ಬಾಲ್ಕನಿಯಿಂದವಿಡಿಯೋಗಳುಸುದ್ದಿಗಳು

ದಸರಾ ಹಬ್ಬಕ್ಕೆ ರಂಗು ತಂದ ‘ಪ್ರಾರಂಭ’ ಟೈಟಲ್ ಸಾಂಗ್

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ‘ಪ್ರಾರಂಭ’ ಚಿತ್ರವು ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ಚಿತ್ರದ ಪ್ರಚಾರ ಕಾರ್ಯ ಶುರುವಾಗಿದ್ದು, ಸದ್ಯ ಚಿತ್ರದ ಟೈಟಲ್ ಸಾಂಗ್ ನ ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ.

‘ಓಹ್ ಮೋಡ, ನೀ ಓಡಿ’ಎಂಬ ಸಾಲುಗಳನ್ನು ಒಳಗೊಂಡ ಈ ಲಿರಿಕಲ್ ವಿಡಿಯೋ  ಹಾಡನ್ನು ಆನಂದ್ ಆಡಿಯೂ ಯುಟ್ಯೂಬ್ ಚಾನಲ್ ನಿಂದ ರಿಲೀಸ್ ಮಾಡಲಾಗಿದೆ. ಸಂತೋಷ್ ನಾಯಕ್ ರಚನೆ ಮಾಡಿರುವ ಈ ಹಾಡಿಗೆ ಪ್ರಜ್ವಲ್ ಪೈ ಮತ್ತು ಅಲೋಕ್ ಧ್ವನಿ ನೀಡಿದ್ದು, ಪ್ರಜ್ವಲ್ ಪೈ ಸಂಗೀತ ಸಂಯೋಜಿಸಿದ್ದಾರೆ.

ಅಂದಹಾಗೆ ಇದೊಂದು ಸಮಾಜಕ್ಕೆ ಮತ್ತು ಯುವಕ-ಯುವತಿಯರಿಗೆ ಸಂದೇಶ ನೀಡುವ ಸಿನಿಮಾವಾಗಲಿದ್ದು, ಮನೋರಂಜನ್ ಗೆ ಕೀರ್ತಿ ಕಲಕೇರಿ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ‘ಕಡ್ಡಿಪುಡಿ’ ಚಂದ್ರು, ಹನುಮಂತೇಗೌಡ, ಸೂರಜ್ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಅಂದ ಹಾಗೆ ಇದೊಂದು ಪಕ್ಕಾ ಪ್ರೇಮಮಯ ಕಥೆಯಾಗಿದೆ. ನಾಯಕ ಇಲ್ಲಿ ಕಾಲೇಜು ಹುಡುಗನಾಗಿ ಮಂಥನ್ ಎಂಬ ಹೆಸರಿನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇವರ ಹೇರ್ ಸ್ಟೈಲ್ ಕೂಡಾ ವಿಭಿನ್ನವಾಗಿದೆ. ಇನ್ನು ಮನು ಕಲ್ಯಾಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರವನ್ನು ಬೆಂಗಳೂರು, ಬಳ್ಳಾರಿ, ಚಿಕ್ಕಮಗಳೂರು, ಗೋವಾ, ಮೂಡಿಗೆರೆ, ಮೈಸೂರು ಮುಂತಾದ ಕಡೆಗಳಲ್ಲಿ ಚಿತ್ರೀಕರಿಸಲಾಗಿದೆ.

ವಿಡಿಯೋ ವೈರಲ್: ಕುರಿ ಕಾಯುವವನ ಕಂಠದಲ್ಲಿ ಬಾಲಿವುಡ್ ಹಾಡು

#Prarambha #PrarambhaMovie, #PrarambhaSong, #PrarambhaLyricalSong #Manoranjan

Tags