ಸುದ್ದಿಗಳು

ಪ್ರಿಯಾಂಕಾ ಉಪೇಂದ್ರ ಈಗ ‘ದೇವಕಿ’

ಕೊನೆಯ ಹಂತದಲ್ಲಿ ‘ಹೌರಾಬ್ರಿಡ್ಜ್’ ಟೈಟಲ್ ನಲ್ಲಿ ಬದಲಾವಣೆ

ಬೆಂಗಳೂರು.ಮಾ.12: ರಿಯಲ್ ಸ್ಟಾರ್ ಉಪೇಂದ್ರರ ಪತ್ನಿ, ನಟಿ ಪ್ರಿಯಾಂಕಾ ಉಪೇಂದ್ರ ನಟಿಸುತ್ತಿರುವ ನಿರೀಕ್ಷಿತ ಸಿನಿಮಾ ‘ಹೌರಾಬ್ರಿಡ್ಜ್’ ಶೀರ್ಷಿಕೆಯಲ್ಲಿ ಬದಲಾವಣೆಯಾಗಿದೆ. ಹೌದು, ಈಗ ಚಿತ್ರಕ್ಕೆ ‘ದೇವಕಿ’ ಎಂಬ ಹೊಸ ಹೆಸರನ್ನು ಇಡಲಾಗಿದೆ. ಈ ಹಿಂದೆ ‘ಮಮ್ಮಿ’ ಸಿನಿಮಾ ಮಾಡಿದ್ದ ನಿರ್ದೇಶಕ ಲೋಹಿತ್ ಮತ್ತೊಮ್ಮೆ ಪ್ರಿಯಾಂಕಾರಿಗಾಗಿ ಈ ಸಿನಿಮಾ ಮಾಡುತ್ತಿದ್ದಾರೆ.

ಚಿತ್ರದ ಬಗ್ಗೆ

ಈಗಾಗಲೇ ಚಿತ್ರದ ಎಲ್ಲಾ ಕೆಲಸಗಳು ಮುಗಿದಿದ್ದು, ಫಸ್ಟ್ ಕಾಫಿ ಸಹ ಬಂದಿದೆ. ಈ ಹೊತ್ತಿನಲ್ಲಿ ಚಿತ್ರತಂಡದವರು ತಮ್ಮ ಚಿತ್ರಕ್ಕೆ ‘ದೇವಕಿ’ ಎಂಬ ಹೆಸರು ಸೂಕ್ತ ಎಂಬ ನಿರ್ಧಾರಕ್ಕೆ ಬಂದು ಹೊಸ ಹೆಸರನ್ನು ಫಿಕ್ಸ್ ಮಾಡಿದ್ದಾರೆ. ವಿಶೇಷವೆಂದರೆ, ಈ ಚಿತ್ರದ ಮೂಲಕ ಪ್ರಿಯಾಂಕಾರ ಮಗಳು ಐಶ್ವರ್ಯ ಚಿತ್ರರಂಗಕ್ಕೆ ಬಾಲನಟಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

ಕಥಾಹಂದರ

‘ದೇವಕಿ’ ಕಂಸನ ತಂಗಿ ಹಾಗೂ ಶ್ರೀಕೃಷ್ಣನ ತಾಯಿಯ ಹೆಸರು. ಇಂತಹ ಪವರ್ ಫುಲ್ ಹೆಸರು ಈ ಸಿನಿಮಾಗೆ ನಿಗದಿಯಾಗಿದೆ. ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ ಪಾತ್ರದ ಹೆಸರು ಕೂಡ ‘ದೇವಕಿ’ ಆಗಿದೆ. ಚಿತ್ರಕ್ಕೆ ಸರಿ ಎನ್ನಿಸುವ ಹೆಸರು ಇರಲಿ ಎಂದು ನಿರ್ದೇಶಕ ಲೋಹಿತ್ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ.

ಅಂದ ಹಾಗೆ ಇದೊಂದು ಹಾರರ್ ಹಾಗೂ ಥ್ರಿಲ್ಲರ್ ಕಥೆಯನ್ನು ಒಳಗೊಂಡಿದೆ. ಇದಾದ ಬಳಿಕ ಇದೇ ಜೋಡಿಯಲ್ಲಿ ‘ಮಮ್ಮಿ-2’ ಸಿನಿಮಾ ಸಹ ಶುರುವಾಗಲಿದೆ. ಸದ್ಯದಲ್ಲಿಯೇ ಫಸ್ಟ್ ಲುಕ್ ಹಾಗೂ ಚಿತ್ರದ ಟೀಸರ್ ಇದೇ ವಾರ ರಿಲೀಸ್ ಆಗುತ್ತಿದೆ. ಇನ್ನು ಈ ಸಿನಿಮಾ ಕನ್ನಡ ಹಾಗೂ ತಮಿಳು ಎರಡು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ.

ಇನ್ನು ಮೊದಲ ಪ್ರಯತ್ನದಲ್ಲಿಯೇ ಹಾರರ್ ಸಿನಿಮಾ ಮಾಡಿದ್ದ ನಿರ್ದೇಶಕ ಲೋಹಿತ್ ಈ ಬಾರಿ ಯಾವ ರೀತಿಯ ಸಿನಿಮಾ ಮಾಡಿದ್ದಾರೆ ಎಂಬ ಕುತೂಹಲ ಮೂಡುತ್ತಿದೆ. ಇನ್ನು ಚಿತ್ರಕ್ಕೆ ಎಚ್. ಸಿ ವೇಣು ಛಾಯಾಗ್ರಹಣ, ನೋಬಿನ್ ಪೌಲ್ ಸಂಗೀತವಿದೆ. ವಿಶೇಷ ಪಾತ್ರವೊಂದರಲ್ಲಿ ‘ಹುಲಿ’ ಕಿಶೋರ್ ನಟಿಸಿದ್ದಾರೆ.

ಗುಲಾಬಿ ಟೀ ಕುಡಿಯಿರಿ, ತೂಕ ಇಳಿಸಿ..!

#priyankaupendra, #newfilm, #devaki, #balkaninews #hourabridge, #kannadasuddigalu

Tags