ಸುದ್ದಿಗಳು

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭೇಟಿ ಮಾಡಿದ ಪ್ರಕಾಶ್ ರೈ

ಬೆಂಗಳೂರು, ಜ.12: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ನಟ ಹಾಗೂ ನಿರ್ದೇಶಕ ಪ್ರಕಾಶ್ ರೈ ಈಗಾಗಲೇ ಘೋಷಿಸಿದ್ದು, ಚುನಾವಣೆಗೆ ಸ್ಪರ್ಧಿಸಲು ಭರದ ಸಿದ್ದತೆ ನಡೆಸಿದ್ದಾರೆ. ಈ ನಡುವೆ ಪ್ರಕಾಶ್ ರೈ ದೆಹಲಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ತನ್ನ ರಾಜಕೀಯ ಪಯಣಕ್ಕೆ ಬೆಂಬಲ ಸೂಚಿಸಿ ಅಗತ್ಯ ನೆರವು ನೀಡುವುದಾಗಿ ತಿಳಿಸಿರುವ ಕೇಜ್ರಿವಾಲ್ ಅವರಿಗೆ ಇದೇ ವೇಳೆ ನಟ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಮಾತುಕತೆಯ ಕುರಿತಂತೆ ಟ್ವೀಟ್ ಮಾಡಿದ ನಟ

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ ಕುರಿತಂತೆ ತಮ್ಮ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿರುವ ಪ್ರಕಾಶ್ ರೈ, ಯಾವೆಲ್ಲಾ ವಿಚಾರಗಳ ಕುರಿತಂತೆ ಹೆಚ್ಚಿನ ಗಮನ ಹರಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದಾಗಿ ತಿಳಿಸಿದ್ದಾರೆ. ಇನ್ನೂ ಕೇಜ್ರಿವಾಲ್ ಕೂಡ ಪ್ರಕಾಶ್ ರೈ ಅವರನ್ನು ಸ್ವಾಗತಿಸಿ, ಒಳ್ಳೆಯವರು ರಾಜಕೀಯಕ್ಕೆ ಬರಬೇಕು ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ ದೆಹಲಿಯಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯೋ ನೇತೃತ್ವದಲ್ಲಿ ನಡೆದ ಸಭೆಯಲ್ಲೂ ಕೂಡ ಪ್ರಕಾಶ್ ರೈ ಪಾಲ್ಗೊಂಡಿದ್ದು, ಈ ವೇಳೆ ಪ್ರಕಾಶ್ ರೈ ಅವರಿಗೆ ಬೆಂಬಲ ನೀಡಲು ಒಕ್ಕೋರಲಿನಿಂದ ತೀರ್ಮಾನ ಕೈಗೊಳ್ಳಲಾಗಿದೆ. ಕಳೆದ ವಾರ ತಮ್ಮ ರಾಜಕೀಯ ಪ್ರವೇಶದ ಕುರಿತಂತೆ ಸ್ಪಷ್ಟಪಡಿಸಿದ್ದ ಪ್ರಕಾಶ್ ರೈ, ಚುನಾವಣೆಯಲ್ಲಿ ಗೆಲುವು  ಸಾಧಿಸಿದರೆ, ಲೋಕಸಭೆಯಲ್ಲೂ ಜಸ್ಟ್ ಆಸ್ಕಿಂಗ್ ಅಭಿಯಾನ ಮುಂದುವರೆಸುವುದಾಗಿ ಭರವಸೆ ನೀಡಿದ್ದರು.

#prakashraj #bengalurucentral #citizenvoice #justaking #parliament #twitter #delhicmarvindkejriwal #arvindkejriwalandprakashraj #balkaninews

Tags