ಸುದ್ದಿಗಳು

ಅದ್ದೂರಿಯಾಗಿ ನಡೆಯಿತು ರಿಷಬ್ ಶೆಟ್ಟಿ ಪತ್ನಿಯ ಸೀಮಂತ ಕಾರ್ಯ…!

ಬೆಂಗಳೂರು, ಮಾ.16:

ಸದ್ಯ ‘ಬೆಲ್ ಬಾಟಂ’ ಯಶಸ್ವಿ ಖುಷಿಯಲ್ಲಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಇದೀಗ ಮತ್ತೊಂದು ಖುಷಿಯಲ್ಲಿದ್ದಾರೆ. ಈ ನಿರ್ದೇಶಕರ ಪತ್ನಿ ಪ್ರಗತಿ ರಿಷಬ್ ಶೆಟ್ಟಿ ಸದ್ಯ ತುಂಬು ಗರ್ಭಿಣಿ. ಇದೀಗ ಈ ತುಂಬು ಗರ್ಭಿಣಿಯ ಸೀಮಂತ ಕಾರ್ಯ ಅದ್ಧೂರಿಯಾಗಿ ನಡೆದಿದೆ.

ಮಗುವಿನ ನಿರೀಕ್ಷೆಯಲ್ಲಿ ರಿಷಬ್ ದಂಪತಿ

ಹೌದು, ಸ್ಯಾಂಡಲ್ ವುಡ್ ನಿರ್ದೇಶಕ, ಕುಂದಾಪುರ ಮೂಲದ ರಿಷಬ್ ಶೆಟ್ಟಿಯವರು 2017 ಫೆಬ್ರವರಿ 9ರಂದು ಪ್ರಗತಿ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇವರ ಮದುವೆ ಕುಂದಾಪುರದ ಕೋಟೇಶ್ವರದ ಅಂಕದ ಕಟ್ಟೆಯಲ್ಲಿ ಅದ್ದೂರಿಯಾಗಿ ನಡೆದಿತ್ತು. ಸ್ಯಾಂಡಲ್ ವುಡ್ ಕಲಾವಿದರು ಮದುವೆಯಲ್ಲಿ ಭಾಗವಹಿಸಿ ವಧು-ವರರಿಗೆ ಶುಭಕೋರಿದ್ದರು. ಇದೀಗ ಈ ಜೋಡಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗಿಯಾದ ರಕ್ಷಿತ್

ನಿನ್ನೆ ರಿಷಬ್ ಪತ್ನಿಯ ಸೀಮಂತ ಕಾರ್ಯ ನಡೆದಿದೆ. ಪ್ರೀತಿಸಿ ಮದುವೆಯಾದ ಈ ಜೋಡಿ ಇದೀಗ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನೂ ಈ ಸೀಮಂತ ಕಾರ್ಯಕ್ರಮ ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ನಡೆದಿದೆ. ಇನ್ನೂ ಈ ಕಾರ್ಯಕ್ರಮಕ್ಕೆ ರಕ್ಷಿತ್ ಶೆಟ್ಟಿ ಸೇರಿದಂತೆ ಆಪ್ತ ಸ್ನೇಹಿತರು ಭಾಗಿಯಾಗಿದ್ದಾರೆ. ಹಸಿರು ಹಾಗೂ ಗೋಲ್ಡನ್ ಸೀರೆಯಲ್ಲಿ ರಿಷಬ್ ಪತ್ನಿ ಮಿಂಚಿದ್ದಾರೆ.

‘ಅಮರ್’ ನಂತರ ಅಭಿಷೇಕ್ ಚಿತ್ರವನ್ನು ನಿರ್ದೇಶನ ಮಾಡಲಿರುವ ಗುರುದತ್

#rishabshetty #balkaninews #sandalwood #rishabshettyandpragathirishabshetty #pragathirishabshetty #seemantha

Tags