ಸುದ್ದಿಗಳು

‘ವಿಷ್ಣು ಪ್ರಿಯ’ನಿಗೆ ಜೋಡಿಯಾದ ಕಣ್ಸನ್ನೆ ಬೆಡಗಿ…!!!

‘ಒರು ಅಡರ್ ಲವ್’ ಚಿತ್ರದ ಮೂಲಕ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್ ಇದೀಗ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಇವರ ಮೊದಲ ಚಿತ್ರ ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡಲಾಗಿತ್ತು. ಇದೀಗ ‘ಪಡ್ಡೆಹುಲಿ’ ಶ್ರೇಯಸ್ ಗೆ ಪ್ರಿಯಾ ಜೋಡಿಯಾಗಲಿದ್ದಾರೆ.

‘ಪಡ್ಡೆಹುಲಿ’ ಚಿತ್ರದ ಮೂಲಕ ಚಂದನವನದಲ್ಲಿ ಬಹಳಷ್ಟು ಹೈಪ್ ಕ್ರಿಯೇಟ್ ಮಾಡಿದ ಶ್ರೇಯಸ್ ಇದೀಗ ‘ವಿಷ್ಣುಪ್ರಿಯ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬುದು ತಿಳಿದ ವಿಷಯ. ಆದರೆ, ಈ ಚಿತ್ರಕ್ಕೆ ನಾಯಕಿಯಾರಾಗಬಹುದೆಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿತ್ತು. ಆದರೆ, ಇದೀಗ ‘ವಿಷ್ಣುಪ್ರಿಯ’ನಿಗೆ ನಾಯಕಿ ಸಿಕ್ಕಿದ್ದಾರೆ.Image may contain: 1 person, smiling

ಹೌದು, ಚಿತ್ರರಂಗದ ಜನಪ್ರಿಯ ನಿರ್ಮಾಪಕ ಕೆ ಮಂಜುರವರ ಪುತ್ರ ಶ್ರೇಯಸ್ ಕೆ ಮಂಜು ಈಗಾಗಲೇ ‘ಪಡ್ಡೆಹುಲಿ’ ಚಿತ್ರದಲ್ಲಿ ನಟಿಸಿ ಗಮನಸೆಳೆದಿದ್ದಾರೆ. ಇದೀಗ ಕಣ್ಸನ್ನೆ ಬೆಡಗಿ ಪ್ರಿಯಾ ‘ವಿಷ್ಣು ಪ್ರಿಯ’ ಚಿತ್ರದ ಮೂಲಕ ಶ್ರೇಯಸ್ ಗೆ ಜೋಡಿಯಾಗಿ ನಟಿಸಲಿದ್ದಾರೆ.

ಈಗಾಗಲೇ ಪ್ರಿಯಾ ಈ ಚಿತ್ರಕ್ಕೆ ನಟಿಸಲು ಸಹಿ ಹಾಕಿದ್ದಾರೆ ಎನ್ನಲಾಗಿದ್ದು, ಇದೇ ಸೆಪ್ಟೆಂಬರ್ 9ರಿಂದ ಚಿತ್ರೀಕರಣ ಶುರುವಾಗಲಿದೆ. ಕೆ. ಮಂಜು ನಿರ್ಮಾಣದಲ್ಲಿ ವಿ.ಕೆ. ಪ್ರಕಾಶ್ ‘ವಿಷ್ಣುಪ್ರಿಯ’ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ.

ಗಣೇಶ್ ಹಾಗೂ ‘ನೆನಪಿರಲಿ’ ಪ್ರೇಮ್ ಚಿತ್ರಗಳಲ್ಲಿ ಪವರ್ ಸ್ಟಾರ್…!!!

#shreyaskmanju #kmanju #priyaprakash #shreyaskamnjumovies #vishnupriya

Tags