ಸುದ್ದಿಗಳು

ಮತ್ತೆ ಹೆದರಿಸಲು ಬಂದ ಪ್ರಿಯಾಂಕಾ

‘ಮಮ್ಮಿ’, ‘ಹೌರಾಬ್ರಿಡ್ಜ್’ ಚಿತ್ರದ ನಂತರ ಮತ್ತೊಂದು ಹಾರರ್ ಸಿನಿಮಾ

ಬೆಂಗಳೂರು.ಫೆ.24

ನಟ ರಿಯಲ್ ಸ್ಟಾರ್ ಉಪೇಂದ್ರರನ್ನು ಮದುವೆಯಾದ ಬಳಿಕ ನಟಿ ಪ್ರಿಯಾಂಕಾ ಚಿತ್ರರಂಗದಿಂದ ದೂರ ಸರಿದಿದ್ದರು. ನಂತರ 2017 ರಲ್ಲಿ ‘ಪ್ರಿಯಾಂಕಾ’ ಚಿತ್ರದಲ್ಲಿ ನಟಿಸಿದರು. ಆ ಬಳಿಕ ‘ಮಮ್ಮಿ’, ‘ಸೆಕೆಂಡ್ ಹಾಫ್’ ಚಿತ್ರಗಳಲ್ಲೂ ನಟಿಸಿದ್ದರು. ಈಗ ಮತ್ತೆರೆಡು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ.

ಮತ್ತೆ ಹಾರರ್ ಸಿನಿಮಾ

‘ಮಮ್ಮಿ’ ಚಿತ್ರದ ನಂತರ ‘ಹೌರಾಬ್ರಿಡ್ಜ್’ ಚಿತ್ರದಲ್ಲಿ ನಟಿಸುತ್ತಿರುವ ಪ್ರಿಯಾಂಕಾ ಸದ್ಯ ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ತಯಾರಾಗುತ್ತಿರುವ ಹೊಸ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸದ್ಯ ಕನ್ನಡದಲ್ಲಿ ಈ ಚಿತ್ರಕ್ಕೆ ‘ಟೆರಾವೆರಾ’ ಎಂದು ಶೀರ್ಷಿಕೆ ಎಂದು ಇಡಲಾಗಿದ್ದು, ತಮಿಳಿನ ಅವತರಣಿಕೆಗೆ ಇನ್ನೂ ಹೆಸರಿಡಲಾಗಿಲ್ಲ. ಈ ಚಿತ್ರವನ್ನು ಹೊಸ ಪ್ರತಿಭೆಗಳಾದ ಮಹೇಶ್ ಮತ್ತು ವೆಂಕಟೇಶ್ ಜೊತೆಯಾಗಿ ನಿರ್ದೇಶನ ಮಾಡಲಿದ್ದಾರೆ.

ಚಿತ್ರಗಳ ಬಗ್ಗೆ

ಸದ್ಯ ಪ್ರಿಯಾಂಕಾ ‘ಹೌರಾಬ್ರಿಡ್ಜ್’ ಚಿತ್ರದಲ್ಲಿ ನಟಿಸುತ್ತಿದ್ದು, ಇದಾದ ಬಳಿಕ ಲೋಹಿತ್ ನಿರ್ದೇಶನದಲ್ಲಿ ‘ಮಮ್ಮಿ-2’ ಶುರುವಾಗುತ್ತಿದೆ. ಈ ಚಿತ್ರದೊಂದಿಗೆ ಈ ದ್ವಿಭಾಷೆಯ ಸಿನಿಮಾ ಸಹ ಶುರುವಾಗಲಿದೆ.

“ನನ್ನ ಪಾತ್ರ ಬಹಳವಾಯಿತು. ಇದೊಂದು ನೈಜ ಘಟನೆಗಳನ್ನು ಆಧರಿಸಿರುವ ಕಥೆಯಾಗಿದ್ದು, ಥ್ರಿಲ್ಲರ್ ಅಂಶಗಳು ಚಿತ್ರದಲ್ಲಿವೆ. ನಾನು ಇದುವರೆಗೂ ಮಾಡಿರದಂತಹ ಪಾತ್ರ ಮಾಡುತ್ತಿದ್ದು, ಇದೇ ತಿಂಗಳ 28 ರಂದು ಚಿತ್ರೀಕರಣ ಪ್ರಾರಂಭವಾಗಲಿದೆ. ಚಿತ್ರಕ್ಕೆ ಎಸ್ ಎಸ್ ಥಮನ್ ಸಂಗೀತ ನೀಡುತ್ತಿದ್ದಾರೆ” ಎಂದು ಪ್ರಿಯಾಂಕಾ ಹೇಳುತ್ತಾರೆ.

‘ದೇವ್ರಂಥ ಮನುಷ್ಯ’ ಪ್ರಥಮ್ ಗೆ ಸಾಥ್ ನೀಡಿದ ಅಂಬರೀಶ್ ಪುತ್ರ ಅಭಿಷೇಕ್

#priyankaupendra, #balkaninews #filmnews, #kannadasuddigalu, #mummy2, #hourabridge,

Tags