ಸುದ್ದಿಗಳು

ಕನ್ನಡದಲ್ಲೊಂದು ‘ಪ್ರೇಮಂ’

ಐಟಿ ಕ್ಷೇತ್ರದ ಜನರ ಬದುಕು ಮತ್ತು ಬವಣೆಗಳನ್ನು ತೋರಿಸುತ್ತಿರುವ ಸಿನಿಮಾ

ಬೆಂಗಳೂರು.ಜ.12: ದಿನಗಳು ಕಳೆದಂತೆ ಕನ್ನಡಕ್ಕೆ ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ “ಪ್ರೇಮಂ’ ಚಿತ್ರತಂಡವೂ ಒಂದು. ಮಲಯಾಳಂನ ಸೂಪರ್ ಹಿಟ್ ಚಿತ್ರವಾದ ‘ಪ್ರೇಮಂ’ ಹೆಸರಿನಲ್ಲಿ ಕನ್ನಡದಲ್ಲೊಂದು ಹೊಸ ಚಿತ್ರ ಸೆಟ್ಟೇರಿದೆ.

ಚಿತ್ರದ ಬಗ್ಗೆ

ಸಿ.ಎಂ.ಹೆಚ್ ಎಂಟರ್ಟೈನ್ಮೆಂಟ್ ಪ್ರೈ.ಲಿ. ಲಾಂಛನದಲ್ಲಿ ಶ್ರೀಮತಿ ರತ್ನ ಭುವನೇಶ್ವರ್ ‘ಪ್ರೇಮಂ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.  ಈ ಹಿಂದೆ ‘ಹೊಂಬಣ್ಣ’ ಚಿತ್ರದ ಮೂಲಕ ಚಂದನವನದಲ್ಲಿ ಗುರುತಿಸಿಕೊಂಡಿದ್ದ ಧನುಗೌಡ ಇದೀಗ ‘ಪ್ರೇಮಂ’ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುವುದರೊಂದಿಗೆ ನಿರ್ದೇಶನದ ಜವಾಬ್ದಾರಿಯನ್ನು ಅವರೇ ಹೊತ್ತುಕೊಂಡಿದ್ದಾರೆ.

‘ಪ್ರೇಮಂ’ ಚಿತ್ರದ ನಾಯಕನಾಗಿರುವ ಧನುಗೌಡರವರು ಇತ್ತೀಚೆಗೆ ಅರ್ನವ ವಿನ್ಯಾಸ್ ಎಂದು ತಮ್ಮ ಹೆಸರನ್ನು ಬದಲಾವಣೆ ಮಾಡಿಕೊಂಡಿದ್ದು, ಇವರಿಗೆ ನಾಯಕಿಗೆ ಮೋಕ್ಷ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ ಹಾಗೆ ಚಿತ್ರದ ಹೆಸರು ಕೇಳಿದೊಡನೇ ಇದೊಂದು ರಿಮೇಕ್ ಸಿನಿಮಾ ಇರಬಹುದಾ ಎಂದು ಅನಿಸುತ್ತದೆ. ಆದರೆ ಇದು ಕನ್ನಡದ ಅಪ್ಪಟ ಸ್ವಮೇಕ್ ಚಿತ್ರವಾಗಿದೆ.

ಚಿತ್ರತಂಡ

ಇನ್ನುಳಿದಂತೆ ಚಿತ್ರದಲ್ಲಿ ತಾರಾ, ಪದ್ಮಜಾ ರಾವ್, ಮೈಸೂರು ಗೋಪಿ, ಜ್ಯೋತಿ ರಾಯ್, ಮುಂತಾದವರು ಅಭಿನಯಿಸಲಿದ್ದಾರೆ. ವಾಸುಕಿ ವೈಭವ್ ಅವರ ಸಂಗೀತ ಪುಷ್ಪರಾಜ್ ಅವರ ಛಾಯಾಗ್ರಹಣ, ಸತೀಶ್ ಚಂದ್ರ ಅವರ ಸಂಕಲನ ಈ ಚಿತ್ರಕ್ಕಿರಲಿದೆ. ಯೋಗರಾಜ್ ಭಟ್ ಹಾಗೂ ಜಯಂತ ಕಾಯ್ಕಿಣಿ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ.

#premam #balakninews #filmnews, #kannadasuddigalu #premamkannadamovie

 

Tags