ಸುದ್ದಿಗಳು

ಪ್ರಿಯಾಂಕಾ ತೊಟ್ಟ ಉಂಗುರುದ ಬೆಲೆ ಕೇಳಿ ದಂಗಾಗಬೇಡಿ!!

ಮುಂಬೈ,ಆ.17:  ಪ್ರಿಯಾಂಕ ಚೋಪ್ರಾ- ನಿಕ್ ಜೋನ್ಸ್ ಈಗ ಯುವ ಪ್ರೇಮಿಗಳು. ಇವರ ಪ್ರೀತಿ ಈಗ ಭಹಿರಂಗಗೊಂಡಿದೆ. ಇವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದರೂ ಗುಟ್ಟು ಬಿಟ್ಟು ಕೊಡದೆ ಗೌಪ್ಯತೆ ಕಾಯ್ದುಕೊಂಡಿದ್ದರು..  ಇತ್ತೀಚೆಗೆ ಪಿಗ್ಗಿ ಆತ್ಮೀಯ ಗೆಳತಿ ರವಿನಾ ಟಂಡನ್ ಜೊತೆ ಉಂಗುರದ ಸೆಲ್ಫಿ ತೆಗೆದು ಇನ್ಸ್ಟಾಗ್ರಾಮ್ ನಲ್ಲಿ ಶೇರ್  ಮಾಡಿಕೊಂಡಿದ್ದಾರೆ.  ಹಾಗಾಗಿ ಇವರಿಬ್ಬರ ನಿಶ್ಚಿತಾರ್ಥದ ಬಗ್ಗೆ ಬಹಿರಂಗಗೊಂಡಿದೆ.

ಉಂಗುರದ ಬೆಲೆ ಎಷ್ಟು ಗೊತ್ತಾ?

ನಿಕ್ ಜೋನ್ಸ್ ದುಬಾರಿ ಬೆಲೆಯ ಉಂಗುರವನ್ನು ಪ್ರಿಯಾಂಕಗೆ ತೊಡಿಸಿದ್ದಾರೆ. ಉತ್ತಮ ಕುಶನ್ ಕಟ್ ಹೊಂದಿದ್ದು 4 ಕ್ಯಾರೇಟ್ ತೂಗುತ್ತದೆ. ಉಂಗುರದ ಬೆಲೆ ಕೇಳಿ ಒಮ್ಮೆ ನೀವು ದಂಗಾಗುವುದು ಗ್ಯಾರೆಂಟಿ..ಈ ಉಂಗುರದ ಬೆಲೆ ಬರೋಬ್ಬರಿ 2.1 ಕೋಟಿ ಎನ್ನಲಾಗಿದೆ… ಏನು? ಈ ಸಣ್ಣ ಉಂಗುರಕ್ಕೆ ಇಷ್ಟು ದುಡ್ಡು ಕೊಡಬೇಕಾ ಎಂದು ಹುಬ್ಬು ಏರಿಸುವವರು ಎಷ್ಟು ಮಂದಿಯೋ?

ಪ್ರಿಯಾಂಕ- ಜೋನ್ಸ್ ನಿಶ್ಚಿತಾರ್ಥದ ಸುದ್ದಿಯನ್ನು ನಾಳೆ ಅಧಿಕೃತವಾಗಿ ಘೋಷಿಸಲಿದ್ದಾರೆ. ಕುಟುಂಬದ ಆಪ್ತರು, ಆತ್ಮೀಯ ಸ್ನೇಹಿತರಿಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಎಲ್ಲಿ ನಡೆಯುತ್ತದೆ ಎಂಬುವ ಮಾಹಿತಿಯನ್ನು ಇನ್ನು ಹೊರಗೆ ಹಾಕಿಲ್ಲ!!

 

Tags

Related Articles