ಸುದ್ದಿಗಳು

ದತ್ತು ಪಡೆದ ಶಾಲಾ ಮಕ್ಕಳೊಂದಿಗೆ ಹೋಳಿ ಆಚರಿಸಿದ ಪ್ರಣಿತಾ

ಹಾಸನ ಜಿಲ್ಲೆಯ ಒಂದು ಹಳ್ಳಿ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡಿದ್ದ ಪ್ರಣಿತಾ

ಬೆಂಗಳೂರು.ಮಾ.24: ಬಹುಭಾಷಾ ನಟಿ ಪ್ರಣಿತಾ ಸುಭಾಶ್ ಕೆಲವು ತಿಂಗಳುಗಳ ಹಿಂದೆಯಷ್ಟೇ ಹಾಸನದಲ್ಲಿ ಸರ್ಕಾರಿ ಶಾಲೆಯನ್ನು ದತ್ತು ಪಡೆದಿದ್ದರು. ಈಗ ಆ ಶಾಲೆಯ ಮಕ್ಕಳೊಂದಿಗೆ ಹೋಳಿ ಆಡಿ ಬಣ್ಣದ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ.

ಹೌದು, ಪ್ರಣಿತಾ ಈಗ ನಟನೆಯೊಂದಿಗೆ ಸಮಾಜಮುಖಿ ಕೆಲಸಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಹೀಗಾಗಿ ದತ್ತು ಪಡೆದಿದ್ದ ಸರ್ಕಾರಿ ಶಾಲೆಯ ಮಕ್ಕಳೊಂದಿಗೆ ದಿನವನ್ನು ಕಳೆದು ಸಂಭ್ರಮಿಸಿದ್ದಾರೆ. ಈ ಹಿಂದೆ ಅವರು ಹೋಳಿ ಆಡಲು ಬರುವುದಾಗಿ ಮಾತು ಕೊಟ್ಟಿದ್ದರಂತೆ , ಅದನ್ನೀಗ ಉಳಿಸಿಕೊಂಡಿದ್ದಾರೆ.

ಶಾಲಾ ಅಭಿವೃದ್ಧಿ ತಂಡದಿಂದ ದತ್ತು ಪಡೆದಿರುವ ಶಾಲೆಯನ್ನು ಬಣ್ಣಗಳಿಂದ ಆಲಂಕರಿಸುವ ಮೂಲಕ ಹೋಳಿ ಹಬ್ಬವನ್ನು ಸಂತೋಷದಿಂದ ಆಚರಿಸಿದ್ದಾಗಿ ಪ್ರಣಿತಾ ಹೇಳಿಕೊಂಡಿದ್ದು, ಅದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನು ಗ್ಲಾಮರ್ ಜಗತ್ತಿನಿಂದ ಹೊರಬಂದು ಇಂಥ ಕೆಲಸಗಳನ್ನು ತೊಡಗಿಸಿಕೊಳ್ಳುವುದು ಒಂದು ರೀತಿಯ ತೃಪ್ತಿ ನೀಡುತ್ತದೆ ಎಂದು ಅವರು ಟ್ವೀಟ್ ಸಂದೇಶದಲ್ಲಿ ಹೇಳಿದ್ದಾರೆ.

ಇನ್ನು ದತ್ತು ಪಡೆದ ಶಾಲೆಯನ್ನು ಪ್ರಣೀತಾ ಸಾಕಷ್ಟು ಅಭಿವೃದ್ದಿ ಪಡಿಸಿದ್ದಾರೆ. ಕುಡಿಯುವ ನೀರಿನ ವ್ಯವಸ್ತೆ, ಸ್ವಚ್ಚತೆ ಸೇರಿದಂತೆ ಮೂಲಭೂತ ಸೌಕರ್ಯಗಳ ವ್ಯವಸ್ತೆ ಮಾಡಿಕೊಡುವ ಜೊತೆಗೆ ಮಕ್ಕಳಿಗೆ ಆಕರ್ಷಣೆ ಆಗುವ ಹಾಗೆ ಶಾಲೆಯನ್ನು ಕಲರ್ ಫುಲ್ ಮಾಡಿದ್ದಾರೆ. ಇದಕ್ಕಾಗಿ ಅವರ ಅಭಿಮಾನಿಗಳು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ.

ಸಿನಿಮಾಕ್ಕಾಗಿ ಪ್ರಾಣವನ್ನೇ ಪಣವಿಟ್ಟು ಫೈಟ್ ಮಾಡಿದ ಪ್ರಥಮ್

#pranitha, #holi, #celebrated, #balkaninews #filmnews, #kannadasuddigalu

Tags