ಸುದ್ದಿಗಳು

ವಿಲನ್ ಆಗಿ ಬದಲಾದ ಕಾಮಿಡಿಯನ್…!

ಹೈದ್ರಾಬಾದ್, ಜ.17:

ಬರಹಗಾರ ಮತ್ತು ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಪ್ರತಿಬಾರಿಯೂ ಹೊಸದನ್ನು ಪ್ರಯೋಗಿಸುವುದರ ವಿಚಾರದಲ್ಲಿ ಯಾವಾಗಲೂ ಮುಂದು. ಈ ವಿಚಾರದಲ್ಲಿ ಅವರು ಹಿಂದೂ ಮುಂದೂ ನೋಡೋದೆ ಇಲ್ಲ. ಸುನಿಲ್ ಅವರನ್ನು ಸಪೋರ್ಟಿಂಗ್ ಆರ್ಟಿಸ್ಟ್ ಆಗಿ ಮತ್ತೆ ಇಂಟ್ರೋಡ್ಯೂಸ್ ಮಾಡಿದ ತ್ರಿವಿಕ್ರಮ್ , ಇದೀಗ ಕಾಮಿಡಿಯನ್ ಪೃಥ್ವಿ ಅವರನ್ನು ವಿಲನ್ ರೋಲ್ ನಲ್ಲಿ ನೋಡಲು ಉತ್ಸುಕರಾಗಿದ್ದು, ತಮ್ಮ ಮುಂದಿನ ಚಿತ್ರದಲ್ಲಿ ಪೃಥ್ವಿ ವಿಲನ್ ರೋಲ್ ನಲ್ಲಿ ನಟಿಸಲಿದ್ದಾರೆ ಎಂದಿದ್ದಾರೆ. ಅಂದಹಾಗೆ ಚಿತ್ರದಲ್ಲಿ ಸ್ಟೈಲೀಶ್ ಸ್ಟಾರ್ ಅಲ್ಲೂ ಅರ್ಜುನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಬದಲಾಗಲಿದೆ ಕಾಮಿಡಿಯನ್ ಇಮೇಜ್

ಅಲ್ಲೂ ಅರ್ಜುನ್ ಅವರ ಚಿತ್ರದಲ್ಲಿ ಒಂದು ವೇಳೆ ಪೃಥ್ವಿ ಅವರು ವಿಲನ್ ರೋಲ್ ನಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ನಿಜವೇ ಆದಲ್ಲಿ, ಪೃಥ್ವಿ ಅವರ ಇಮೇಜ್ ಬದಲಾಗಲಿದೆ. ಪೃಥ್ವಿ ಕಾಮಿಡಿಯನ್ ಆಗಿ ಹೆಸರು ಮಾಡಿದವರು. ಅವರು ಬಹುತೇಕ ಚಿತ್ರದಲ್ಲಿ ಕಾಮಿಡಿಯನ್ ಆಗಿ ಬಣ್ಣ ಹಚ್ಚಿ ಗಮನ ಸೆಳೆದವರು. ಇದೀಗ ವಿಲನ್ ರೋಲ್ ಗೆ ಅವರು ಸಿದ್ದರಾಗಬೇಕಿದ್ದು, ಒಂದು ವೇಳೆ ಇದರಲ್ಲಿ ಸೈ ಎನಿಸಿದರೆ ಮುಂದಿನ ದಿನಗಳಲ್ಲಿ ಅವರ ಸಿನಿ ಬದುಕಿಗೆ ದೊಡ್ಡ ಬ್ರೇಕ್ ಸಿಗಲಿದೆ ಎಂದೇ ಹೇಳಲಾಗುತ್ತಿದೆ. ತ್ರಿವಿಕ್ರಮ್ ಅವರ ಪ್ರಯತ್ನ ಫಲಕೊಡುವುದೇ ಕಾದು ನೋಡಬೇಕಿದ್ದು, ಅದೇನೆ ಇರಲಿ  ಕಾಮಿಡಿಯನ್ ಆಗಿ ಪೃಥ್ವಿ ರಾಜ್ ಸಿಕ್ಕಾಪಟ್ಟೆ ಇಷ್ಟವಾಗುತ್ತಾರೆ.

ಅವರ ಡೈಲಾಗ್ ಡೆಲಿವರಿ, ಬಾಡಿ ಲಾಗ್ವೆಜ್ ಎಲ್ಲವೂ ವಿಭಿನ್ನವಾಗಿ ಗಮನ ಸೆಳೆಯುತ್ತದೆ. ಈ ನಡುವೆ ಅರ್ಜುನ್ ರೆಡ್ಡಿ ಖ್ಯಾತಿ ರಾಹುಲ್ ರಾಮಕೃಷ್ಣ ಅವರು ಕೂಡ ಇದೀಗ ಕಾಲಿವುಡ್ಗೆ ವಿಲನ್ ರೋಲ್ ನಲ್ಲಿ ಪಾದಾರ್ಪಣೆ ಮಾಡುತ್ತಿದ್ದಾರೆ. ಅದೇನೆ ಇರಲಿ ತ್ರಿವಿಕ್ರಮ್ ಅವರ ಪ್ರಯತ್ನ ಕೈಗೂಡಲಿ, ಪೃಥ್ವಿ ಇಮೇಜ್ ಬದಲಾಗಲಿ ಎಂದು ಕೆಲವರು ಅಂದುಕೊಂಡರೆ ಇನ್ನೂ  ಕೆಲವರು ಕಾಮಿಡಿಯನ್ ವಿಲನ್ ಆಗೋದಿಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

#tollywood #tollywoodmovies #prithvicomedian #prithvicomedianmovies #balkaninews

Tags