ಸುದ್ದಿಗಳು

ಸದ್ಯಕ್ಕೆ ರಾಜಕೀಯದಲ್ಲಿ ಆಸಕ್ತಿಯಿಲ್ಲ: ಪ್ರಿಯಾಂಕಾ ಉಪೇಂದ್ರ

ಸದ್ಯ ಸಿನಿಮಾಗಳಲ್ಲಿ ಮಾತ್ರ ಗಮನ ಹರಿಸಿರುವ ಪ್ರಿಯಾಂಕಾ

ಬೆಂಗಳೂರು.ಫೆ.21: ನಟಿ ಹಾಗೂ ನಟ-ನಿರ್ದೇಶಕ ರಿಯಲ್ ಸ್ಟಾರ್ ಪತ್ನಿಯಾಗಿರುವ ಪ್ರಿಯಾಂಕಾ ಉಪೇಂದ್ರ ಸಂಸಾರ ಮತ್ತು ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ. ಸದ್ಯ ಅವರು ಲೋಹಿತ್ ನಿರ್ದೇಶನದ ‘ಹೌರಾ ಬ್ರಿಡ್ಜ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ವೇಳೆ ಅವರು ರಾಜಕಾರಣದ ಬಗ್ಗೆ ಮಾತನಾಡಿದ್ದಾರೆ.

ರಾಜಕೀಯದ ಬಗ್ಗೆ

“ನನ್ನ ಪತಿ ಉಪೇಂದ್ರ ಸಿನಿಮಾಗಳೊಂದಿಗೆ ರಾಜಕಿಯದತ್ತಲೂ ಮುಖ ಮಾಡಿದ್ದಾರೆ. ಆದರೆ ನನಗೆ ರಾಜಕಾರಣದ ಬಗ್ಗೆ ಗೊತ್ತಿಲ್ಲ. ಏಕೆಂದರೆ ನಾನು ಅಷ್ಟೊಂದು ಪ್ರಬುದ್ದವಾಗಿಲ್ಲ. ನನಗೆ ಸಮಯ ಬೇಕು. ಆದರೆ, ನನ್ನ ಪತಿಗೆ ರಾಜಕೀಯದಲ್ಲಿ ಸಹಾಯ ಮಾಡುತ್ತೇನೆ ಹಾಗೆಯೇ ಜೊತೆಗಿರುತ್ತೇನೆ” ಎನ್ನುತ್ತಾರೆ ಪ್ರಿಯಾಂಕಾ.

ಸಿನಿಮಾ ಜೀವನ

ಸದ್ಯ ಪ್ರಿಯಾಂಕಾ ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಈಗಾಗಲೇ ಅವರು ‘ಪ್ರಿಯಾಂಕಾ’, ‘ಮಮ್ಮಿ’, ‘ಸೆಕೆಂಢ್ ಹಾಫ್’ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ‘ಹೌರಾ ಬ್ರಿಡ್ಜ್’ ಎಂಬ ಮತ್ತೊಂದು ಮಹಿಳಾ ಪ್ರಧಾನ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ವಿಶೇಷವೆಂದರೆ, ಈ ಚಿತ್ರದ ಮೂಲಕ ಅವರ ಮಗಳು ಐಶ್ವರ್ಯಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಬಗ್ಗೆ

ಇದೊಂದು ಇದೊಂದು ‘ಸೈಕಾಲಾಜಿಕಲ್ ಥ್ರಿಲ್ಲರ್’ ಝೋನರ್‌ ಗೆ ಸೇರಿದ ಸಿನಿಮಾ ಆಗಿದ್ದು ಒಂದೂವರೆ ವರ್ಷದಿಂದ ಈ ಚಿತ್ರಕ್ಕೆ ಶೂಟಿಂಗ್ ನಡೆಯುತ್ತಿದ್ದು ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿದೆ. ಕನ್ನಡ ಸೇರಿದಂತೆ ತಮಿಳಿ ಭಾಷೆಯ ಚಿತ್ರಗಳಲ್ಲೂ ಪ್ರಿಯಾಂಕಾ ನಟಿಸುತ್ತಿದ್ದು, ಸದ್ಯದಲ್ಲಿಯೇ ‘ಮಮ್ಮಿ-2’ ಸೆಟ್ಟೇರಲಿದೆ.

ಇಂದಿನಿಂದ ವಿದೇಶಗಳಲ್ಲೂ ‘ನಟ ಸಾರ್ವಭೌಮ’ನ ಪ್ರದರ್ಶನ

#priyankaupendra, #balkaninews #filmnews, #kannadasuddigalu, #prajakiya, #upendra, #aishwarya,

Tags