ಸುದ್ದಿಗಳು

‘ರಾಜಕುಮಾರಿ’ಗೆ ಕನ್ನಡದಲ್ಲಿಯೇ ಸೆಟಲ್ ಆಗುವಾಸೆಯಂತೆ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಂದಿಗೆ “ರಾಜಕುಮಾರ” ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ರಾಜಕುಮಾರಿ ಪ್ರಿಯಾ ಆನಂದ್ ಇದೀಗ ಸಂತಸದಲ್ಲಿದ್ದಾರೆ. ಸಧ್ಯ ಗಣೇಶ್ ಜೊತೆಗೆ “ಆರೆಂಜ್” ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡ್ತಿರೋ ಅವರಿಗೆ ನಟಿಸಿದ ಮೊದಲ ಚಿತ್ರದ ಹಿಟ್ ನ ಬಳಿಕ ಒಳ್ಳೆಯ ಚಿತ್ರದಲ್ಲೇ ನಟಿಸುತ್ತಿರುವ ಖುಷಿ ಇದೆ.

ಬೇರೆ ಭಾಷೆಗಳಂತೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮುಂದುವರಿಯುವ ಆಸೆಯನ್ನು ಹೊಂದಿರುವ ಪ್ರಿಯಾ ಅವರಿಗೆ ಕನ್ನಡದ ಸಿನಿಮಾ ಕ್ಷೇತ್ರದಲ್ಲಾಗುತ್ತಿರುವ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರಂತೆ. ಮತ್ತಷ್ಟು ಸಿನಿಮಾಗಳ ಅವಕಾಶ ಬಂದರೆ ನಟಿಸಲು ತಯಾರಿದ್ದಾರಂತೆ. ಅಲ್ಪ ಸ್ವಲ್ಪ ಕನ್ನಡ ಭಾಷೆ ತಿಳಿದುಕೊಂಡಿರುವ ಅವರು, ‘ಕಲಾವಿದರಿಗೆ ಭಾಷೆ ಎಂಬುದು ಅಡೆತಡೆಯೇ ಅಲ್ಲ. ನಟನೆಯೊಂದೇ ನಮ್ಮ ಕೆಲಸ’ ಎಂದಿದ್ದಾರೆ.

ಗಣೇಶ್ ಬರ್ತಡೇ ದಿನ ಆರೆಂಜ್ ಚಿತ್ರದ ಟೀಸರ್ ರಿಲೀಸ್ ಆಗಿತ್ತು. ಜೊತೆಗೆ ಟೀಸರ್ ಗೂ ಒಳ‍್ಳೆ ರೆಸ್ಪಾನ್ಸ್ ಕೂಡ ಸಿಗ್ತಿದೆ. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರೋ ಸಿನಿಮಾದ ಮೇಕಿಂಗ್ ಸ್ಟಿಲ್ ವೊಂದು ಹೊರಬಿದ್ದಿದೆ. ಇದ್ರಲ್ಲಿ ಗಣಿ ನೋಡಿದ್ರೆ ಚಮಕ್ ನಲ್ಲಿ ವೈಟ್ ಅಂಟ್ ವೈಟ್ ರೇಷ್ಮೆ ಪಂಚೆ ಶರ್ಟ್ ಹಾಕ್ಕೊಂಡು ಟ್ರೆಡಿಶನಲ್ ಲುಕ್ ನಲ್ಲಿ ಕಾಣಿಸಿಕೊಂಡಂಗೇ ಇಲ್ಲೂ ಕಾಣಿಸಿಕೊಂಡಿದಾರೆ. ಆದ್ರೆ ಇಲ್ಲಿ ಗಣಿ ಕೊರಳಿಗೆ ಹೂವಿನ ಹಾರ ಹಾಕಿದ್ರೂ ಬರೀ ದಾರಾನೇ ಕುತ್ತಿಗೆಗೆ ಸುತ್ತಿಕೊಂಡಿರೋ ಹಾಗಿದೆ ಫೋಟೋ. ಅಂದ್ಹಾಗೆ ಹಾರ ಹಾಕಿ ಗಣಿನ ಗಟ್ಟಿಯಾಗಿ ಹಿಡಿಕೊಂಡಿರೋರು ‘ರಾಜಕುಮಾರ’ನ ಬೆಡಗಿ ಪ್ರಿಯಾ ಆನಂದ್.

ಈಗಾಗ್ಲೇ ಚಿತ್ರದ ಟೀಸರ್ ನಲ್ಲಿ ಗಣೇಶ್ ಎರಡು ಶೇಡ್ನಲ್ಲಿ ಮಿಂಚಿದ್ದಾರೆ. ಖೈದಿಯ ಗೆಟಪ್ ಸಖತ್ ಮಾಸ್ ಆಗಿದ್ರೆ, ಲವ್ಲಿ ಲವ್ವರ್ ಬಾಯ್ದಾಗಿದೆ. ಇನ್ನು ಪ್ರಿಯಾ ಆರೆಂಜ್ ಲಂಗಾ ದಾವಣೀಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದು ಇವ್ರಿಬ್ಬರ ಕೆಮಿಸ್ಟ್ರಿ ಬಗ್ಗೆ ನಿರೀಕ್ಷೆ ಇದೆ.

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪ್ರಿಯಾ ಆನಂದ್ ಅಭಿನಯದ ಆರೆಂಜ್ ಚಿತ್ರದ ಚಿತ್ರೀಕರಣವನ್ನು ಯೂರೋಪ್ ನಲ್ಲಿ ಮಾಡಲು ಚಿತ್ರತಂಡ ನಿರ್ಧರಿಸಿದ್ದು ಅದರಂತೆ ಚಿತ್ರತಂಡ ಯೂರೋಪ್ ಗೆ ಹೋಗಿದ್ದು, 10 ದಿನಗಳ ಚಿತ್ರೀಕರಣಕ್ಕಾಗಿ 30 ಮಂದಿ ಚಿತ್ರತಂಡ ಯೂರೋಪ್ ಗೆ ತೆರಳಿದೆ. ಚಿತ್ರಕ್ಕೆ ಪ್ರಶಾಂತ್ ರಾಜ್ ನಿರ್ದೇಶನ, ಎಸ್ಎಸ್ ಥಮನ್ ಸಂಗೀತ, ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿದೆ.

 

@ sunil Javali

Tags