ಸುದ್ದಿಗಳು

ಬಾದಾಮಿ ಹಾಲು ಮಾರಿದ ಡೈನಾಮಿಕ್ ಪ್ರಿನ್ಸ್

ಬಡ ಕುಟುಂಬಕ್ಕೆ ನೆರವಾದ ಪ್ರಜ್ವಲ್

ಬೆಂಗಳೂರು, ನ.7: ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಸಾಮಾನ್ಯ ಜನರಿಗೆ ಅನುಕೂಲವಾಗಲು ಸೆಲೆಬ್ರಿಟಿಗಳು ಸಾಮಾನ್ಯ ಜನರಂತೆ ಕೆಲಸವನ್ನು ಮಾಡಿ, ನೊಂದ ಮನಸ್ಸಿಗೆ ಸಹಾಯ ಮಾಡುವ ಏಕೈಕ ಕಾರ್ಯಕ್ರಮವೇ ‘ಸದಾ ನಿಮ್ಮೊಂದಿಗೆ’. ಈ ವಾರದ ಕಾರ್ಯಕ್ರಮದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಭಾಗವಹಿಸಿದ್ದಾರೆ.

ಕಾರ್ಯಕ್ರಮದ ಬಗ್ಗೆ

‘ಸದಾ ನಿಮ್ಮೊಂದಿಗೆ’ ಕಾರ್ಯಕ್ರಮವು ಮನರಂಜನೆ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿರುವ ಕಾರ್ಯಕ್ರಮವಾಗಿದ್ದು, ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಈಗಾಗಲೇ ಅನೇಕ ಕಲಾವಿದರು ಸಾಮಾನ್ಯರಂತೆ ಕೆಲಸ ಮಾಡಿ, ನೊಂದ ಕೆಲವು ಬಡ ಕುಟುಂಬಕ್ಕೆ ಸಹಾಯವಾಗುತ್ತಿದ್ದಾರೆ.

 

ಈಗಾಗಲೇ ಈ ಕಾರ್ಯಕ್ರಮದಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ, ವಿಜಯ್ ರಾಘವೇಂದ್ರ, ಶ್ರೀಮುರಳಿ, ಚಿರಂಜೀವಿ ಸರ್ಜಾ, ರಾಗಿಣಿ ದ್ವಿವೇದಿ, ಶ್ರೀಮುರಳಿ, ಶರಣ್, ಮಾನ್ವಿತಾ ಹರೀಶ್, ಪ್ರಿಯಾಂಕಾ ಉಪೇಂದ್ರ, ಗಿರಿಜಾ ಲೋಕೇಶ್ ಸೇರಿದಂತೆ ಹಲವರು ಅತಿಥಿಗಳಾಗಿ ಪಾಲ್ಗೊಂಡಿದ್ದಾರೆ. ಈಗ ನಟ ಪ್ರಜ್ವಲ್ ದೇವರಾಜ್ ಸರದಿ.

ಹಾಲು ಮಾರಿದ ಪ್ರಜ್ವಲ್

‘ಸದಾ ನಿಮ್ಮೊಂದಿಗೆ’ ಕಾರ್ಯಕ್ರಮದ ಈ ವಾರದ ಸಂಚಿಕೆಯಲ್ಲಿ ನಟ ಪ್ರಜ್ವಲ್ ದೇವರಾಜ್ ಭಾಗವಹಿಸಿದ್ದಾರೆ. ಟೀ ವ್ಯಾಪಾರಿಯಾಗಿರುವ ಸತೀಶ್ ಪುತ್ರಿಗೆ ಸಹಾಯ ಮಾಡಲು ಅವರು ಬಾದಾಮಿ ಹಾಲನ್ನು ಮಾರಾಟ ಮಾಡಿದ್ದಾರೆ.

ಬೆಂಗಳೂರಿನ ವಿ.ವಿ ಪುರಂನಲ್ಲಿ ಬಾದಾಮಿ ಹಾಲನ್ನು ಮಾರಿದ ಪ್ರಜ್ವಲ್ ಅದರಿಂದ ಬಂದ ಹಣವನ್ನು ಸತೀಶ್ ಅವರಿಗೆ ನೀಡಿದ್ದಾರೆ. ಅಲ್ಲದೇ, ವೈಯುಕ್ತಿಕವಾಗಿಯೂ ಅವರಿಗೆ ಹಣ ಸಹಾಯ ಮಾಡಿದ್ದಾರೆ.

ಇನ್ನು ಸತೀಶ್ ಅವರ ಐದು ವರ್ಷದ ಪುತ್ರಿಗೆ ಕಿವಿ ಕೇಳುವುದಿಲ್ಲ. ಮಾತು ಬರುವುದಿಲ್ಲ. ಆಕೆಯ ಶಸ್ತ್ರಚಿಕಿತ್ಸೆಗೆ ಹಣದ ಅವಶ್ಯಕತೆ ಇದೆ. ಹೀಗಾಗಿ ಈ ಮಗುವಿಗೆ ಸಹಾಯ ಮಾಡಲು ಪ್ರಜ್ವಲ್ ದೇವರಾಜ್ ಮುಂದಾಗಿ ಬಾದಾಮಿ ಹಾಲನ್ನು ಮಾರಿದ್ದಾರೆ. ಈ ಮಾರಾಟದಿಂದ ಸಂಗ್ರಹವಾದ ದುಡ್ಡೆಷ್ಟು ಎಂಬುದನ್ನು ತಿಳಿಯಲು ಈ ವಾರದ ಸಂಚಿಕೆಯಲ್ಲಿ ಪ್ರಸಾರವಾಗಲಿದೆ. ಈ ಕಾರ್ಯಕ್ರಮವು ಇದೇ ರವಿವಾರ ರಾತ್ರಿ 9 ಗಂಟೆಗೆ ಪ್ರಸಾರ ಆಗಲಿದೆ.

Tags