ಸುದ್ದಿಗಳು

ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಡೈನಾಮಿಕ್ ಪ್ರಿನ್ಸ್ ದೇವರಾಜ್

ಒಟ್ಟೊಟ್ಟಿಗೆ ನಾಲ್ಕು ಸಿನಿಮಾಗಳಲ್ಲಿ ನಟನೆ

ಬೆಂಗಳೂರು.ಏ.17: ‘ಸಿಕ್ಸರ್’ ಚಿತ್ರದ ಮೂಲಕ ನಾಯಕನಟರಾಗಿ ಎಂಟ್ರಿ ಕೊಟ್ಟ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ಈಗಾಗಲೇ 25 ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಅವರ ಕೈಯಲ್ಲಿ ನಾಲ್ಕೈದು ಸಿನಿಮಾಗಳಿದ್ದು, ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರೆ.

ಸದ್ಯ ಪ್ರಜ್ವಲ್ ‘ಇನ್ಸ್‌ ಪೆಕ್ಟರ್‌ ವಿಕ್ರಂ’, ‘ಜಂಟಲ್ ಮ್ಯಾನ್’ ಮತ್ತು ‘ಅರ್ಜುನ್ ಗೌಡ’ ಚಿತ್ರಗಳಲ್ಲಿ ನಟಿಸುತ್ತಿದ್ದು, ಇವುಗಳೊಂದಿಗೆ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ನಟಿಸುವುದಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಈ ಚಿತ್ರವನ್ನು ಪಿ.ಸಿ ಶೇಖರ್ ನಿರ್ದೇಶನ ಮಾಡಲಿದ್ದಾರೆ.

Image result for prajwal devaraj

ಹೌದು, ಈ ಹಿಂದೆ ಪ್ರಜ್ವಲ್ ನಟನೆಯ ‘ಅರ್ಜುನ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಪಿ. ಸಿ ಶೇಖರ್ ಮತ್ತೊಮ್ಮೆ ಪ್ರಜ್ವಲ್ ರಿಗೆ ನಿರ್ದೇಶನ ಮಾಡಲಿದ್ದಾರೆ. ಇದೊಂದು ಮಾಫಿಯಾದ ಕಥಾಹಂದರವನ್ನು ಒಳಗೊಂಡ ಸಿನಿಮಾವಾಗಿದ್ದು, ಹೊಸ ಶೇಡ್ ನಲ್ಲಿ ಪ್ರಜ್ವಲ್ ಕಾಣಿಸಿಕೊಳ್ಳುತ್ತಿದ್ದಾರೆ.

Image result for prajwal devaraj and pc shekhar

‘ಹೌದು, ಇದೊಂದು ಹೊಸ ಶೇಡ್ ನ ಸಿನಿಮಾವಾಗಿದ್ದು, ಒಂದು ರೀತಿ ರೌಡಿಸಂ ವಿಷಯದ ಸ್ಪರ್ಶವಿದೆ. ಈ ಹಿಂದೆ ನಾನು ಕೂಡ ರೌಡಿಸಂ ವಿಷಯ ಇರುವಂತಹ “ಗೆಳೆಯ’ ಮತ್ತು “ಗುಲಾಮ’ ಚಿತ್ರಗಳಲ್ಲೂ ನಟಿಸಿದ್ದೇನೆ. ಚಿತ್ರದ ತಯಾರಿಗಳು ನಡೆಯುತ್ತಿದ್ದು, ಸದ್ಯದಲ್ಲಿಯೇ ಟೈಟಲ್ ಬಹಿರಂಗ ಪಡಿಸಲಿದ್ದೇವೆ” ಎನ್ನುತ್ತಾರೆ ಪ್ರಜ್ವಲ್.

ಸದ್ಯ ಪ್ರಜ್ವಲ್ ನಟಿಸಿರುವ ‘ಇನ್ಸ್‌ ಪೆಕ್ಟರ್‌ ವಿಕ್ರಂ’ ಮತ್ತು ‘ಜಂಟಲ್‌ ಮ್ಯಾನ್‌’ ಚಿತ್ರಗಳು ಮುಗಿಯುವ ಹಂತ ತಲುಪಿವೆ. “ಅರ್ಜುನ್ ಗೌಡ’ ಚಿತ್ರಕ್ಕೆ ಸ್ವಲ್ಪ ಕೆಲಸವಿದೆ. ಸದ್ಯದಲ್ಲಿಯೇ ಈ ಹೊಸ ಚಿತ್ರ ಶುರುವಾಗಲಿದೆ. ಈ ನಡುವೆ ಅವರು ‘ಅನಂತು ವರ್ಸಸ್ ನುಸ್ರತ್’ ಹಾಗೂ ‘ಧರ್ಮಸ್ಯ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ.

ನಟನಾ ಲೋಕದಲ್ಲಿ ಮಂಜಿನ ನಗರಿಯ ಚೆಲುವೆ

#prajwaldevaraj, #now, #busy, #fims,#balkaninews #filmnews, #kannadasuddigalu,

Tags

Related Articles