ಸುದ್ದಿಗಳು

ಚಂದನವನದಲ್ಲೊಂದು ‘ಪ್ರಾಣ’

ಬೆಂಗಳೂರು, ಆ.01: ಬಹುಭಾಷಾ ನಟಿ ನಿತ್ಯಾ ಮೆನನ್ ಮೂಲತ: ಮಲಯಾಳಂನವರಾದರೂ, ತಮಿಳು ಚಿತ್ರರಂಗದ ಮನೆ ಮಗಳಾಗಿದ್ದಾಳೆ. ಹೀಗೆ  ಅನೇಕ ನಟಿಯರು ಕೇರಳದಿಂದ ಬಂದು ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ನೆಲೆಕಂಡುಕೊಂಡಿದ್ದಾರೆ. ನಿತ್ಯಾ, ಸೆವೆನ್ ಒ ಕ್ಲಾಕ್​​, ಜೋಶ್​​, ಮೈನಾ, ಕೋಟಿಗೊಬ್ಬ 2 ಸಿನಿಮಾಗಳಲ್ಲಿ ತಮ್ಮ ನಟನೆಯಿಂದ ಚಂದನವನದಲ್ಲೂ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.

ಬಹುಭಾಷೆಯಲ್ಲಿ ನಿತ್ಯಾ

ಇದೀಗ ಮತ್ತೆ ‘ಪ್ರಾಣ’ ಎನ್ನುವ ಸಸ್ಪೆನ್ಸ್ ಥ್ರಿಲ್ಲರ್ ಕಥೆಯೊಂದಿಗೆ ಚಂದನವನದಲ್ಲಿ ತನ್ನ ಚೆಲುವನ್ನು ತೋರಲಿದ್ದಾರೆ. ವಿ.ಕೆ. ಪ್ರಕಾಶ್ ನಿರ್ದೇಶಿಸುತ್ತಿರುವ ಈ ಚಿತ್ರ, ಕನ್ನಡದೊಂದಿಗೆ ತಮಿಳು, ಮಲಯಾಳಂ, ತೆಲುಗು ಭಾಷೆಗಳಲ್ಲಿ ಒಟ್ಟಿಗೆ ತೆರೆ ಕಾಣಲಿದೆ. ಚಿತ್ರೀಕರಣ ಆರಂಭದ ಹಂತದಲ್ಲಿದ್ದು, ಸದ್ಯಕ್ಕೆ ಸಿನಿಮಾ ಪೋಸ್ಟ್​​ ಪ್ರೊಡಕ್ಷನ್ ಹಂತದಲ್ಲಿದೆ ಎಂದು ಸಿನಿ ಮೂಲಗಳು ತಿಳಿಸಿವೆ. ಚಿತ್ರದ ಪೋಸ್ಟರ್ ಸಾಮಾಜಿಕ ವಲಯದಲ್ಲಿ ಬಾರೀ ಕುತೂಹಲ ಮೂಡಿಸಿದೆ ಎನ್ನಲಾಗಿದೆ.

Tags

Related Articles

Leave a Reply

Your email address will not be published. Required fields are marked *