇಡಿಕೆ ನಟಿ ಎಂಬುದರಲ್ಲಿ ಅನುಮಾನವಿಲ್ಲ.

#balkaninews #hollywood #tollywood #prabhas

 

 

 

 

Tags