ಸುದ್ದಿಗಳು

ಪರಿಸರ ಸ್ನೇಹಿ ಗಣಪನನ್ನು ತಯಾರಿಸಿದ ಪ್ರಣಿತಾ

ಇಕೋ ಪ್ರೆಂಡ್ಲಿ ಗಣೇಶನಿಂದ ಪರಿಸರವನ್ನು ಸಂರಕ್ಷಿಸಿ

ಬೆಂಗಳೂರು, ಸ.12: ನಾಳೆಯಿಂದ ಗಣೇಶ ಹಬ್ಬ. ಹೀಗಾಗಿ “ನಾವುಗಳೆಲ್ಲಾ, ಪರಿಸರ ಸ್ನೇಹಿ ಗಣಪನನ್ನು ತಂದುಕೊಂಡು ಅಥವಾ ಸ್ವತಃ ನಾವೇ ತಯಾರಿಸಿ, ಈ ಹಬ್ಬವನ್ನು ಆಚರಿಸಿ” ಎಂದು ಪ್ರಣಿತಾ ಹೇಳುತ್ತಾರೆ.

ಗಣೇಶನ ಮೂರ್ತಿ ತಯಾರಿಸಿದ ಪ್ರಣಿತಾ

ನಟಿ ಪ್ರಣಿತಾ ಇದೀಗ ತಾವೇ ತಮ್ಮ ಕೈಯ್ಯಾರೆ ಮಣ್ಣಿನ ಗಣಪನನ್ನು ತಯಾರಿಸಿದ್ದಾರೆ. ಇಕೋ ಪ್ರೆಂಡ್ಲಿ ಗಣಪನ ಮೂರ್ತಿಯಿದು ಎಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದು ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಕಲಾತ್ಮಕವಾಗಿ ಮತ್ತು ಸುಂದರವಾಗಿ ಈ ಗಣೇಶನ ಮೂರ್ತಿಯನ್ನು ತಯಾರಿಸಿದ್ದಾರೆ.

ಪರಿಸರ ಸ್ನೇಹಿ ಗ

“ರಾಸಾಯನಿಕ ಬಣ್ಣ ಹಾಕದ ಗಣೇಶನ ಮೂರ್ತಿಗಳನ್ನು ಬಳಸಬೇಕು. ಇವುಗಳನ್ನು ಕೆರೆಗೆ ಅಥವಾ ನದಿಗೆ ಬಿಡುವುದರಿಂದ ನೀರು ಕಲುಷಿತವಾಗುವುದು ತಪ್ಪುತ್ತದೆ. ಹೀಗಾಗಿ ಬಣ್ಣ ಹಾಕದ ಮೂರ್ತಿಗಳನ್ನು ಬಳಸಿದರೆ ಪರಿಸರಕ್ಕೆ ಒಳಿತಾಗುತ್ತದೆ’ ಎಂದು ಪ್ರಣಿತಾ ಹೇಳುತ್ತಾರೆ.

ಮತ್ತೆ ಕನ್ನಡಕ್ಕೆ

ಕಳೆದ ವರ್ಷ ಶಿವರಾಜ್ ಕುಮಾರ್ ರೊಂದಿಗೆ ‘ಮಾಸ್ ಲೀಡರ್’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಪ್ರಣಿತಾರಿಗೆ ಕನ್ನಡದಲ್ಲಿ ನಟಿಸುವ ಆಸೆಯಿದೆ. ಸದ್ಯ ಅವರು ತೆಲುಗು ಮತ್ತು ತಮಿಳು ಭಾಷೆಯ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

Tags

Related Articles