ಸುದ್ದಿಗಳು

ಪ್ರಚಾರ ಮಾಡಲೆಂದೇ ಕಾರೊಂದನ್ನು ಸಿದ್ದಪಡಿಸಿದ ಚಿತ್ರತಂಡ

ಬೆಂಗಳೂರು, ಏ.24:

ಟ್ರೇಲರ್ ಪೋಸ್ಟರ್ ಗಳ ಮೂಲಕ ಭಾರೀ ಸದ್ದು ಮಾಡುತ್ತಿರುವ ಜಗ್ಗೇಶ್ ಅಭಿನಯದ ಚಿತ್ರ ‘ಪ್ರೀಮಿಯರ್ ಪದ್ಮಿನಿ’ ಈ ವಾರ ಬಿಡುಗಡೆಯಾಗುತ್ತಿದೆ. ಈಗಾಗಲೇ ಸಕ್ಕತ್ ಸೌಂಡ್ ಮಾಡ್ತಾ ಇರುವ ಈ ಚಿತ್ರ ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡಲು ರೆಡಿಯಾಗಿದೆ. ಈ ಪ್ರಚಾರಕ್ಕೆಂದೆ ಕಾರೊಂದನ್ನು ಸಿದ್ದಪಡಿಸಿದ ಚಿತ್ರತಂಡ.

ತೆರೆದ ವಾಹನದಲ್ಲಿ ಪ್ರಚಾರ

‘ಪ್ರೀಮಿಯರ್ ಪದ್ಮಿನಿ’ ಟೈಟಲ್ ಮೂಲಕವೇ ಬಾರೀ ಸದ್ದು ಮಾಡಿದ ಸಿನಿಮಾ. ಇದೀಗ ವಿಭಿನ್ನ ಟೈಟಲ್ ನಂತೆಯೇ ವಿಭಿನ್ನ ರೀತಿಯಲ್ಲಿ ಸಿನಿಮಾ ಪ್ರಚಾರ ಮಾಡಲು ಮುಂದಾಗಿದೆ ಈ ಚಿತ್ರತಂಡ. ಸದ್ಯ ಈ ಪ್ರಚಾರಕ್ಕಾಗಿಯೇ ಕಾರೊಂದನ್ನು ಸಿದ್ದಪಡಿಸಿದ್ದು, ಈ ಕಾರ್ ವಿಭಿನ್ನವಾಗಿದೆ. ಓಪನ್ ಕಾರ್ ಇದಾಗಿದ್ದು, ಕಾರಿನ ಮೇಲೆ ಪ್ರೀಮಿಯರ್ ಪದ್ಮಿನಿ ಪೋಸ್ಟರ್ ಅಂಟಿಸಲಾಗಿದೆ.

ಸಿನಿಮಾದಲ್ಲಿದೆ ದೊಡ್ಡ ತಾರಾಗಣ

ಇನ್ನೂ ಪ್ರೀಮಿಯರ್ ಪದ್ಮಿನಿ ಸಿನಿಮಾವನ್ನು ನಿರ್ದೇಶಕ ರಮೇಶ್​ ಇಂದಿರಾ ನಿರ್ದೇಶನ ಮಾಡಿದ್ದಾರೆ. ಶೃತಿ ನಾಯ್ಡು ನಿರ್ಮಾಣ ಮಾಡುತ್ತಿರುವ ಸಿನಿಮಾ ಇದಾಗಿದೆ. ಅರ್ಜುನ್ ಜನ್ಯಾ ಮ್ಯೂಸಿಕ್​ ಕಂಪೋಸ್​ ಮಾಡಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಜಗ್ಗೇಶ್​ ಜೊತೆಗೆ ಸುಧಾರಾಣಿ, ಪ್ರಮೋದ್, ಹಿತಾ ಚಂದ್ರಶೇಖರ್, ವಿವೇಕ್ ಸಿಂಹ ಸೇರಿದಂತೆ ಹಲವಾರು ಮಂದಿಯ ತಾರಾಗಣವಿದೆ. ಇನ್ನೂ ಈ ಚಿತ್ರ ಇದೇ ಶುಕ್ರವಾರ ತೆರೆಗೆ ಬರಲಿದೆ.

Image result for premier padmini movie

Image result for premier padmini movie

Related image

Image result for premier padmini movie

ಅಣ್ಣಾವ್ರ ಮನೆಯಲ್ಲಿ ಮದುವೆ ಸಂಭ್ರಮ

#balkaninews #premierpadmini #premierpadminimovie #premierpadminitrailer #premierpadminiteaser #premierpadminifacebook #shruthinaidu #rameshindira #pramod #zeekannada

Tags