ಸುದ್ದಿಗಳು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗಿಂತಲೂ ಬಿಗ್ ಸ್ಟಾರ್ ನಿಂದ ‘ನಟ ಭಯಂಕರ’ ಚಿತ್ರದ ಫೋಸ್ಟರ್ ರಿಲೀಸ್..!!!

ಪ್ರೇಮಿಗಳ ದಿನಾಚರಣೆ ಪ್ರಥಮ್ ಕಡೆಯಿಂದ ಸಿಗಲಿರುವ ಉಡುಗೊರೆ

ಬೆಂಗಳೂರು.ಫೆ.12

ಕನ್ನಡ ಬಿಗ್ ಬಾಸ್ ಸರಣಿ 4 ರ ವಿಜೇತ ಒಳ್ಳೆ ಹುಡುಗ ಪ್ರಥಮ್, ಇದೇ ಮೊದಲ ಬಾರಿಗೆ ನಟನೆಯೊಂದಿಗೆ ನಿರ್ದೇಶನ ಮಾಡುತ್ತಿರುವ ‘ನಟ ಭಯಂಕರ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ನಡುವೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನಾಡಿದ್ದು, ಬಿಡುಗಡೆಯಾಗುತ್ತಿದೆ.

 

ಚಿತ್ರದ ಬಗ್ಗೆ

ಈಗಾಗಲೇ ಚಿತ್ರವು ಮುಕ್ತಾಯ ಹಂತಕ್ಕೆ ಬಂದಿದ್ದು, ಚಿತ್ರದಲ್ಲಿ ಪ್ರಥಮ್ ಜೊತೆಗೆ ಸಾಯಿಕುಮಾರ್, ಲೀಲಾವತಿ, ಕುರಿ ಪ್ರತಾಪ್, ಓಂ ಪ್ರಕಾಶ್ ರಾವ್, ಬೀರಾದಾರ್, ಶಂಕರ್ ಅಶ್ವಥ್, ಸೇರಿದಂತೆ ಅನೇಕರು ಚಿತ್ರದಲ್ಲಿದ್ದಾರೆ.

 

ಫಸ್ಟ್ ಲುಕ್ ಪೋಸ್ಟರ್

ಈಗಾಗಲೇ ಈ ಚಿತ್ರದ ಟ್ರೈಲರ್ ಅನ್ನು ಸಿನಿಮಾ ಕಲಾವಿದರು ಸೇರಿದಂತೆ ಅನೇಕ ರಾಜಕೀಯ ಮುಖಂಡರಿಗೂ ಪ್ರಥಮ್ ತೋರಿಸಿದ್ದಾರೆ. ಈಗ ಮೊದಲ ಹಂತವಾಗಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುತ್ತಿದ್ದಾರೆ.

ಸದ್ಯ ಅವರೇ ಹೇಳಿಕೊಂಡಂತೆ, ಈ ಪೋಸ್ಟರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಗಿಂತಲೂ ಬಿಗ್ ಸ್ಟಾರ್ ರಿಲೀಸ್ ಮಾಡುತ್ತಿದ್ದಾರೆ. ಯಾರು ಅಂತ ಕೇಳಿದರೆ, ಕಾದು ನೋಡಿ, ಇನ್ನೇರಡು ದಿನಗಳಷ್ಟೇ ಬಾಕಿ ಎನ್ನುತ್ತಾರೆ.

“ನನ್ನ ‘ಎಂ.ಎಲ್.ಎ’ ಚಿತ್ರದ ಆಡಿಯೋ ರಿಲೀಸ್ ಮಾಡಿದ್ದು ಪ್ರೀತಿಯ ಚಾಲೆಂಜಿಂಗ್ ಸ್ಟಾರ್! ಈಗ ನನ್ನ ಮುಂದಿನ ಸಿನಿಮಾ ನಟಭಯಂಕರ ಚಿತ್ರದ ಪೊಸ್ಟರ್ ರಿಲೀಸ್ ಮಾಡುವುದಕ್ಕೆ ಚಾಲೆಂಜಿಂಗ್ ಸ್ಟಾರ್ ಗಿಂತಲೂ ಬಿಗ್ ಸ್ಟಾರ್ ಬರ್ತಾ ಇದ್ದಾರೆ!! ಮನುಷ್ಯ ಜೀವನದಲ್ಲಿ ಮುಂದುವರೆಯಬೇಕು! ಎಸ್ ಎಸ್ ಎಲ್ ಸಿ ಆದ್ಮೇಲೆ ಪಿಯೂಸಿ, ಅದಾದ್ಮೇಲೆ ಡಿಗ್ರಿ…
ಲಾಸ್ಟ್ ಫಿಲ್ಮ್ ಗೆ ದರ್ಶನ್ ಸರ್, ಆಡಿಯೋ ರಿಲೀಸ್ ಮಾಡಿದ್ದರು. ನಟಭಯಂಕರ ಸಿನಿಮಾಕ್ಕೆ ದರ್ಶನ್ ಸರ್ ಗಿಂತಲೂ ಬಿಗ್ ಸ್ಟಾರ್ ನ ಕರೆಸಿ ನಾಳಿದ್ದು ಪೋಸ್ಟರ್ ರಿಲೀಸ್ ಮಾಡಿಸುತ್ತಿದ್ದೀನಿ. ನಿಮ್ಮೆಲ್ಲರ ಹಾರೈಕೆ ಇರಲಿ!!! ಎಂದು ಪ್ರಥಮ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಚಿತ್ರದ ಹೆಸರು ಕೇಳುತ್ತಿದ್ದಂತೆಯೇ ಹಿರಿಯ ನಟ ವಜ್ರಮುನಿ ನೆನಪಾಗುತ್ತಾರೆ, ಈ ಬಗ್ಗೆ ಪ್ರಥಮ್ ಹೀಗೆ ಹೇಳುತ್ತಾರೆ, “ ಹಿರಿಯ ನಟ ವಜ್ರಮುನಿ ಅವರ ಬಗ್ಗೆ ನನಗೆ ಅಪಾರ ಅಭಿಮಾನವಿದೆ, ಗೌರವವಿದೆ ಅವರ ಹೆಸರಿನಡಿ ಪಾತ್ರ ಮಾಡುತ್ತಿರುವುದು ನಿಜಕ್ಕೂ ಖುಷಿ ತಂದಿದೆ”

 

 

ಒಳ್ಳೆ ಹುಡ್ಗ ಪ್ರಥಮ್ ಗೆ ಗಲ್ಲು ಶಿಕ್ಷೆ.!!!

#pratham, #balkaninews #natabhayankar, #darshan, #MLA, #filmnews, #kanandasuddigalu

Tags