ಸುದ್ದಿಗಳು

ಪತಿಯ ಬರ್ತಡೇಗೆ ಸರ್ಪೈಸ್ ಗಿಫ್ಟ್ ನೀಡಿದ ಪ್ರಿಯಾಂಕ ಚೋಪ್ರಾ

ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಕಳೆದ ಡಿಸೆಂಬರ್ ನಲ್ಲಿ ಗಾಯಕ ನಿಕ್ ಜೊನಾಸ್ ರವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಇದೀಗ ನಿನ್ನೇಯಷ್ಟೇ(ಸೆ.16)ರಂದು ಪಿಗ್ಗಿ ಪತಿ ನಿಕ್ ರವರ ಜನ್ಮದಿನವಿತ್ತು. ಇದರ ಸಲುವಾಗಿ ಪ್ರಿಯಾಂಕ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ಪತಿಯ ಜೊತೆಗಿನ ಸುಮಧುರ ಕ್ಷಣಗಳನ್ನು ವಿಡಿಯೋ ಮಾಡುವ ಮೂಲಕ ತಮ್ಮ ಪತಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.

ಈ ವಿಡಿಯೊದಲ್ಲಿ ನಿಕ್ ಮತ್ತು ಪ್ರಿಯಾಂಕಾರವರ ಹಲವಾರು ಫೋಟೊಗಳು ಹಾಗೂ ವಿಡಿಯೋಗಳು ಒಳಗೊಂಡಿದ್ದು, ಇವರಿಬ್ಬರ ಪ್ರತಿಯೊಂದು ಅದ್ಬುತ ಕ್ಷಣಗಳನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.

ಇಷ್ಟೆ ಅಲ್ಲದೇ, ಈ ವಿಡಿಯೋದಲ್ಲಿ ತಮ್ಮ ಪತಿಗೆ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರಿದ ಪಿಗ್ಗಿ ನನ್ನ ಜೀವನದ ಬೆಳಕು ನೀವು. ನಿಮ್ಮೊಂದಿಗೆ ಕಳೆದ ಪ್ರತಿಯೊಂದು ಕ್ಷಣವು ಅತ್ಯಮೂಲ್ಯವಾಗಿದೆ. ನಿಮ್ಮನ್ನು ನನಗಾಗಿ ಕೊಟ್ಟ ದೇವರಿಗೆ ತುಂಬಾ ಧನ್ಯವಾದಗಳು. ನಾನು ನಿನ್ನನ್ನು ಪ್ರೀತಿಸುತ್ತೇನೆ ಎನ್ನುತ್ತಾ ಭಾವನಾತ್ಮಕ ಸಂದೇಶಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ತಾಜ್ ಮಹಲ್ ನೋಡಿ ಕೊಂಡಾಡಿದ ಕಾಜಲ್

Tags