ಸುದ್ದಿಗಳು

ಪಿಗ್ಗಿ ಹಾಗೂ ಫರ್ಹಾನ್ ಬೆಡ್ ರೂಂ ಸೀನ್ ಲೀಕ್

ಪ್ರಿಯಾಂಕಾ ಚೋಪ್ರಾ ಮತ್ತು ಫರ್ಹಾನ್ ಅಖ್ತರ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ದಿ ಸ್ಕೈ ಈಸ್ ಪಿಂಕ್’ ಬಿಡುಗಡೆಗೆ ಸಜ್ಜಾಗಿದೆ. ಮುಂಬರುವ ಈ ರೋಮ್ಯಾಂಟಿಕ್ ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡವು ಫುಲ್ ಬ್ಯುಸಿ.

ಪ್ರಿಯಾಂಕಾ ಚೋಪ್ರಾ ಮತ್ತು ಫರ್ಹಾನ್ ಅಖ್ತರ್ ಅಭಿನಯದ ದಿ ಸ್ಕೈ ಈಸ್ ಪಿಂಕ್ ಚಿತ್ರದ ಸಣ್ಣ ವಿಡಿಯೋ ತುಣುಕು ಲೀಕ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.

Priyanka Chopra intimate bedroom scene gets leaked

ಲೀಕ್ ಆದ ವೀಡಿಯೊ ಕ್ಲಿಪ್‌ ನಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಫರ್ಹಾನ್ ಅಖ್ತರ್ ನಡುವೆ ಬೆಡ್ ರೂಂ ಸೀನ್ ದೃಶ್ಯವಿದೆ. ಪ್ರಿಯಾಂಕಾ ಚೋಪ್ರಾ ನೈಟ್‌ವೇರ್‌ನಲ್ಲಿ ಕಾಣಿಸಿಕೊಂಡರೆ, ಫರ್ಹಾನ್ ಅಖ್ತರ್ ಒಳ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ.  ಅವರ ಮಧ್ಯೆ ಮಾತುಕತೆ ನಡೆಯುತ್ತದೆ.

ಇದು ಎರಡನೇ ಬಾರಿಗೆ, ಪ್ರಿಯಾಂಕಾ ಚೋಪ್ರಾ ಮತ್ತು ಫರ್ಹಾನ್ ಅಖ್ತರ್ ದಂಪತಿಗಳ ಪಾತ್ರವನ್ನು ತೆರೆಯ ಮೇಲೆ ನಿರ್ವಹಿಸುತ್ತಿದ್ದಾರೆ. ಈ ಮೊದಲು ಅವರು ಹಿಂದಿ ಚಲನಚಿತ್ರ ‘ದಿಲ್ ಧಕ್ನೆ ದೋ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಶೋನಾಲಿ ಬೋಸ್ ನಿರ್ದೇಶನದ ಈ ಚಿತ್ರವನ್ನು ಪ್ರಿಯಾಂಕಾ ಚೋಪ್ರಾ, ಸಿದ್ಧಾರ್ಥ್ ರಾಯ್ ಕಪೂರ್, ರೋನಿ ಸ್ಕ್ರೂವಾಲಾ ಜಂಟಿಯಾಗಿ ನಿರ್ಮಿಸಿದ್ದಾರೆ, ಈ ಚಿತ್ರವು ಅಕ್ಟೋಬರ್ 11 ರಂದು ರಿಲೀಸ್ ಆಗಲಿದೆ.

ನಟಿ ಸಮಂತಾ ಅಕ್ಕಿನೇನಿ ವಿರುದ್ಧ ಕಿಡಿಕಾರಿದ ನೆಟ್ಟಿಗರು

#theskyispink #bollywood #tollywood #priyankachopra

Tags