ಸುದ್ದಿಗಳು

ನೋಡಲು ಸರಳ ಕಪ್ಪು ಉಡುಪು.. ಬೆಲೆ ಎಷ್ಟು ಕೇಳ್ರಪ್ಪಾ!!

ಪಿಗ್ಗಿ ತೊಟ್ಟ ಈ ಕಪ್ಪು ಉಡುಪಿನ ಬೆಲೆ ಕೇಳಿ!!

ಮುಂಬೈ,ಸೆ.09: ಬಾಲಿವುಡ್ ಬ್ಯೂಟಿಫುಲ್ ಬೆಡಗಿ ಪ್ರಿಯಾಂಕಾ ದಿನಾ ಸುದ್ದಿಯಲ್ಲಿರುತ್ತಾಳೆ. ಬಾಲಿವುಡ್ ನಿಂದ ಹೆಚ್ಚು ಹಾಲಿವುಡ್ ನಲ್ಲೇ ಬ್ಯುಸಿಯಾದಂತಿದೆ. ಒಂದು ಕಡೆ ಸಿನಿಮಾ, ಇನ್ನೊಂದು ಕಡೆ ನಿಕ್ ಜೊತೆ ನಿಶ್ಚಿತಾರ್ಥವಾದರೆ ಮತ್ತೊಂದು ಕಡೆ ಆಕೆ ಉಟ್ಟ ಉಡುಪು ಸುದ್ದಿಗೆ ಒಳಗಾಗುತ್ತದೆ.

ವಿಭಿನ್ನ ಲುಕ್

ಅಮೆರಿಕಾದ ಹಾಡುಗಾರ ನಿಕ್ ಭೇಟಿ ಆಗಿದ್ದೇ ತಡ ಪ್ರಿಯಾಂಕಾ ಲುಕ್ ಬದಲಾದಂತಿದೆ.. ಪ್ರಿಯಾಂಕ ಫ್ಯಾಷನ್ ಲುಕ್ ಅಭಿಮಾನಿಗಳಿಗೂ ಇಷ್ಟವಾಗಿದೆ. ಇತ್ತೀಚಿಗಷ್ಟೇ ನಡೆದ ಫ್ಯಾಷನ್ ಮಿಡಿಯಾ ಅವಾರ್ಡ್ ಕಾರ್ಯಕ್ರಮದ ರೆಡ್ ಕಾರ್ಪೆಟ್ ನಲ್ಲಿ ಪ್ರಿಯಾಂಕ ಕಾಣಿಸಿಕೊಂಡಿದ್ದಳು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ… ಅಷ್ಟೇ ಅಲ್ಲದೆ ಇತ್ತೀಚೆಗೆ ದುಬಾರಿ ಬೆಲೆ ಬಿಳಿ ಉಡುಪು ಧರಿಸಿ ಸುದ್ದಿಯಾಗಿದ್ದಳು…

ಕಪ್ಪು ಡ್ರೆಸ್

ಪ್ರಿಯಾಂಕ ಈ ಕಾರ್ಯಕ್ರಮಕ್ಕೆ ಕಪ್ಪು ಬಣ್ಣದ ಉಡುಗೆ ತೊಟ್ಟು ಸುಂದರವಾಗಿ ಕಾಣಿಸುತ್ತಿದ್ದಳು.. ಕಪ್ಪು ಬಣ್ಣದ ಟಾಪ್ ಬೆಲೆ ಎಷ್ಟು ಇರಬಹುದು ಹೇಳಿ? ಬರೋಬ್ಬರಿ 21 ಸಾವಿರ ರೂಪಾಯಿ. ಇನ್ನು ಸ್ಕರ್ಟ್ ಬೆಲೆ ಕೇಳಿದರಂತೂ ತಲೆ ಗಿರ್ ಅನ್ನೋದು ಗ್ಯಾರೆಂಟಿ.. ಇದರ ಬೆಲೆ 40 ಸಾವಿರ. ಪ್ರಿಯಾಂಕ ಈ ಡ್ರೆಸ್ ಬೆಲೆಗೆ ಸಾಮಾನ್ಯರು ಒಮ್ಮೆ ಅನ್ಯ ದೇಶ ಸುತ್ತಿ ಬರಬಹುದು.

 

View this post on Instagram

 

Priyanka leaving her apartment earlier today! Okay can you feel the power when she walks? ????

A post shared by Niyanka stan (18.08.18????) (@priyankaaesthetics) on

Tags