ಸುದ್ದಿಗಳು

ಶಿವಣ್ಣನಿಗೆ ಜೋಡಿಯಾದ ಪ್ರಿಯಾ ಆನಂದ್

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ‘ಆಯುಷ್ಮಾನ್ ಭವ’ ಚಿತ್ರವು ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಹಾಗೆಯೇ ಅವರು ನಟಿಸಿರುವ ‘ದ್ರೋಣ’ ಬಿಡುಗಡೆಗೆ ಸಿದ್ದವಾಗಿದೆ. ಈ ಚಿತ್ರದ ಬಳಿಕ ಅವರು ‘ಎಸ್. ಆರ್.ಕೆ’ ಮತ್ತು ಹೆಸರಿಡದ ಚಿತ್ರವೊಂದರಲ್ಲಿ ನಟಿಸಲಿದ್ದಾರೆ.

ಹೌದು, ರವಿ ಅರಸು ನಿರ್ದೇಶನ ಮಾಡಲಿರುವ ಹೆಸರಿಡದ ಚಿತ್ರದಲ್ಲಿ ಶಿವಣ್ಣ ನಾಯಕನಟರಾಗಿ ನಟಿಸುತ್ತಿದ್ದು, ನಾಯಕಿಯಾಗಿ ಪ್ರಿಯಾ ಆನಂದ್ ಅಭಿನಯಿಸಲಿದ್ದಾರೆ. ಇವರು ಈ ಹಿಂದೆ ‘ರಾಜಕುಮಾರ’ ಮತ್ತು ‘ಆರೆಂಜ್’ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ಕನ್ನಡದ ಪ್ರೇಕ್ಷಕರ ಮನಸ್ಸನ್ನು ಸೆಳೆದಿದ್ದರು.  ಈಗಾಗಲೇ ಇವರೊಂದಿಗೆ ಚಿತ್ರತಂಡ ಮಾತುಕಥೆ ನಡೆಸುತ್ತಿದೆ ಎನ್ನಲಾಗಿದ್ದು, ಎಲ್ಲವೂ ಅಂದುಕೊಂಡಂತಾದರೆ ಇದು ಇವರ ಮೂರನೇಯ ಸಿನಿಮಾವಾಗಲಿದೆ.

ಮೇಡಮ್ ಟುಸ್ಸಾಡ್ಸ್ ನಲ್ಲಿ ಕಾಜಲ್ ಮೇಣದ ಪ್ರತಿಮೆ !

#PriyaAnand #ShivaRajkumar  #Rajkumar #KannadaSuddigalu

Tags