ಸುದ್ದಿಗಳು

ಪ್ರಣಯ ಜೋಡಿಗಳ ಮದುವೆಗೆ ದಿನಾಂಕ ನಿಗದಿ..

ಪ್ರಿನ್ಸ್ ನರುಲಾ ಹಾಗೂ ನಟಿ ಯುವಿಕಾ ಚೌಧರಿ ವಿವಾಹ ಮಹೋತ್ಸವ

ಮುಂಬೈ,ಸೆ.11: ರಿಯಾಲಿಟಿ ಶೋಗಳ ಸ್ಟಾರ್ ಪ್ರಿನ್ಸ್‌ ನರುಲಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಹಾಗೆಯೇ ‘ಮಳೆಯಲಿ ಜೊತೆಯಲಿ ಸಿನಿಮಾದಲ್ಲಿ ಗಣೇಶ್ ಜೊತೆ ನಟಿಸಿ ಪಡ್ಡೆ ಹುಡುಗರ ಮನಸನ್ನ ಕದ್ದ ಯುವಿಕಾ ಚೌಧರಿ ಸಹ ನಮಗೆ ಗೊತ್ತಿಲ್ಲದೇ ಇರುವುದಿಲ್ಲ.

Image result for prince narula yuvika

 ಅಕ್ಟೋಬರ್ 12 ರಂದು ವಿವಾಹ

ಇವರಿಬ್ಬರು ಬಿಗ್‌ಬಾಸ್-9 ರಿಯಾಲಿಟಿ ಶೋನಲ್ಲಿ ಗೆಳೆಯರಾಗಿ, ನಂತರ ಪ್ರೇಮಿಗಳಾದವರು. ಸಂದರ್ಶನವೊಂದರಲ್ಲಿ ಮದುವೆಯ ಗುಟ್ಟು ಬಿಟ್ಟುಕೊಟ್ಟ ಪ್ರಿನ್ಸ್‌ ಪಂಜಾಬಿ ಸಂಪ್ರದಾಯದಂತೆ ಮದುವೆಯಾಗುವುದಾಗಿ ತಿಳಿಸಿದ್ದಾರೆ.

ಪ್ರಿನ್ಸ್ ನರುಲಾ ಹಾಗೂ ನಟಿ ಯುವಿಕಾ ಚೌಧರಿ ವಿವಾಹ ಮಹೋತ್ಸವ ಮುಂದಿನ ತಿಂಗಳು ನಡೆಯಲಿದೆ. ವರದಿಗಳ ಪ್ರಕಾರ, ಅಕ್ಟೋಬರ್ 12 ರಂದು ಪ್ರಿನ್ಸ್ ನರುಲಾ-ಯುವಿಕಾ ಚೌಧರಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮೂರು ದಿನಗಳ ಕಾಲ ಮದುವೆ ನಡೆಯಲಿದ್ದು, ಅಕ್ಟೋಬರ್ 10 ರಿಂದಲೇ ಕಾರ್ಯಕ್ರಮ ಶುರುವಾಗಲಿದೆ. ಮುಂಬೈನ ಜುಹುನಲ್ಲಿರುವ ಹೋಟೆಲ್ ‘ ಸನ್ ಅಂಡ್ ಸ್ಯಾಂಡ್ ನಲ್ಲಿ ಜೋಡಿಯ ಆರತಕ್ಷತೆ ನಡೆಯಲಿದೆ.

Tags

Related Articles