ಸುದ್ದಿಗಳು

ನಿರ್ದೇಶಕ ಪ್ರಶಾಂತ್ ರಾಜ್ ರಿಗೆ ಹುಟ್ಟುಹಬ್ಬದ ಶುಭಾಶಯಗಳು

‘ಆರೆಂಜ್’ ಚಿತ್ರದ ಯಶಸ್ಸಿನ ನಂತರ ‘ಲವ್ ಗುರು-2’ ಚಿತ್ರಕ್ಕೆ ಸಿದ್ದತೆ

ಬೆಂಗಳೂರು.ಮಾ.10: ಇಂದು ಸ್ಯಾಂಡಲ್ ವುಡ್ ನ ಹಲವಾರು ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರಾದ ಪ್ರಶಾಂತ್ ರಾಜ್ ಅವರ ಜನ್ಮದಿನ. ಈಗಾಗಲೇ ಆರು ಯಶಸ್ವಿ ಚಿತ್ರಗಳನ್ನು ನಿರ್ದೇಶನ ಮಾಡುವ ಮೂಲಕ ಕನ್ನಡದ ಮುಖ್ಯ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ.

ವಿಶೇಷವೆಂದರೆ, ಇವರಿಗೆ ಯಾರೂ ಗಾಡ್ ಫಾದರ್ ಇಲ್ಲ, ಹಾಗಂತಾ ಸುಮ್ಮನೇ ಕುಳಿತುಕೊಳ್ಳದೇ ತಮ್ಮದೇ ಸ್ವಯಂ ಪ್ರತಿಭೆಯಿಂದ ನಿರ್ದೇಶಕರಾದರು.. ನಿರ್ದೇಶಕನಾಗುವ ಕನಸು ಹೊತ್ತು ತಿರುಗುತ್ತಿದ್ದ ಕಾಲದಲ್ಲಿ ಯಾವ ಅವಕಾಶದ ಬಾಗಿಲುಗಳೂ ತೆರೆದುಕೊಂಡಿರಲಿಲ್ಲ. ಆದರೆ ತಮ್ಮ ಗುರಿಯನ್ನು ತಲುಪಿಯೇ ತೀರುವ ಛಲ, ತಮ್ಮ ಪ್ರತಿಭೆ ಮತ್ತು ಪರಿಶ್ರಮಗಳ ಮೇಲಿನ ಅಚಲ ನಂಬಿಕೆಯೇ ಅವರನ್ನಿಂದು ನಿರ್ದೇಶಕರನ್ನಾಗಿ ರೂಪಿಸಿದೆ.

2009 ರಲ್ಲಿ ‘ಲವ್ ಗುರು’ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದ ಪ್ರಶಾಂತ್ ರಾಜ್ ಆನಂತರ ‘ಗಾನ ಬಜಾನ’, ‘ವಿಜಲ್’, ‘ಜೂಮ್’, ‘ದಳಪತಿ’, ‘ಆರೆಂಜ್’ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಸದ್ಯ ‘ಲವ್ ಗುರು’ ಚಿತ್ರದ ಸಿಕ್ವೇಲ್ ಗೆ ತಯಾರಿ ನಡೆಸುತ್ತಿದ್ದಾರೆ.

ಬೆಂಗಳೂರಿನ ಎಚ್.ಎ.ಎಲ್ ಏರಿಯಾದಲ್ಲಿಯೇ ಹುಟ್ಟಿ ಬೆಳೆದ ಪ್ರಶಾಂತ್ ರಾಜ್ ಓದಿಕೊಂಡಿದ್ದು ಎಂಬಿಎ. ಆದರೆ ಅವರ ಕನಸಾಗಿದ್ದದ್ದು ತಾವು ಓದಿಕೊಂಡಿದ್ದಕ್ಕೆ ತದ್ವಿರುದ್ಧವಾದ ಸಿನಿಮಾ ನಿರ್ದೇಶನ. ಫಿಲಂ ಮೇಕಿಂಗ್ ಡಿಪ್ಲೊಮಾ ಪೂರೈಸಿ ಬಂದರಾದರೂ ಅವಕಾಶಗಳೇನೂ ಸಿಗಲಿಲ್ಲ.

ಅಪಾರವಾದ ಕನ್ನಡಾಭಿಮಾನಿಯಾಗಿರುವ ಪ್ರಶಾಂತ್ ಕನ್ನಡದಲ್ಲಿಯೇ ನಿರ್ದೇಶಕನಾಗಿ ನೆಲೆ ನಿಲ್ಲುವ ಛಲ ಹೊಂದಿದ್ದರು. ಆದ್ದರಿಂದಲೇ ಸಾಕಷ್ಟು ತಯಾರಿ ನಡೆಸಿ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಇವರ ಸಿನಿ ಜೀವನ ಹೀಗೆಯೇ ನಿರಂತರವಾಗಿ, ಖುಷಿ ಖುಷಿಯಿಂದ ಸಾಗುತ್ತಿರಲಿ ಹಾಗೂ ‘ಲವ್ ಗುರು-2’ ಚಿತ್ರಕ್ಕೆ ಶುಭವಾಗಲಿ ಎಂದು ಬಾಲ್ಕನಿ ನ್ಯೂಸ್ ಶುಭ ಹಾರೈಸುತ್ತದೆ.

ಪಾಯಲ್ ನಟಿಸುತ್ತಿರುವ ‘ಭಿನ್ನ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ

#prashanthraj, #balkaninews, #birthday #orange, #kannadasuddigalu

Tags