ಸುದ್ದಿಗಳು

25 ನೇ ಚಿತ್ರಕ್ಕೆ ‘ಭರ್ಜರಿ’ ತಯಾರಿ ನಡೆಸಿದ ಲವ್ಲಿ ಸ್ಟಾರ್ ‘ಪ್ರೇಮ್’

ಯಾವುದೇ ಕಲಾವಿದರಲಿ 25, 50, 75, 100 ಎಂಬುದು ಅವರ ಪಾಲಿಗೆ ವಿಶೇಷ ಸಂಖ್ಯೆಯಾಗಿರುತ್ತದೆ. ಹೀಗಾಗಿ ನೆನಪಿರಲಿ ಪ್ರೇಮ್ ಅವರೂ ಸಹ ತಮ್ಮ 25 ನೇ ಚಿತ್ರಕ್ಕಾಗಿ ಜೋರು ತಯಾರಿ ನಡೆಸಿದ್ದಾರೆ.

ಬೆಂಗಳೂರು, ಜು.30: ಪ್ರಕಾಶ್ ನಿರ್ದೇಶನ ಮಾಡಿದ್ದ , 2004 ರಲ್ಲಿ ತೆರೆ ಕಂಡ ‘ಪ್ರಾಣ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಪ್ರೇಮ್ ಅವರಿಗೆ ಬ್ರೇಕ್ ನೀಡಿದ್ದು ನೆನಪಿರಲಿ, ಹೀಗಾಗಿ ಅಲ್ಲಿಂದ ಇಲ್ಲಿಯವರೆಗೂ ಅವರು ಅವರು ನೆನಪಿರಲಿ ಮತ್ತು ಲವ್ಲಿ ಸ್ಟಾರ್ ಪ್ರೇಮ್ ಎಂದೇ ಕರೆಯಲ್ಪಡುತ್ತಿದ್ದಾರೆ.

‘ಲೈಫ್ ಜೊತೆ ಒಂದ್ ಸೆಲ್ಫಿ’

‘ಪ್ರಾಣ’ದಿಂದ ಶುರುವಾದ ಪ್ರೇಮ್ ಅವರ ಸಿನಿ ಜೀವನ ‘ಲೈಫ್ ಜೊತೆ ಒಂದು ಸೆಲ್ಫಿ’ ಚಿತ್ರದ ವರೆಗೂ ಬಂದು ಮುಟ್ಟಿದೆ. ಇದು ಇವರ 24 ನೇ ಚಿತ್ರವಾಗಿದ್ದು, ಆಗಸ್ಟ್ ನಲ್ಲಿ ತೆರೆಗೆ ಬರುತ್ತಿದೆ. ಹೀಗಾಗಿ ಅವರ ಸಿನಿ ಪಯಣದಲ್ಲಿ 24 ಚಿತ್ರಗಳನ್ನು ಪೂರೈಸಿ, ಸೋಲು-ಗೆಲುವು ಎರಡನ್ನೂ ಕಂಡಿರುವ ಪ್ರೇಮ್, 25ನೇ ಚಿತ್ರಕ್ಕೆ ಹೊಸ ಕಥೆಯ ಎದುರು ನೋಡುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ “ನೆನಪಿರಲಿ’ ಪ್ರೇಮ್, ಆಗಸ್ಟ್ 25 ರಂದು ತಮ್ಮ 25ನೇ ಚಿತ್ರವನ್ನು ಅನೌನ್ಸ್ ಮಾಡುವ ಸಾಧ್ಯತೆ ಇದೆ. ಆದರೆ, ಅವರಿಗೆ ಹೊಸತೆನಿಸುವ ಕಥೆ ಸಿಕ್ಕರೆ ಮಾತ್ರ ಆ ಘೋಷಣೆ.

ಹ್ಯಾಟ್ರಿಕ್ ಹೀರೋ

ಒಂದರ್ಥದಲ್ಲಿ ಪ್ರೇಮ್ ಅವರು ಹ್ಯಾಟ್ರಿಕ್ ಹೀರೋ ಎನ್ನಬಹುದು. ಕಾರಣ, ಅವರು ಅಭಿನಯಿಸಿದ ನೆನಪಿರಲಿ, ಜೊತೆ ಜೊತೆಯಲಿ ಹಾಗೂ ಪಲ್ಲಕ್ಕಿ ಚಿತ್ರಗಳು ಶತದಿನ ಪೂರೈಸಿದ್ದವು.

