ಸುದ್ದಿಗಳು

ಬೆಡ್ ರೂಂ ಸೀಕ್ರೇಟ್ಸ್ ರಿವೀಲ್ ಮಾಡಿದ ಪ್ರಿಯಾಂಕಾ ಚೋಪ್ರಾ!

ನಟಿ ಪ್ರಿಯಾಂಕಾ ಚೋಪ್ರಾ ನಿಕ್ ಜೊನಸ್ ಅವರನ್ನು ಮದುವೆಯಾಗಿ ಹಲವು ತಿಂಗಳುಗಳೇ ಕಳೆದಿವೆ. ಈ ಜೋಡಿ ಆಗಾಗ ಇನ್ ಸ್ಟಾಗ್ರಾಂನಲ್ಲಿ ಹಾಕುವ ಫೋಟೋಗಳು ಕೆಲವರ ಹೊಟ್ಟೆಯಲ್ಲಿ ಚಿಟ್ಟೆ ಬಿಟ್ಟಂತಾಗಿರುತ್ತದೆ. ತಮ್ಮ ವೃತ್ತಿಜೀವನದಲ್ಲಿ ನಿರತರಾಗಿದ್ದರೂ ಪ್ರಿಯಾಂಕಾ ಮತ್ತು ನಿಕ್ ಪರಿಪೂರ್ಣ ದಂಪತಿಗಳಂತೆ ಪರಸ್ಪರ ಸಮಯವನ್ನು ಕಳೆಯುತ್ತಿದ್ದಾರೆ.

ಅಂದಹಾಗೆ ಇತ್ತೀಚಿನ ಚಾಟ್‌ವೊಂದರಲ್ಲಿ, ಪ್ರಿಯಾಂಕಾ ತಮ್ಮ ಬೆಡ್ ರೂಂ ಸೀಕ್ರೇಟ್ ಬಹಿರಂಗಪಡಿಸಿದ್ದಾರೆ. ಪಿಗ್ಗಿ ಹೇಳುವ ಪ್ರಕಾರ “ಇದು ನಿಜಕ್ಕೂ ನನಗೆ ಕಿರಿಕಿರಿ ಎನಿಸುತ್ತದೆ. ನಾನು ಎಚ್ಚರವಾದಾಗ ನಿಕ್ ತಮ್ಮ ಮುಖವನ್ನು ನೋಡುವಂತೆ ಒತ್ತಾಯಿಸುತ್ತಾರೆ. ನಾನು ಆಗ ಒಂದು ನಿಮಿಷ ಕಾಯಿರಿ ಎಂದು ಹೇಳಿ ಸ್ವಲ್ಪ ಮಸ್ಕರಾ, ಮಾಯಿಶ್ಚರೈಸರ್ ಹಾಕುತ್ತೇನೆ. ನಂತರ ನಿದ್ದೆಗಣ್ಣಿನಲ್ಲಿ ಎದ್ದವರಂತೆ ಇರುತ್ತೇನೆ. ಆಗ ನಿಕ್ ನನ್ನನ್ನು ನೋಡಿ ಇಟ್ಸ್ ಅಮೇಜಿಂಗ್, ಸೂಪರ್ ಸ್ವೀಟ್” ಎನ್ನುತ್ತಾರೆ ಎಂದು ಪಿಗ್ಗಿ ಹೇಳಿಕೊಂಡಿದ್ದಾರೆ.

Priyanka Chopra reveals Nick Jona bedroom secret

ಮತ್ತೆ ತಮ್ಮ ಮಾತು ಮುಂದುವರೆಸುತ್ತಾ ಪ್ರಿಯಾಂಕಾ “ನಿಮ್ಮ ಪತಿ ಏನು ಮಾಡಬೇಕೆಂದು ನೀವು ಬಯಸುತ್ತೀರಿ. ಆದರೆ ಇದು ಕೇಳಲು ಸ್ವಲ್ಪ ವಿಚಿತ್ರ ಎನಿಸುತ್ತದೆ.ಇರಲಿ ಬಿಡಿ, ನಿಕ್ ಸ್ವಲ್ಪ ಹಾಗೆಯೇ” ಇದೆಲ್ಲಾ ನಿಜಕ್ಕೂ ಅದ್ಭುತವಾಗಿರುತ್ತದೆ” ಎಂದು ತಿಳಿಸಿದ್ದಾರೆ ಪ್ರಿಯಾಂಕಾ.

ವಿಜಯ್ ದೇವರಕೊಂಡ ಪ್ರಚಾರ ತಂತ್ರ ಕಾಪಿ ಮಾಡಿದ್ರಾ ಈ ತೆಲುಗು ಹೀರೋ?

#balkaninews #priyankachopra #nickjonas #bedroomsecrets

Tags