ಸುದ್ದಿಗಳು

ನೆನಪಿನ ಅಲೆಗಳಲ್ಲಿ ಬಾಲಿವುಡ್ ಡಿಂಪಲ್ ಬೆಡಗಿ!

ಬೆಂಗಳೂರು, ಆ.02: ಸೂಪರ್ ಸ್ಟಾರ್ ಮಹೇಶ್ ಬಾಬು, ಬಾಲಿವುಡ್ ಬೆಡಗಿ ಪ್ರೀತಿ ಝಿಂಟಾ ಅವರ ಹೆಸರನ್ನು ಜೊತೆಯಲ್ಲಿ ಒಮ್ಮೆಲೆ ಕೇಳಿದರೆ, ತಕ್ಷಣ ನೆನಪಾಗೋದು ‘ರಾಜುಕುಮಾರುಡು’ ಸಿನೆಮಾ. ಸದ್ಯ, ಟಾಲಿವುಡ್ ಚಿತ್ರರಂಗದಲ್ಲಿ ಅಗ್ರಸ್ಥಾನವನ್ನು ಸಂಪಾದಿಸಿಕೊಂಡಿರುವ ಪ್ರಿನ್ಸ್ ಮಹೇಶ್ ಬಾಬು, ನಾಯಕನಾಗಿ ಪರಿಚಯಗೊಂಡಿರುವ ಮೊದಲ ಚಿತ್ರ ಇದೇ ಎಂದು ಹೇಳಬಹುದು. ಈ ಸಿನೆಮಾ ತೆರೆ ಕಂಡು ಸುಮಾರು 19 ವರ್ಷಗಳನ್ನು ಕಳೆದಿದೆ, ಎಂದು ಬಾಲಿವುಡ್ ಬೆಡಗಿ ಪ್ರೀತಿ ಝಿಂಟಾ ಸ್ವತಃ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅನುಭವಗಳ ಅಪ್ಪುಗೆ

‘ರಾಜುಕುಮಾರುಡು’ ಸಿನೆಮಾ ತೆರೆಕಂಡು ಇಂದಿಗೆ 19 ವರ್ಷಗಳಾಗಿವೆ ಎಂಬುದನ್ನು ನನಗೆ ನಂಬಲಾಗುತ್ತಿಲ್ಲ, ಮಹೇಶ್ ಬಾಬು ಜೊತೆ ಈ ಚಿತ್ರದಲ್ಲಿ ನಟಿಸಿರುವ ಕ್ಷಣಗಳು ಹಿತವಾದ ಅನುಭವಗಳನ್ನು ನೀಡಿವೆ. ತೆಲುಗು ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವ ನಿಟ್ಟಿನಲ್ಲಿ ತೆಲುಗು ಮಾತನಾಡುವುದನ್ನು ಕಲಿಯಲು ನಿದ್ರೆ ಇಲ್ಲದೇ ಎಷ್ಟೋ ರಾತ್ರಿಗಳನ್ನು ಕಳೆದಿದ್ದೇನೆ. ಈ ಹಿನ್ನೆಯಲ್ಲಿ ನಿರ್ದೇಶಕ ರಾಘವೇಂದ್ರ ರಾವು ಸಾಕಷ್ಟು ಸಹಾಯ ಮಾಡಿದ್ದಾರೆ. ಅವರಿಗೆ ಈ ಮೂಲಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಡಿಂಪಲ್ ಬೆಡಗಿ ಬರೆದುಕೊಂಡಿದ್ದಾರೆ.

ಜೊತೆಗೆ ಚಿತ್ರೀಕರಣ ಸಮಯದಲ್ಲಿ ತೆಗೆದ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ರಾಘವೇಂದ್ರ ರಾವು ಸೇರಿದಂತೆ ಸೂಪರ್ ಸ್ಟಾರ್ ಕೃಷ್ಣ, ಮಹೇಶ್ ಬಾಬು, ನಿರ್ಮಾಪಕ ಅಶ್ವಿನಿ ದತ್ ಮತ್ತು ಪ್ರೀತಿಯವರನ್ನು ಕಾಣಬಹುದು.

Tags