25 ನೇ ಚಿತ್ರದಲ್ಲಿ ಹೊಸತನ

ಪ್ರೇಮ್ ಅವರು ಈಗ ಮಾಡಿದ್ದನ್ನೇ ಮಾಡದಿರಲು ನಿರ್ಧರಿಸಿದ್ದಾರೆ. ರೆಗ್ಯುಲರ್ ಲವ್ ಸ್ಟೋರಿ ಹೊರತಾಗಿ ಅವರಿಗೆ ಇನ್ನೇನೋ ಹೊಸದನ್ನು ಮಾಡುವ ಮನಸ್ಸಾಗಿದೆ. ಹಾಗಾಗಿ ಹೊಸ ಪ್ರಯೋಗವನ್ನು ಎದುರು ನೋಡುತ್ತಿದ್ದಾರೆ. ಸದ್ಯಕ್ಕೆ ಆ ನಿಟ್ಟಿನಲ್ಲಿ ಒಂದಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. ಯಾವುದನ್ನೂ ಅಂತಿಮಗೊಳಿಸಿಲ್ಲವಂತೆ. ಹೀಗಾಗಿ 25 ನೇ ಚಿತ್ರದ ಮುಖಾಂತರ ಹಲವಾರು ವಿಶೇಷತೆಗಳನ್ನು ಹೊತ್ತು ತರಲಿದ್ದಾರಂತೆ.

ಮಗನ ಸಿನಿಮಾ

ಈ ನಡುವೆ ಪ್ರೇಮ್ ಅವರ ಮಗ ‘ಏಕಾಂತ್’ ರಾಮರಾಜ್ಯ ಎನ್ನುವ ಮಕ್ಕಳ ಚಿತ್ರದಲ್ಲಿ ನಟಿಸಿದ್ದು. ಅಗಸ್ಟ್ 10 ರಂದು ತೆರೆ ಕಾಣಲಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸುವ ಪ್ರೇಮ್ ‘ಏಕಾಂತ್‌’ ಗೆ ಈ ರಂಗ ಇಷ್ಟವಾಗಿದೆ. ಅವನೇ ಜಿಮ್ನಾಸ್ಟಿಕ್, ಡ್ಯಾನ್ಸ್, ಫೈಟ್ ಕಲಿತುಕೊಂಡಿದ್ದಾನೆ. ಚಾಮರಾಜ್ ಮಾಸ್ಟರ್ ಬಳಿ ತರಬೇತಿ ಪಡೆಯುತ್ತಿದ್ದಾನೆ. ಓದುವುದರಲ್ಲೂ ಹಿಂದೆ ಬಿದ್ದಿಲ್ಲ’ ಎನ್ನುತ್ತಾರೆ.

ಪ್ರೇಮ್ ಸಿನಿಮಾಗಳು

ಪ್ರಾಣ, ನೆನಪಿರಲಿ, ಪಲ್ಲಕ್ಕಿ, ಸವಿ ಸವಿ ನೆನಪು, ಗೌತಮ್, ಗುಣವಂತ, ಹೊಂಗನಸು, ಎರಡನೇ ಮದುವೆ, ಧನ್ ಧನಾ ಧನ್, ಅತಿ ಅಪರೂಪ, ಚೌಕ, ಚಾರ್ ಮಿನಾರ್, ಫೇರ್ ಆ್ಯಂಡ್ ಲವ್ಲಿ ಸೇರಿದಂತೆ ಒಟ್ಟು 24 ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಗೂ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಎನಿವೇ, ಯಾವುದೇ ಗಾಡ್ ಫಾದರ್ ಮತ್ತು ಸಿನಿಮಾ ಹಿನ್ನಲೆ ಇರದೇ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದಂತ ಚಾಪು ಮೂಡಿಸಿರುವ ನಟ ಪ್ರೇಮ್ ಅವರ ‘ಲೈಫ್ ಜೊತೆ ಒಂದು ಸೆಲ್ಫಿ’ ಚಿತ್ರ ಕ್ಕೆ ಶುಭವಾಗಲಿ ಮತ್ತು 25 ನೇ ಚಿತ್ರವು ಬೇಗನೇ ಶುರುವಾಗಲಿ

 

@ ಸುನೀಲ ಜವಳಿ

Tags

Related Articles

Leave a Reply

Your email address will not be published. Required fields are marked *