ಸುದ್ದಿಗಳು

ಸಿನಿಮಾಕ್ಕಾಗಿ ಪ್ರಾಣವನ್ನೇ ಪಣವಿಟ್ಟು ಫೈಟ್ ಮಾಡಿದ ಪ್ರಥಮ್

‘ನಟ ಭಯಂಕರ’ ಚಿತ್ರಕ್ಕಾಗಿ ರಿಸ್ಕಿ ತೆಗೆದುಕೊಂಡ ಒಳ್ಳೆ ಹುಡುಗ

ಬೆಂಗಳೂರು.ಮಾ.24: ಕನ್ನಡ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಈಗಾಗಲೇ ‘ದೇವ್ರಂಥ ಮನುಷ್ಯ’ ಹಾಗೂ ‘ಎಂ.ಎಲ್.ಎ’ ಚಿತ್ರಗಳಲ್ಲಿ ನಟಿಸಿ, ಈಗ ‘ನಟ ಭಯಂಕರ’ ಚಿತ್ರದ ಮೂಲಕ ನಿರ್ದೇಶನ ಮರಳಿದ್ದಾರೆ. ಅವರು ನಟಿಸಿ-ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಚಿತ್ರದಲ್ಲಿ ಸಾಯಿಕುಮಾರ್, ಶಂಕರ್ ಅಶ್ವಥ್ ಸೇರಿದಂತೆ ಅನೇಕ ಕಲಾವಿದರು ನಟಿಸುತ್ತಿದ್ದಾರೆ.

ಸದ್ಯ ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನದಲ್ಲಿ ಭರ್ಜರಿಯಾಗಿಯೇ ಫೈಟ್ ಮಾಡಿದ್ದಾರೆ ಪ್ರಥಮ್. ಈ ಚಿತ್ರದ ಮೂಲಕ ಅವರು ಸಾಹಸ ಮಾಡುವ ಮೂಲಕವೂ ಗಮನ ಸೆಳೆಯಲಿದ್ದಾರೆ. ಅಂದ ಹಾಗೆ ಈ ಫೈಟಿಂಗ್ ದೃಶ್ಯಗಳು ಸಹಜವಾಗಿ ಮೂಡಿ ಬರಲೆಂಬ ಉದ್ದೇಶ ಚಿತ್ರತಂಡದ್ದು. ಹೀಗಾಗಿ ಯಾವುದೇ ಡ್ಯೂಪ್ ಬಳಸದೆ ಚಿತ್ರೀಕರಣ ಮಾಡಲಾಗುತ್ತಿತ್ತು.

  

ಈ ವೇಳೆ ಪ್ರಥಮ್ ಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಹೀಗಾಗಿ ಅವರಿಗೆ 15 ದಿನಗಳ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ. ಈ ಚಿತ್ರದಲ್ಲಿ ಪ್ರಥಮ್ ನಾಯಕಿಯಾಗಿ ಸುಷ್ಮಿತಾ ಜೋಷಿ ನಟಿಸುತ್ತಿದ್ದು, ಶೋಭರಾಜ್, ಓಂ ಪ್ರಕಾಶ್ ರಾವ್, ಕುರಿ ಪ್ರತಾಪ್ ಮುಂತಾದವರು ಪೋಷಕ ಪಾತ್ರಗಳಲ್ಲಿದ್ದಾರೆ.

  

‘ಪ್ರಥಮ್ ತುಂಬಾ ರಿಸ್ಕ್ ತಗೆದುಕೊಂಡು ಸಾಹಸ ಸನ್ನಿವೇಶದಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಹೀರೋ ಇಂಟ್ರಕ್ಷನ್ ಫೈಟ್ ಆಗಿದ್ದು, ಪಕ್ಕಾ ಕಮರ್ಷಿಯಲ್ ಸ್ಟೈಲ್‌ ನಲ್ಲಿ ಸಂಯೋಜನೆ ಮಾಡಿದ್ದೇನೆ. ಎರಡು ಡೈಮೆನ್ಷನ್ ಇರುವಂಥ ಫೈಟ್ ಇದಾಗಿದೆ’ ಎನ್ನುತ್ತಾರೆ ಥ್ರಿಲ್ಲರ್ ಮಂಜು.

ಅಂದ ಹಾಗೆ ಇದೊಂದು ಪಕ್ಕಾ ಮನರಂಜನಾತ್ಮಕ ಚಿತ್ರವಾಗಿದ್ದು, ಯೂತ್ಸ್ ಗೆ ಒಂದೊಳ್ಳೆ ಸಂದೇಶ ಮತ್ತು ಮನರಂಜನೆ ಕೊಡುವ ಚಿತ್ರ. ಹಾಗಾಗಿ ಈ ಸಿನಿಮಾದ ಬಗ್ಗೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಪ್ರಥಮ್..

ಕಾಮಿಡಿ ಮಹಾರಾಜ ಸಾಧುಕೋಕಿಲರಿಗೆ ಜನ್ಮದಿನದ ಶುಭಾಶಯಗಳ

#pratham, #fight, #balkaninews #natabhayankara, #kannadasuddigalu, #filmnews,

Tags