ಸುದ್ದಿಗಳು

‘ಪ್ರಾರಂಭ’ಕ್ಕೆ ಇಂದು ಅದ್ದೂರಿ ಸಮಾರಂಭ

ಇಂದು ಮುಹೂರ್ತ ಆಚರಿಸಿಕೊಂಡ ಚಿತ್ರತಂಡ

ಬೆಂಗಳೂರು,ಜ.11: ‘ಸಾಹೇಬ’, ‘ಬೃಹಸ್ಪತಿ’ ಚಿತ್ರಗಳ ನಂತರ ನಟ ಮನೋರಂಜನ್ ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಚಂದ್ರಕಲಾ ನಿರ್ದೇಶನದ ‘ಚಿಲ್ಲಂ’ ನಲ್ಲಿ ನಟಿಸುತ್ತಿದ್ದು, ಇಂದು ‘ಪ್ರಾರಂಭ’ ಚಿತ್ರಕ್ಕೆ ಮುಹೂರ್ತವಾಗಿದೆ.

ನಾಲ್ಕನೆಯ ಸಿನಿಮಾ

ಇಂದು ನಾಗರಭಾವಿಯ ಪ್ರಸಿದ್ದ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ‘ಪ್ರಾರಂಭ’ ಚಿತ್ರಕ್ಕೆ ಮುಹೂರ್ತವಾಯಿತು. ಈ ಚಿತ್ರವನ್ನು ಮನು ಕಲ್ಯಾಡಿ ನಿರ್ದೇಶನ ಮಾಡುತ್ತಿದ್ದು, ಅವರೇ ಚಿತ್ರದ ಕಥೆ ಚಿತ್ರಕಥೆ ಬರೆದಿದ್ದಾರೆ. ಚಿತ್ರವನ್ನು ಜೇನುಶ್ರೀ ತನುಷಾ ಪ್ರೋಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಜಗದೀಶ್ ಕಲ್ಯಾಡಿ ಅವರು ನಿರ್ಮಾಣ ಮಾಡುತ್ತಿದ್ದಾರೆ.

 

ಚಿತ್ರದ ಬಗ್ಗೆ

ಈಗಷ್ಟೇ ಚಿತ್ರತಂಡ ಮುಹೂರ್ತ ಆಚರಿಸಿಕೊಂಡಿದ್ದು, ಜ. 14 ರಿಂದ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ. ಚಿತ್ರದಲ್ಲಿ ಮನು ವಿಭಿನ್ನ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಇದೊಂದು ಪಕ್ಕಾ ಪ್ರೇಮಮಯ ಕಥೆಯಾಗಿದೆ. ನಾಯಕ ಇಲ್ಲಿ ಕಾಲೇಜು ಹುಡುಗನಾಗಿ ಮಂಥನ್ ಎಂಬ ಹೆಸರಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಹೇರ್ ಸ್ಟೈಲ್ ಕೂಡಾ ವಿಭಿನ್ನವಾಗಿದೆ.

 

ತಾಂತ್ರಿಕ ವರ್ಗ

ಚಿತ್ರಕ್ಕೆ ನಾಯಕಿಯಾಗಿ ಹುಬ್ಬಳ್ಳಿಯ ಕೀರ್ತಿ ನಟಿಸುತ್ತಿದ್ದು, ಉಳಿದಂತೆ ಶ್ರೀನಿವಾಸ್ ಪ್ರಭು, ಕಡ್ಡಿಪುಡಿ ಚಂದ್ರು ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿದ್ದಾರೆ. ಉಳಿದಂತೆ ಚಿತ್ರಕ್ಕೆ ಸುರೇಶ್ ಬಾಬು ಛಾಯಾಗ್ರಹಣ, ಪ್ರಜ್ವಲ್ ಪೈ ಸಂಗೀತ ಸಂಯೋಜನೆ, ವಿಜಯ್.ಎಂ.ಕುಮಾರ್ ಸಂಕಲನ ರವಿ ಸಂತೆಹಕ್ಲು ಕಲಾ ನಿರ್ದೇಶನವಿದೆ.

  

#praramba #balakninews #manoranajn, #filmnews. #kannadasuddigalu

Tags