ಸುದ್ದಿಗಳು

ಯೂಟ್ಯೂಬ್ ನಲ್ಲಿ ಭರ್ಜರಿ ವೀಕ್ಷಣೆ ಪಡೆಯುತ್ತಿರುವ ‘‘ಪ್ರೀಮಿಯರ್ ಪದ್ಮಿನಿ’ ಟೈಟಲ್ ಸಾಂಗ್

ಬೆಂಗಳೂರು, ಜ.18: ಜಗ್ಗೇಶ್ ಅಭಿನಯದ ‘ಪ್ರೀಮಿಯರ್ ಪದ್ಮಿನಿ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಇದೀಗ ಈ ಸಿನಿಮಾದ ಟೈಟಲ್ ಹಾಡೊಂದು ಬಿಡುಗಡೆಯಾಗಿದೆ.

ಹೌದು, ಜಗ್ಗೇಶ್ ಸಿನಿಮಾಗಳೇ ಹಾಗೇ ಏನಾದ್ರೂ ವಿಶೇಷತೆ ಇದ್ದೇ ಇರುತ್ತದೆ. ಅವರ ಹಾಡುಗಳ ಬಗ್ಗೆ ಇನ್ನು ಕೇಳಬೇಕಾ..? ಅವರ ಹಾಡುಗಳಿಗೆ ಹೆಜ್ಜೆ ಹಾಕೋವ್ರು, ಕತ್ತು ಕುಣಿಸದೇ ಇರೋವ್ರೆ ಇಲ್ಲ. ಇನ್ನು ಈ ಹಾಡಿನಲ್ಲಿ ಯೋಗರಾಜ್ ಭಟ್ ಇದ್ದರೆ ಇನ್ನು ಕೇಳಬೇಕಾ..? ಇದೀಗ ಈ ಜೋಡಿಯ ಜೊತೆಗೆ ಅರ್ಜುನ್ ಜನ್ಯಾ ಸಂಗೀತಾ ಹಾಗೂ ವಿಜಯ್ ಪ್ರಕಾಶ್ ಧ್ವನಿ ಇದ್ದರೆ ಹೇಗಿರುತ್ತದೆ ಹೇಳಿ..? ನಿರೀಕ್ಷೆಗೂ ಹೆಚ್ಚಿನ ರೀತಿಯ ಸದ್ದು ಮಾಡುತ್ತೆ ಆ ಹಾಡು. ಇದೀಗ ‘ಪ್ರೀಮಿಯರ್ ಪದ್ಮಿನಿ’ ಸಿನಿಮಾದ ಹಾಡಿನಲ್ಲಿ ಇಷ್ಟು ಮಂದಿ ಕಮಾಲ್ ಮಾಡಿದ್ದಾರೆ.

ರಮೇಶ್ ಇಂದಿರಾ ನಿರ್ದೇಶನದ ಸಿನಿಮಾ

‘ಪ್ರಿಮೀಯರ್ ಪದ್ಮಿನಿ’. ಸದ್ಯ ಶೂಟಿಂಗ್ ಕಂಪ್ಲೀಟ್ ಮಾಡಿದ ಸಿನಿಮಾ. ಇನ್ನು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ ರಮೇಶ್ ಇಂದಿರಾ. ಇನ್ನು ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನವರಸ ನಾಯಕ ಜಗ್ಗೇಶ್ ಹಾಗೂ ಪ್ರಮೋದ್ ಕಾಣಿಸಿಕೊಂಡಿದ್ಧಾರೆ.. ಪ್ರಮೋದ್ ಕಿರುತೆರೆಯಲ್ಲಿ ಬಹಳಷ್ಟು ಸೀರಿಯಲ್‌ ನಲ್ಲಿ ಹೆಸರು ಮಾಡಿದ್ದು, ‘ಪ್ರಿಮೀಯರ್ ಪದ್ಮಿನಿ’  ಚಿತ್ರದಲ್ಲಿ ಜಗ್ಗೇಶ್ ಸಾಥ್ ನೀಡಿದ್ದಾರೆ. ಈ ಚಿತ್ರದಲ್ಲಿ ಪ್ರಮೋದ್ ಕಾರು ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ಧಾರೆ.

ಜಗ್ಗೇಶ್, ಪ್ರಮೋದ್ ಮುಖ್ಯ ಪಾತ್ರದಲ್ಲಿರೋ ಚಿತ್ರ

ಇನ್ನು ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ಬಾರೀ ಹವಾ ಸೃಷ್ಟಿ ಮಾಡಿದೆ. ಅತ್ಲಾಗೆ ಇತ್ಲಾಗೆ ಎನ್ನುವ ಹಾಡು ಇದಾಗಿದ್ದು, ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿದೆ. ಇನ್ನು ಈ ವಿಡಿಯೋಗೆ ಅಭಿಮಾನಿಗಳು ಕೂಡ ಫಿದಾ ಆಗಿದ್ದಾರೆ. ಇನ್ನು ಈ ಚಿತ್ರಕ್ಕೆ ಬಂಡವಾಳ ಹೂಡುವುದರ ಮೂಲಕ ನಿರ್ಮಾಣ ಮಾಡಿರೋದು ಶೃತಿ ನಾಯ್ಡು.. ಇನ್ನು ಈ ಚಿತ್ರದಲ್ಲಿ ಕಲರ್‌ಫುಲ್ ಸಾಂಗ್ಸ್ ಇರಲಿದ್ದು, ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ನಿರ್ದೇಶನ ಮಾಡಿದ್ದಾರೆ. ಒಟ್ಟಿನಲ್ಲಿ ಚಿತ್ರದ ಶೂಟಿಂಗ್‌ ನನ್ನು ಇಂದು ಮುಗಿಸಿರೋ ಚಿತ್ರತಂಡ ಇದೇ ಮಾರ್ಚ್ ತಿಂಗಳಲ್ಲಿ ತೆರೆಗೆ ಬರಲು ಎಲ್ಲಾ ಸಿದ್ದತೆಯನ್ನು ಮಾಡಿಕೊಂಡಿದೆ..

 

View this post on Instagram

 

#premierpadmini #song #shoot #shruthinaiduproductionhouse #imransardariya #rameshindra ಶುಭದಿನ..

A post shared by Jaggesh Shivalingappa (@actor_jaggesh) on

#PremierPadmini #PremierPadminikannadamovie #pramodandjaggesh #balkaninews

Tags