ಸುದ್ದಿಗಳು

ಬಾಲಿವುಡ್ ನಲ್ಲಿ ಮಿಂಚಲಿರುವ ಪ್ರಣಿತಾ!!

ನಟಿ ಪ್ರಣೀತಾ ಕನ್ನಡದಲ್ಲಿ ದೊಡ್ಡ ಸ್ಟಾರ್ ನಟರ ಜೊತೆ ನಟಿಸಿ ಸೈ ಅನಿಸಿಕೊಂಡ ನಟಿ “ಲೀಡರ್‌’ ನಂತ ಪ್ರಣಿತಾ ಯಾವ ಚಿತ್ರದಲ್ಲೂ ಕನ್ನಡದಲ್ಲಿ ಕಾಣಿಸಿಕೊಂಡಿಲ್ಲ ತೆಲುಗು, ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದ ಪ್ರಣೀತಾ ಅಲ್ಲಿ ಕೂಡ ತಮ್ಮ ಕೈ ಚಳಕವನ್ನು ತೋರಿಸಿಬಿಟ್ಟರು. ಇದೂಗ ಸದ್ದಿಲ್ಲದೆ ಬಾಲಿವುಡ್‌ ಗೂ ಕಾಲಿಟ್ಟಿದ್ದಾರೆ. ಹಾಗಂತ, ಅವರೇನೂ ಹಿಂದಿ ಚಿತ್ರದಲ್ಲಿ ನಟಿಸುತ್ತಿಲ್ಲ. ಏನು ಪ್ರಣಿತಾ ಬಾಲಿವುಡ್ ನಲ್ಲೂ ನಟಿಸುತ್ತಾಳಾ? ಸ್ವಲ್ಪ ನಿಲ್ಲಿ , ಪ್ರಣಿತಾ ಹಿಂದಿ ವೀಡಿಯೋ ಆಲ್ಬಂ ಸಾಂಗ್‌ವೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಹೌದು, ಪ್ರಣೀತಾ ಅವರು “ಲೀಡರ್‌’ ನಂತರ ಸಾಕಷ್ಟು ಕಥೆ ಕೇಳಿದ್ದರಂತೆ ಆದರೆ ಆಕೆಗೆ ಯಾವ ಕಥೆಯೂ ಇಷ್ಟವಾಗದೆ ಒಪ್ಪಿಕೊಂಡಿಲ್ಲವಂತೆ.

ಹಾಗಾಗಿ ಆಕೆಗೆ ಹಿಂದಿಯ ಆಲ್ಬಂ ಸಾಂಗ್‌ನಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಹಾಗಾಗಿ ಪ್ರಣೀತಾ ಆ ಹಿಂದಿ ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಂಡಚಿತ್ರೀಕರಣ ಮುಗಿಸಿದ್ದೂ ಆಗಿದೆ. ಈ ಹಿಂದೆ ವಿದ್ಯಾಬಾಲನ್‌ ಅಭಿನಯದ “ತುಮಾರಿ ಸುಲು’ ಚಿತ್ರವನ್ನು ನಿರ್ದೇಶಿಸಿದ್ದ ಸುರೇಶ್‌ ತ್ರಿವೇಣಿ ಅವರು, “ಚನ್‌ ಕಿತ್ತನ್‌’ ಹೆಸರಿನ ವೀಡಿಯೋ ಆಲ್ಬಂ ನಿರ್ದೇಶಿಸುವ ಯೋಚನೆ ಮಾಡಿ, ಆ ಹಾಡಲ್ಲಿ ಪ್ರಣೀತಾ ಅವರನ್ನು ನಟಿಸಲು ಇಂಟ್ರೆಸ್ಟ್‌ ಇದೆಯಾ ಅಂತ ಕೇಳಿದ್ದಾರೆ.

ಒಳ್ಳೆಯ ತಂಡ ಅನಿಸಿದ ಕೂಡಲೇ ಪ್ರಣೀತಾ ಖುಷಿಯಿಂದಲೇ ಗ್ರೀನ್‌ಸಿಗ್ನಲ್‌ ಕೊಟ್ಟಿದ್ದಾರೆ. ಈಗಾಗಲೇ ಮೂರು ದಿನಗಳ ಕಾಲ ಲಡಾಕ್‌ ಹಾಗೂ ಸಿಕ್ಕಿಂ ಸುತ್ತಮುತ್ತಲ ಸುಂದರ ತಾಣಗಳಲ್ಲಿ ಚಿತ್ರೀಕರಣ ಕೂಡ ನಡೆದಿದೆ. ಅಂದಹಾಗೆ, ಈ ವೀಡಿಯೋ ಆಲ್ಬಂನಲ್ಲಿ  ಬಾಲಿವುಡ್‌ ನಟ ಆಯುಷ್ಮಾನ್‌ ಖುರೇನಾ ನಟಿಸಿದ್ದಾರೆ. ಅವರದು ಇಲ್ಲಿ ಕಾಪ್‌ ಅವತಾರ ತಾಳಿರುವ ಪಾತ್ರ. ಅವರ ಜೋಡಿಯಾಗಿ ಪ್ರಣೀತಾ ಕಾಣಿಸಿಕೊಂಡಿದ್ದಾರೆ. ಈ ಹಾಡನ್ನು ರೋಚಕ್‌ ಕೊಹ್ಲಿ ಸಂಯೋಜಿಸಿದ್ದಾರೆ. ಇದೊಂದು ಪಂಜಾಬಿ ಶೈಲಿಯ ಹಾಡಂತೆ.

 

Tags